ಗ್ರಾಪಂ ವ್ಯಾಪ್ತಿಯ ಹಳ್ಳಿಗಳ ನಗೇಗಾ ಕಾರ್ಮಿಕರ ಸಮಸ್ಯೆಗೆ ಶೀಘ್ರ ಪರಿಹಾರ

GP
ಹನುಮಸಾಗರ ಸಮೀಪದ ಯರಗೇರಾ ಗ್ರಾಪಂನಲ್ಲಿ ಅಧ್ಯಕ್ಷ ಬಸವರಾಜ ಶೆಟ್ಟರ, ಉಪಾಧ್ಯಕ್ಷೆ ಫಕೀರಮ್ಮ ತಳ್ಳಿಕೆರಿ ಸೋಮವಾರ ಅಧಿಕಾರ ಸ್ವೀಕರಿಸಿದರು. ಪಿಡಿಒ ವಿಶ್ವನಾಥ ರಾಥೋಡ, ಕಾರ್ಯದರ್ಶಿ ಶೇಖದಾದು ಇತರರಿದ್ದರು.
Published on

ಹನುಮಸಾಗರ: ಸಮೀಪದ ಯರಗೇರಾ ಗ್ರಾಮ ಪಂಚಾಯಿತಿಯಲ್ಲಿ ಸೋಮವಾರ ನೂತನ ಅಧ್ಯಕ್ಷ ಬಸವರಾಜ ಶೆಟ್ಟರ ಹಾಗೂ ಉಪಾಧ್ಯಕ್ಷೆ ಫಕೀರಮ್ಮ ತಳ್ಳಿಕೆರಿ ಅಧಿಕಾರ ಸ್ವೀಕರಿಸಿದರು.

ಅಧ್ಯಕ್ಷ ಬಸವರಾಜ ಶೆಟ್ಟರ ಮಾತನಾಡಿ, ಗ್ರಾಪಂನಿಂದ ಸಾರ್ವಜನಿಕರಿಗೆ ದೊರೆಯಬೇಕಾದ ಮೂಲಭೂತ ಸೌಲಭ್ಯಗಳನ್ನು ತಲುಪಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಗ್ರಾಪಂ ವ್ಯಾಪ್ತಿಯ ಹಳ್ಳಿಗಳ ನರೇಗಾ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕುಡಿಯುವ ನೀರು ಹಾಗೂ ಸ್ವಚ್ಛತೆಗೆ ಮೊದಲ ಆದ್ಯತೆ. ಎಲ್ಲ ಸದಸ್ಯರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು ಎಂದರು.

ಪಿಡಿಒ ವಿಶ್ವನಾಥ ರಾಥೋಡ, ಕಾರ್ಯದರ್ಶಿ ಶೇಖದಾದು, ಗ್ರಾಪಂ ಸದಸ್ಯರಾದ ಮೀನಾಕ್ಷಿ ರಾಥೋಡ, ಲಕ್ಷ್ಮೀ ನೆರತೆಲಿ, ಬಸವರಾಜ ಗಡಾದ, ರೇಖಪ್ಪ ಪವಾರ, ಕಸ್ತೂರೆವ್ವ ಕೊಳ್ಳಿ, ಶಂಕ್ರಮ್ಮ ಬೇವಿನಮಠ, ಮಾಸಮ್ಮ ಚಿಕನಾಳ, ಗಂಗಮ್ಮ ಯರಗೇರಾ, ಮಾಬುಸಾಬ್ ಮುದಗಲ್, ಬಂಗಾರಪ್ಪ ಹರಿಜನ, ಗ್ರಾಮಸ್ಥರಾದ ಧರ್ಮಣ್ಣ ಗಡಾದ, ಶರಣಪ್ಪ ಬಂಡಿ, ಚಿದಾನಂದ ಹುಗಾರ, ಮಹೇಶ ನೆರತೆಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net