ಚಂದ್ರಯಾನ 3ಯಲ್ಲಿ ಜೋಜನಾದ ಸತೀಶ ಸೇವೆ

sathish
Published on

ಔರಾದ್: ಚಂದ್ರಯಾನ-೩ ಯೋಜನೆಯಲ್ಲಿ ತಾಲೂಕಿನ ಜೋಜನಾ ಗ್ರಾಮದ ಸತೀಶ ಕುಮಾರ ಕಾರ್ಯ ನಿರ್ವಹಿಸಿ, ಹುಟ್ಟೂರಿಗೆ ಕೀರ್ತಿ ತಂದಿದ್ದಾರೆ. ಸತೀಶಕುಮಾರ ಬಡತನದಲ್ಲಿಯೇ ಹುಟ್ಟಿ ಸ್ವ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ, ಸಂತಪುರದ ಸುಭಾಶ್ಚಂದ್ರ ಬೋಸ್ ಶಾಲೆಯಲ್ಲಿ ಪ್ರೌಢ ಶಿಕ್ಷಣ ಮುಗಿಸಿದ್ದಾರೆ.

ಬೀದರ್ ಸರ್ಕಾರಿ ಕೈಗಾರಿಕಾ ಸಂಸ್ಥೆಯಲ್ಲಿ ಐಟಿಐ ಪೂರ್ಣಗೊಳಿಸಿದ್ದಾರೆ. ೨೦೧೨ರಿಂದ ಬೆಂಗಳೂರಿನ ಇಸ್ರೋ ಸಂಸ್ಥೆಯಲ್ಲಿ ಸೀನಿಯರ್ ಟೆಕ್ನಿಕಲ್ ಅಸಿಸ್ಟಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಇದೇ ವಿಷಯದಲ್ಲಿ ಹೆಚ್ಚಿನ ಅಧ್ಯಯನಕ್ಕಾಗಿ ಇಂಡೋನೆಷಿಯಾಕ್ಕೆ ತೆರಳಿದ್ದಾರೆ. ಗ್ರಾಮದ ಯುವಕ ದೇಶವೇ ಹೆಮ್ಮೆ ಪಡುವಂಥ ಯೋಜನೆಯ ಭಾಗವಾಗಿದ್ದಕ್ಕೆ ಗ್ರಾಮಸ್ಥರು, ಶಾಲೆ, ಕಾಲೇಜಿನ ಶಿಕ್ಷಕರು, ಉಪನ್ಯಾಸಕರು ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net