ಧರ್ಮಸ್ಥಳ ಯೋಜನೆ ಬಡವರಿಗೆ ಪೂರಕ

14 ard01
ಔರಾದ್‌ನ ಕನಕ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆ ವತಿಯಿಂದ ಏರ್ಪಡಿಸಿದ್ದ ಗಾಂಧಿ ಸ್ಮÈರಣೆ ಮತ್ತು ಸಾಮೂಹಿಕ ಪೂಜಾ ಕಾರ್ಯಕ್ರಮಕ್ಕೆ ಶಾಸಕ ಪ್ರಭು ಚವ್ಹಾಣ್ ಚಾಲನೆ ನೀಡಿದರು. ಪಪಂ ಅಧ್ಯಕ್ಷೆ ಸರುಬಾಯಿ ಘುಳೆ, ಪ್ರವೀಣಕುಮಾರ, ಶಾಲಿವಾನ ಉದಗೀರೆ, ಶಿವರಾಜ ಅಲಮಾಜೆ, ರಾಮಶೆಟ್ಟಿ ಪನ್ನಾ ಳೆ, ಉಮಾಕಾಂತ ಪಾಟೀಲï, ಮಡಿವಾಳಪ್ಪ, ರಾಘವೇಂದ್ರ ಗೌಡ ಇತರರಿದ್ದರು.
Published on

ಔರಾದ್: ಹನಿ ಹನಿ ಕೂಡಿದರೆ ಹಳ್ಳ ತೆನೆ ತೆನೆ ಕೂಡಿದರೆ ರಾಶಿ ಎಂಬ ಆಡು ಮಾತಿಗೆ ಮತ್ತೊಂದು ಹೆಸರೇ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ. ಡಾ.ವೀರೇಂದ್ರ ಹೆಗ್ಗಡೆಯವರ ಕನಸಿನ ಕೂಸಾದ ಯೋಜನೆ ಇಂದು ಕರ್ನಾಟಕದ ಹಳ್ಳಿ ಹಳ್ಳಿಯಲ್ಲೂ ತಲೆಯೆತ್ತಿ ರಾಮರಾಜ್ಯದ ಕನಸು ನನಸು ಮಾಡುವಲ್ಲಿ ಶ್ರಮ ವಹಿಸುತ್ತಿದೆ ಎಂದು ಶಾಸಕ ಪ್ರಭು ಚವ್ಹಾಣ್ ಹೇಳಿದರು.

ಪಟ್ಟಣದ ಕನಕ ಭವನದಲ್ಲಿ ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗಾಂಧಿ ಸ್ಮರಣೆ ಮತ್ತು ಸಾಮೂಹಿಕ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಡಾ.ವೀರೇಂದ್ರ ಹೆಗ್ಗಡೆ ಅವರ ಕಾರ್ಯ ಶ್ಲಾಘನೀಯವಾಗಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಹೆಗ್ಗಡೆ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿ ಅವರ ಪುಣ್ಯದ ಕೆಲಸ ಕಾರ್ಯಗಳನ್ನು ಹೊಗಳಿದ್ದಾರೆ. ಕೆರೆಗಳ ಹೂಳೆತ್ತುವ ಜತೆಗೆ ಮಹಿಳಾ ಸಂಘಗಳ ಮೂಲಕ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಒದಗಿಸುವಲ್ಲಿ ಧರ್ಮಸ್ಥಳ ಸಂಸ್ಥೆ ಅಗತ್ಯ ಸಹಕಾರ ನೀಡುತ್ತಿದೆ. ಈ ಯೋಜನೆಗಳಲ್ಲಿ ಮಹಿಳೆಯರು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಧರ್ಮಸ್ಥಳ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣಕುಮಾರ ಮಾತನಾಡಿ, ಯೋಜನೆಯಲ್ಲಿ ಹತ್ತು ಹಲವಾರು ಜನಪರ ಯೋಜನೆಗಳು ಸಮಾಜದ ಪ್ರಗತಿಗೆ ಪೂರಕವಾಗಿವೆ. ಪೂಜ್ಯರ ಕನಸಿನಂತೆ ಈ ಭಾಗದಲ್ಲಿ ಕ್ಷೀರ ಕ್ರಾಂತಿಯಲ್ಲಿ ಬೀದರ್ ಜಿಲ್ಲೆ ಉತ್ತಮ ನಾಂದಿ ಹಾಡುತ್ತಿದೆ. ಕೇವಲ ೧೮ ಸಾವಿರ ಲೀ.ಹಾಲಿನ ಉತ್ಪಾದನೆ ಇದ್ದಿದ್ದು ಈಗ ೬೦ ಸಾವಿರ ಲೀಟರ್‌ಕ್ಕಿಂತಲೂ ಹೆಚ್ಚಾಗಿದೆ. ಗಡಿ ತಾಲೂಕಿನ ಹಲವಾರು ಕುಟುಂಬಗಳು ಯೋಜನೆಯ ಲಾಭ ಪಡೆದು ಸ್ವಾವಲಂಬಿ ಬದುಕು ಸಾಗಿಸುತ್ತಿದ್ದಾರೆ ಎಂದರು.

ಜಿಲ್ಲಾ ಜನ ಜಾಗೃತಿ ವೇದಿಕೆ ಉಪಾಧ್ಯಕ್ಷ ಡಾ. ಶಾಲಿವಾನ ಉದಗೀರೆ ಮಾತನಾಡಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸರುಬಾಯಿ ಘುಳೆ, ಶಿವರಾಜ ಅಲಮಾಜೆ, ರಾಮಶೆಟ್ಟಿ ಪನ್ನಾ ಳೆ, ಜನ ಜಾಗ್ರತಿ ವೇದಿಕೆ ಜಿಲ್ಲಾ ಸದಸ್ಯ ಮಲ್ಲಪ್ಪ ಗೌಡ, ಉಮಾಕಾಂತ ಪಾಟೀಲ್, ಮಡಿವಾಳಪ್ಪ, ಲೋಕೇಶ ಭಾಲ್ಕೆ, ಲಕ್ಷ್ಮೀಕಾಂತ, ಮಹಾದೇವ, ಸಂಗೀತಾ, ಲಕ್ಷ್ಮೀ, ಸುರೇಖಾ, ಮಹಾನಂದಾ, ಆಶಾ, ಶ್ರೀದೇವಿ, ನೆಹರು ಇತರರಿದ್ದರು. ತಾಲೂಕು ಯೋಜನಾಧಿಕಾರಿ ರಾಘವೇಂದ್ರ ಗೌಡ ಸ್ವಾಗತಿಸಿದರು. ವಲಯ ಮೇಲ್ವಿಚಾರಕ ಅನಿಲ ದಾವಣೆ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net