ವಿವಿಧ ಕಚೇರಿಗೆ ಮುನೀಶ್ ಮೌದ್ಗಿಲ್ ಭೇಟಿ

27_ard_01
ಔರಾದ್ ತಾಲೂಕಿನ ಸಂತಪುರ ಗ್ರಾಪಂ ಕಚೇರಿಗೆ ಬುಧವಾರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮುನೀಶ್ ಮೌದ್ಗಿಲ್ ಭೇಟಿ ನೀಡಿ ಉದ್ಯಾನವನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಾಪಂ ಅಧ್ಯಕ್ಷೆ ಮಹಾದೇವಿ ಪಾಟೀಲ್, ಡಿಸಿ ಗೋವಿಂದರಡ್ಡಿ, ಜಿಪಂ ಸಿಇಒ ಶಿಲ್ಪಾ ಎಂ., ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ, ತಾಪಂ ಇಒ ಬೀರೇಂದ್ರಸಿಂಗ್ ಠಾಕೂರ್, ಪಿಡಿಒ ಸಂತೋಷ ಪಾಟೀಲ್ ಇದ್ದರು.
Published on


ಔರಾದ್: ತಾಲೂಕಿನ ವಿವಿಧ ಗ್ರಾಮಗಳ ಕಚೇರಿಗಳಿಗೆ ಬುಧವಾರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮುನೀಶ್ ಮೌದ್ಗಿಲ್ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ಮಾಡಿದರು.

ಕೌಠಾ(ಬಿ)ದ ನಾಗರಿಕ ಸೇವಾ ಕೇಂದ್ರ, ಬಲ್ಲೂರದ ಜೆಜೆಎಂ ಕಾಮಗಾರಿ, ಕೌಡಗಾಂವ ಸರ್ಕಾರಿ ಪ್ರೌಢಶಾಲೆಯಲ್ಲಿ ಭೌತಿಕ ಸೌಲಭ್ಯ ಮತ್ತು ಮಕ್ಕಳ ಕಲಿಕೆ ಬಗ್ಗೆ ಮಾಹಿತಿ ಪಡೆದ ನಂತರ ಕ್ರೀಡಾ ಲ್ಯಾಬ್ ನೋಡಿ ಹರ್ಷ ವ್ಯಕ್ತಪಡಿಸಿದರು.

ಸಂತಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಒಳರೋಗಿ ವಿಭಾಗ, ಚುಚ್ಚುಮದ್ದು ಕೋಣೆ, ಬಾಣಂತಿಯರ ವಾರ್ಡ್ ವೀಕ್ಷಿಸಿ ಸರ್ಕಾರದ ಸೌಲಭ್ಯಗಳ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ಮಾಹಿತಿ ಪಡೆದರು. ಬಳಿಕ ಕಚೇರಿಗೆ ತೆರಳಿಗೆ ನಾಗರಿಕರಿಗೆ ನೀಡುತ್ತಿರುವ ಸೇವೆ, ನೌಕರರ ಜವಾಬ್ದಾರಿ ಕುರಿತು ಸಮಗ್ರ ಮಾಹಿತಿ ಪಡೆದು ತಹಸಿಲ್‌ನತ್ತ ಹೆಜ್ಜೆ ಹಾಕಿದರು.

ಗ್ರಾಪಂ ಅಧ್ಯಕ್ಷೆ ಮಹಾದೇವಿ ಪಾಟೀಲ್, ಡಿಸಿ ಗೋವಿಂದರಡ್ಡಿ, ಜಿಪಂ ಸಿಇಒ ಶಿಲ್ಪಾ ಎಂ., ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ, ತಾಪಂ ಇಒ ಬೀರೇಂದ್ರಸಿಂಗ್ ಠಾಕೂರ್, ಪಿಡಿಒ ಸಂತೋಷ ಪಾಟೀಲ್, ಉಪತಹಸೀಲ್ದಾರ್ ಗುರುನಾಥ ಬಿರಾದಾರ, ಕಂದಾಯ ನಿರೀಕ್ಷಕ ಬಾಲಾಜಿ ನೈಕವಾಡೆ, ಚಂದ್ರಕಾಂತ ಪಾಟೀಲ್, ಹಮೀದ್ ಅಲಿ, ನಕುಶಾ, ದಯಾನಂದ, ಸುಕನ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net