ಪಟ್ಟಾಧಿಕಾರ ಮಹೋತ್ಸವಕ್ಕೆ ಶ್ರಮಿಸುವೆ

Authority strives for mahotsava
ಗುಳೇದಗುಡ್ಡದ ಗುರುಸಿದ್ಧೇಶ್ವರ ಮಠದಲ್ಲಿ ಹಮ್ಮಿಕೊಂಡಿದ್ದ ಪಟ್ಟಾಭಿಷೇಕ ನಿರ್ವಹಣಾ ಸಭೆಯಲ್ಲಿ ಶಾಸಕ ಭೀಮಸೇನ ಚಿಮ್ಮನಕಟ್ಟಿ, ಚಿತ್ತರಗಿ ಸಂಸ್ಥಾನಮಠದ ಗುರುಮಹಾಂತ ಸ್ವಾಮಿಗಳು, ಶಿರೂರಿನ ಮಹಾಂತತೀರ್ಥ ಬಸವಲಿಂಗ ಸ್ವಾಮಿಗಳು, ಹೊಳೆಹುಚ್ಚೇಶ್ವರ ಮಠದ ಹುಚ್ಚೇಶ್ವರ ಶ್ರೀಗಳು, ನೀಲಕಂಠ ಸ್ವಾಮಿಗಳು ಮತ್ತಿತರರಿದ್ದರು.
Published on

ಗುಳೇದಗುಡ್ಡ: ಪಟ್ಟಣದ ಗುರುಸಿದ್ಧೇಶ್ವರ ಬೃಹನ್ಮಠ ನಾಡಿನಲ್ಲೇ ದೊಡ್ಡ ಹೆಸರು ಮಾಡಿದೆ. ಈಗ ಮಠಕ್ಕೆ ಮೂರನೇ ತಲೆಮಾರಿನ ಪಟ್ಟಾಧಿಕಾರ ಮಹೋತ್ಸವ ನಡೆಯಲಿದ್ದು, ಸಮಾರಂಭದಲ್ಲಿ ಸಮಿತಿ ನನಗೆ ನೀಡಿದ ಯಾವುದೇ ಕೆಲಸವನ್ನು ಅಭಿಮಾನ ಹಾಗೂ ಗೌರವದಿಂದ ಮಾಡುತ್ತೇನೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.

ಪಟ್ಟಣದ ಗುರುಸಿದ್ಧೇಶ್ವರ ಬೃಹನ್ಮಠದಲ್ಲಿ ಶನಿವಾರ ನಡೆದ ಪಟ್ಟಾಭಿಷೇಕ ನಿರ್ವಹಣಾ ಸಮಿತಿ ರಚನೆಗೆ ಕರೆದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ಈ ಭಾಗದ ಶಾಸಕನಾದ ನನಗೆ ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಪುಣ್ಯದ ಕೆಲಸವೇ ಸರಿ ಎಂದರು.

ಶ್ರೀ ಜಗದ್ಗುರು ಬಸವರಾಜ ಪಟ್ಟದಾರ್ಯ ಶ್ರೀಗಳು ಪ್ರಾಸ್ತಾವಿಕವಾಗಿ ಮಾತನಾಡಿ, ಪಟ್ಟಣದ ಶ್ರೀಮಠ ಒಂದು ಜಾತಿಗೆ ಸೀಮಿತವಾದುದಲ್ಲ. ಪಟ್ಟಸಾಲಿ ನೇಕಾರ ಸಮಾಜದ ಮಠ ಎಂದು ಕರೆಯಿಸಿಕೊಂಡರೂ ಎಲ್ಲ ಧರ್ಮ, ಜಾತಿಯ ಭಕ್ತರನ್ನು ಒಳಗೊಂಡು 1937ರಲ್ಲಿ ಸ್ಥಾಪಿತವಾದ ಮಠವಿದು. ಶ್ರೀಮಠದ ತೃತೀಯ ಪೀಠಾಧಿಕಾರಿ ಎಂದು ಶ್ರೀ ಗುರುಬಸವ ದೇವರನ್ನು ಘೋಷಿಸಿದ್ದೂ, ಅವರ ಪಟ್ಟಾಭಿಷೇಕ ಡಿ. 23 ರಂದು ನಡೆಯಲಿದೆ. ಆ ಕಾರ್ಯಕ್ರಮದ ಪೂರ್ವಭಾವಿಯಾಗಿ ಕರೆದ ಈ ಸಭೆಯಲ್ಲಿ ಭಕ್ತಾಧಿಗಳು ಸಮಾರಂಭದ ರೂಪುರೇಷೆಗಳ ನೀಲನಕ್ಷೆ ತಯಾರಿಸಿ ಸ್ವಾಗತ ಸಮಿತಿ ರಚಿಸಿ ಎಂದು ಕೇಳಿಕೊಂಡರು.

ಚಿತ್ತರಗಿ ಸಂಸ್ಥಾನಮಠದ ಗುರುಮಹಾಂತ ಸ್ವಾಮಿಗಳು, ಶಿರೂರಿನ ಮಹಾಂತತೀರ್ಥ ಬಸವಲಿಂಗ ಸ್ವಾಮಿಗಳು, ಹೊಳೆಹುಚ್ಚೇಶ್ವರ ಮಠದ ಹುಚ್ಚೇಶ್ವರ ಶ್ರೀಗಳು, ನೀಲಕಂಠ ಸ್ವಾಮಿಗಳು, ಜನವಾಡದ ಮಲ್ಲಿಕಾರ್ಜುನ ಸ್ವಾಮೀಜಿ, ಅಭಿನವ ಒಪ್ಪತ್ತೇಶ್ವರ ಶ್ರೀಗಳು ಮಾತನಾಡಿದರು.

ಗುರುಬಸವ ದೇವರು, ಮಾಜಿ ಶಾಸಕ ರಾಜಶೇಖರ ಶೀಲವಂತ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಜೆಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರದ, ಕಾಂಗ್ರೆಸ್ ಮುಖಂಡ ಹೊಳಬಸು ಶೆಟ್ಟರ್, ಚಂದ್ರಕಾಂತ ಶೇಖಾ, ಸಂಜಯ ಬರಗುಂಡಿ, ಅಶೋಕ ಬರಗುಂಡಿ, ಸಂಗನಬಸಪ್ಪ ಚಿಂದಿ, ರಾಜು ಜವಳಿ, ಮಲ್ಲೇಶಪ್ಪ ಬೆಣ್ಣಿ, ಶಶಿಧರ ದೇಸಾಯಿ, ಸಿ.ಎಂ. ಚಿಂದಿ, ಗೌರಮ್ಮ ಕಲಬುರ್ಗಿ, ಭಾಗ್ಯಾ ಉದ್ನೂರ, ಶಿವಾನಂದ ಎಣ್ಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net