ಜಪ, ತಪ, ಧ್ಯಾನಕ್ಕೆ ಶುಭಕರ ಮಾಸ

11 RON- 1
Published on

ರೋಣ: ಶ್ರಾವಣ ಮಾಸವು ಧಾರ್ಮಿಕವಾಗಿ ಬಹಳ ಮಹತ್ವದ್ದಾಗಿದೆ. ಇದು ಜಪ, ತಪ, ಧ್ಯಾನ ಮತ್ತು ದಾನಕ್ಕೆ ಅತ್ಯಂತ ಶುಭಕರವಾದ ಮಾಸ. ಈ ಮಾಸದಲ್ಲಿ ಹಮ್ಮಿಕೊಳ್ಳುವ ಧಾರ್ಮಿಕ ಕಾರ್ಯಗಳಿಂದ ಪುಣ್ಯ ಪ್ರಾಪ್ತವಾಗುತ್ತದೆ ಎಂದು ರೋಣ ಗುಲಗಂಜಿಮಠದ ಶ್ರೀ ಗುರುಪಾದ ದೇವರು ಹೇಳಿದರು.

ಪಟ್ಟಣದ ಶಿವಾನಂದ ನಗರದಲ್ಲಿ ಶ್ರಾವಣ ಮಾಸದ ಅಂಗವಾಗಿ ಶ್ರೀಬಸವೇಶ್ವರ ಮಹಿಳಾ ಮಂಡಳ ವತಿಯಿಂದ ಹಾದಿ ಬಸವೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಅನ್ನಸಂತರ್ಪಣೆ ಹಾಗೂ ಭಜನಾ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ದೇವಸ್ಥಾನಗಳು ಧಾರ್ಮಿಕ ಶ್ರದ್ಧಾಭಕ್ತಿಯ ಕೇಂದ್ರಗಳು, ದೇವಸ್ಥಾನಗಳು ಬೆಳವಣಿಗೆ ಹೊಂದಿದರೆ ಸಮಾಜ ಅಭಿವೃದ್ಧಿ ಹೊಂದುತ್ತದೆ. ಸಮಾಜದ ಅಭಿವೃದ್ಧಿಯಿಂದ ಸಾಮರಸ್ಯ ಬೆಳೆಯುತ್ತದೆ ಎಂದರು.

ಹಾದಿ ಬಸವೇಶ್ವರ ಮಹಿಳಾ ಮಂಡಳದಿಂದ ಭಜನೆ, ಅಭಿಷೇಕ, ಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಿತು.

ಮಹಿಳಾ ಮಂಡಲದ ಅಧ್ಯಕ್ಷೆ ಶೇಖಮ್ಮ ರಾಮಣ್ಣವರ, ಸದಸ್ಯೆಯರಾದ ಶೈಲಾ ಕಮತರ, ವರದಾ ವಿರಕ್ತಮಠ, ಪಾರ್ವತಿ ರೊಟ್ಟಿ, ಜಯಮ್ಮ ಹಿರೇಮಠ, ಪ್ರಭುಗೌಡ ಕಮತರ, ಬಸಯ್ಯ ಬಸಿದೋಣಿಮಠ, ಮುತ್ತಣ್ಣ ಆರ್ಮಿ, ಮಲ್ಲಪ್ಪ ರಾಮನ್ನವರ, ಹನಮಂತ ತಳವಾರ ಇದ್ದರು. ಜಗದೀಶ ಭಜಂತ್ರಿ ಮತ್ತು ಮೃತ್ಯುಂಜಯ ವಿರಕ್ತಮಠ ಕಾರ್ಯಕ್ರಮ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net