ಡಿ.16ಕ್ಕೆ ವಿಶೇಷ ಮಕ್ಕಳ ಸ್ಪರ್ಧೆ ಕಲಾಸೌರಭ

udp-12-pv bhandary
Published on

ಉಡುಪಿ: ಆಟಿಸಂ ಸೊಸೈಟಿ, ಡಾ. ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ಕಮಲ್​ ಎ. ಬಾಳಿಗಾ ಚಾರಿಟೇಬಲ್​ ಟ್ರಸ್ಟ್​, ಒನ್​ ಗುಡ್​ ಸ್ಟೆಪ್​ ಸ್ವಯಂ ಸೇವಾಸಂಸ್ಥೆ ಆಶ್ರಯದಲ್ಲಿ ವಿಶೇಷ ಮಕ್ಕಳ ವಿಶೇಷ ಪ್ರತಿಭೆಗಳನ್ನು ಆನಾವರಣಗೊಳಿಸುವ "ಕಲಾಸೌರಭ-&2" ಜಿಲ್ಲಾ ಮಟ್ಟದ ಸ್ಪರ್ಧಾ ಕಾರ್ಯಕ್ರಮ ಡಿ.16ರಂದು ಬೆಳಗ್ಗೆ 9 ರಿಂದ 4 .30ರವರೆಗೆ ಬನ್ನಂಜೆ ನಾರಾಯಣ ಗುರು ಸಭಾಭವನದಲ್ಲಿ ನಡೆಯಲಿದೆ ಎಂದು ಆಟಿಸಂ ಸೊಸೈಟಿ ಸ್ಥಾಪಕ ಗೌರವಾಧ್ಯಕ್ಷ ಡಾ. ಪಿ.ವಿ. ಭಂಡಾರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಳಿಗ್ಗೆ 10ಕ್ಕೆ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಉದ್ಘಾಟಿಸಲಿದ್ದಾರೆ. ಲೆಕ್ಕ ಪರಿಶೋದಕ ಕಮಲಾಕ್ಷ ಕಾಮತ್​, ಜಿಲ್ಲಾ ಸಹಕಾರಿ ಯೂನಿಯನ್​ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ, ಭಾರತೀಯ ವೈದ್ಯಕಿಯ ಸಂಘ ಅಧ್ಯೆ ಡಾ. ರಾಜಲಕ್ಷ್ಮಿ ಕರಾವಳಿ, ತುಳು ರಂಗ ಭೂಮಿ ನಾಟಕ ಕ್ಷೇತ್ರದ ಕಲಾವಿದರಾದ ದೀಪಕ್​ ರೈ ಪಾಣಾಜೆ ಮೊದಲಾದವರು ಪಾಲ್ಗೊಳ್ಳಲಿದ್ದಾರೆ. ಸಾಯಂಕಾಲ ಸಮಾರೋಪ ಸಮಾರಂಭದಲ್ಲಿ ಡಿಎಚ್​ಒ ಡಾ. ಐ.ಪಿ. ಗಡದ್​, ಸಿನಿಮಾ ನಟಿ ಚಂದ್ರಕಲಾ, ಉದ್ಯಮಿ ಸುಭಾಷ್​ ಕಾಮತ್​, ಗಣೇಶ್​ ನಾಯಕ್​ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.
ಆಟಿಸಂ ಸೊಸೈಟಿಯ ಅಧ್ಯಕ್ಷೆ ಮತ್ತು ಕಾರ್ಯಕ್ರಮದ ಆಯೋಜಕಿ ಮುಖ್ಯಸ್ಥೆ ಅಮಿತಾ ಪೈ ಮಾತನಾಡಿ, ಕಾರ್ಯಕ್ರಮದಲ್ಲಿ ಈ ವರ್ಷ ಜಿಲ್ಲೆಯಾದ್ಯಂತ 15 ವಿಶೇಷ ಶಾಲೆಗಳ 225 ವಿಶೇಷ ಮಕ್ಕಳು ಭಾಗವಹಿಸಲಿದ್ದಾರೆ. ವಿವಿಧ ಆಫ್​ ಸ್ಟೇಜ್​ ಆಕರ್ಷಣೆಗಳಾದ ಸ್ಟಾಲ್​ಗಳು ಇರಲಿವೆ. ವ್ಯಂಗ್ಯ ಚಿತ್ರಕಾರ ಸತೀಶ್​ ಆಚಾರ್ಯ ವಿಶೇಷ ಮಕ್ಕಳ ಅಭಿವೃದ್ಧಿಗಾಗಿ ನಿಧಿ ಸಂಗ್ರಹದ ಉದ್ದೇಶದಿಂದ ಸ್ಥಳದಲ್ಲೇ ಕಾರ್ಟೂನ್​ ಗಳನ್ನು ಬರೆದು ಕೊಡಲಿದ್ದಾರೆ. ಇಲ್ಲಿ ಸಂಗ್ರಹವಾಗುವ ಹಣವನ್ನು ವಿಶೇಷ ಮಕ್ಕಳ ನಿಧಿಗೆ ನೀಡಲಿದ್ದಾರೆ ಎಂದರು. ಮನೋವೈದ್ಯ ಡಾ.ವಿರೂಪಾಕ್ಷ ದೇವರಮನೆ, ಸೊಸೈಟಿ ಕಾರ್ಯದರ್ಶಿ ಕೀರ್ತೇಶ್​, ಶ್ರುತಿ ಶೆಟ್ಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net