ಹಲವು ಪ್ರಥಮಗಳ ಸಾಧಕಿ ಸಾವಿತ್ರಿಬಾಯಿ ಫುಲೆ: ಲೇಖಕಿ ಮಲ್ಲಿಕಾ ಬಸವರಾಜು ಬಣ್ಣನೆ

03Tmk_SavithriBhai_Pule new
Published on

ತುಮಕೂರು: ಹೆಣ್ಣಿಗೆ ಅಕ್ಷರದ ಮಹತ್ವ ತಿಳಿಸಿದ ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಎಂದು ಲೇಖಕಿ ಮಲ್ಲಿಕಾ ಬಸವರಾಜು ಬಣ್ಣಿಸಿದರು.

ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರ ಹಾಗೂ ವಿವಿ ಕಲಾ ಕಾಲೇಜಿನ ಸಹಯೋಗದಲ್ಲಿ ಶುಕ್ರವಾರ ಸಾವಿತ್ರಿಬಾಯಿಫುಲೆ ನೆನಪು ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಸಾವಿತ್ರಿಬಾಯಿಫುಲೆ ಶಾಲೆಯನ್ನು ತೆರೆದು ಒಂಭತ್ತು ಹೆಣ್ಣುಮಕ್ಕಳಿಗೆ ಶಿಕ್ಷಣವನ್ನು ಕೊಟ್ಟರು. ಸಮಾಜದಲ್ಲಿ ನಡೆದ ಅವಮಾನ, ದೌರ್ಜನ್ಯಗಳನ್ನು ಹಾಗೂ ಅಡೆತಡೆಗಳನ್ನು ದಾಟಿನಡೆದ ಧೀರ ಮಹಿಳೆ ಸಾವಿತ್ರಿಬಾಯಿ ಫುಲೆ ಎಂದು ಬಣ್ಣಿಸಿದರು.

ಸ್ತ್ರೀ ಶಿಕ್ಷಣ, ವಿಧವಾ ವಿವಾಹ ಪ್ರೋತ್ಸಾಹಿಸಿದ ಸಾವಿತ್ರಿಬಾಯಿ ಫುಲೆ, ಬಾಲ್ಯ ವಿವಾಹ, ಸತಿಸಹಗಮನ ಪದ್ಧತಿಯ ನಿರ್ಮೂಲನೆ ಮಾಡುವುದರಲ್ಲಿ ಮೊದಲಿಗರೆನಿಸಿದ್ದರು. ಎಲ್ಲ ಮೊದಲುಗಳ ಮಾದರಿ ಸಾವಿತ್ರಿಬಾಯಿ ಫುಲೆ ಎಂದರು. ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಂಡು ಶಿಕ್ಷಣವನ್ನು ಪಡೆದು ಉನ್ನತ ಮಟ್ಟದ ಕಡೆಗೆ ಸಾಗಬೇಕು. ಹೆತ್ತ ತಂದೆ ತಾಯಿಗೆ ಬೆಲೆ ತರುವಂತಹವರಾಗಬೇಕು ಎಂದು ವಿವಿ ಕುಲಪತಿ ಪ್ರೊ ವೈ.ಎಸ್.ಸಿದ್ದೇಗೌಡ ಹೇಳಿದರು.

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬಂತೆ ಮಹಿಳಾ ಶಿಕ್ಷಣಕ್ಕೆ ಮೊದಲ ಪ್ರಾಶಸ್ತ್ಯ ಕೊಟ್ಟವರು ಫುಲೆ ದಂಪತಿ. ಅವರ ಪರಿಶ್ರಮವನ್ನು ಎಲ್ಲರೂ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದು ವಿವಿ ಕಲಾಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ರಾಮಚಂದ್ರಪ್ಪ ತಿಳಿಸಿದರು.

ಮಹಿಳಾ ಅದ್ಯಯನ ಕೇಂದ್ರದ ಸಂಯೋಜಕಿ ಡಾ.ಜ್ಯೋತಿ, ವಿದ್ಯಾರ್ಥಿ ಕ್ಷೇಮಪಾಲನ ವಿಭಾಗದ ನಿರ್ದೇಶಕ ಪ್ರೊ.ಎಂ.ಕೊಟ್ರೇಶ್ , ಅರ್ಥಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಜಾಯ್ ನೆರೆಲ್ಲಾ ಉಪಸ್ಥಿತರಿದ್ದರು.

ಜಯಂತಿ ಆಚರಣೆ ಸ್ವಾಗತಾರ್ಹ

ಕೊರಟಗೆರೆ : ರಾಜ್ಯ ಸರ್ಕಾರ ಸಾವಿತ್ರಿಬಾಯಿುಲೆ ಜಯಂತಿಯನ್ನು ಶಿಕ್ಷಕಿಯರ ದಿನಾಚರಣೆ ಎಂದು ಘೊಷಣೆ ಮಾಡಿ ಜ.3ರಂದು ಶಾಲಾ ಕಾಲೇಜುಗಳಲ್ಲಿ ಆಚರಣೆಗೆ ಆದೇಶ ಮಾಡಿರುವುದನ್ನು ಕೊರಟಗೆರೆ ತಾಲೂಕು ಬಲಿಜ ಸಮುದಾಯ ಸ್ವಾಗತಿಸಿದೆ ಎಂದು ತಾಲೂಕು ಬಲಿಜ ಸಂಘದ ಅಧ್ಯಕ್ಷ ಎನ್.ಪದ್ಮನಾಭ್ ತಿಳಿಸಿದ್ದಾರೆ. ಸತ್ಯಶೋಧಕ ಸಮಾಜದ ಸಂಸ್ಥಾಪಕರಾಗಿದ್ದ ತಮ್ಮ ಪತಿ ಜ್ಯೋತಿಬಾುಲೆ ಅವರ ಸಹಕಾರ ಮತ್ತು ಮಾರ್ಗದರ್ಶನದಲ್ಲಿ ಶೈಕ್ಷಣಿಕ ಸೇವೆ ಮುಂದುವರಿಸಿ ಇಂಡಿಯಾನ್ ಫಸ್ಟ್ ಲೇಡಿ ಟೀಚರ್ ಪ್ರಶಸ್ತಿಯನ್ನು ಬ್ರಿಟಿಷರಿಂದ ಪಡೆದು ಸನ್ಮಾನಿತರಾದರು, ಇಂತಹ ಆದರ್ಶ ಮಹಿಳೆಯ ಜನ್ಮದಿನವನ್ನು ಶಿಕ್ಷಕಿಯರ ದಿನವನ್ನಾಗಿ ಆಚರಿಸಲು ಸರ್ಕಾರ ಮುಂದಾಗಿರುವುದು ಮಾದರಿ ಬೆಳವಣಿಗೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net