ಸುತ್ತೂರು ಮಠಕ್ಕೆ ಆಸ್ಟ್ರೇಲಿಯಾದ ಸಂಸದೀಯ ನಿಯೋಗ ಭೇಟಿ

9
Published on

ನಗರದ ಸುತ್ತೂರು ಮಠಕ್ಕೆ ಗುರುವಾರ ಆಸ್ಟ್ರೇಲಿಯಾದ ಸಂಸದೀಯ ನಿಯೋಗ ಭೇಟಿ ನೀಡಿ, ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.

ನಿಯೋಗವು ಭಾರತಕ್ಕೆ ವಿವಿಧ ಕ್ಷೇತ್ರಗಳ ಅಧ್ಯಯನ ನಡೆಸಲು ಆಗಮಿಸಿದೆ. ಅಸೆಂಬ್ಲಿಯ ಸಭಾಧ್ಯಕ್ಷೆ ಮಿಚೆಲ್ ರಾಬರ್ಟ್ಸ್ ಅಧ್ಯಕ್ಷತೆಯಲ್ಲಿ ವಿರೋಧ ಪಕ್ಷದ ನಾಯಕ ಡಾ.ಡೇವಿಡ್ ಹನಿ, ಶಾಸಕರಾದ ಡಾ.ಜಗದೀಶ್ ಕೃಷ್ಣನ್, ಕ್ಯಾಸಂಡ್ರ ರೋ, ಡೇವಿಡ್ ಸ್ಕೈಫ್ ಒಳಗೊಂಡ ತಂಡ ಸುತ್ತೂರು ಮಠಕ್ಕೆ ಭೇಟಿ, ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯೊಂದಿಗೆ ಸಮಾಲೋಚಿಸಿದರು.

ಜೆಎಸ್‌ಎಸ್ ಸಂಸ್ಥೆಗಳು ಆಸ್ಟ್ರೇಲಿಯಾದ ವಿವಿಧ ವಿಶ್ವವಿದ್ಯಾಲಯಗಳೊಂದಿಗೆ ಹೊಂದಿರುವ ಪರಸ್ಪರ ಒಡಂಬಡಿಕೆಗಳ ವಿವರಗಳನ್ನು ಅವರ ಗಮನಕ್ಕೆ ತರಲಾಯಿತು. ಜೆಎಸ್‌ಎಸ್ ಸಂಸ್ಥೆಗಳ ಅಂತಿಮ ವರ್ಷದ ವಿದ್ಯಾರ್ಥಿಗಳು ಹಾಗೂ ಬೋಧಕರು ಅಲ್ಲಿಯ ವಿವಿಧ ವಿಶ್ವವಿದ್ಯಾಲಯಗಳೊಂದಿಗೆ ಶೈಕ್ಷಣಿಕ ವಿನಿಮಯಗಳ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡು, ಭಾರತ ಮತ್ತು ಆಸ್ಟ್ರೇಲಿಯಾಗಳ ನಡುವಿನ ಸಂಬಂಧ ಮತ್ತಷ್ಟು ವೃದ್ಧಿಯಾಗಲು ಪ್ರಯತ್ನಿಸುವುದಾಗಿ ತಿಳಿಸಿದರು. ನಿಯೋಗದ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net