ಲೋಕ ಅದಾಲತ್‌ನಲ್ಲಿ ಒಂದಾದ ಜೋಡಿ

oplus_131074
ಔರಾದ್‌ನಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ರಾಜಕುಮಾರ ಮತ್ತು ಪ್ರಿಯಾಂಕಾ ದಂಪತಿ ಐದು ವರ್ಷಗಳ ನಂತರ ಪರಸ್ಪರ ಹಾರ ಹಾಕಿಕೊಂಡು ಒಂದಾದರು. ಹಿರಿಯ ಸಿವಿಲ್ ನ್ಯಾಯಾಧೀಶ ಹಾಜಿ ಹುಸೇನಸಾಬ್ ಯಾದವಾಡ, ವಕೀಲರ ಸಂಘದ ಅಧ್ಯಕ್ಷ ಸಂದೀಪ ಮೇತ್ರೆ, ಬಾಲಾಜಿ ಕಂಬಾರ, ರವಿಕಾಂತ ನೌಬಾದೆ, ಬಾಲಾಜಿ ಉಪಾಸೆ ಇತರರಿದ್ದರು.
Published on

ಔರಾದ್: ಕೌಟುಂಬಿಕ ಕಲಹದಿಂದ ಹಲವು ವರ್ಷಗಳಿಂದ ದೂರವಾಗಿ ವಿಚ್ಛೇದ ಪಡೆಯುವ ಸಂಬಂಧ ನ್ಯಾಯಾಲಯದ ಮೆಟ್ಟಿಲು ಏರಿದ್ದ ದಂಪತಿಯನ್ನು ಇದೀಗ ಲೋಕ ಅದಾಲತ್‌ನಲ್ಲಿ ಜೋಡಿಗಳ ಮನವೊಲಿಸಿ ಒಂದಾಗಿಸಿದೆ.

ಪಟ್ಟಣದಲ್ಲಿ ಶನಿವಾರ ಆಯೋಜಸಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಹೆಡಗಾಪುರ ಗ್ರಾಮದ ರಾಜಕುಮಾರ ಮತ್ತು ಪ್ರಿಯಾಂಕಾ ಅವರ ಮನವೊಲಿಸಿ, ರಾಜಿ ಸಂಧಾನ ಮೂಲಕ ಮತ್ತೆ ಐದು ವರ್ಷಗಳ ನಂತರ ಮತ್ತೆ ಒಂದು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

೨೦೦೯ರಲ್ಲಿ ಮದುವೆಯಾದ ದಂಪತಿಗಳು ಸುಮಾರು ೧೦ ವರ್ಷ ಸಂಸಾರಿಕ ಜೀವನ ಮಾಡಿದ್ದು, ಇವರಿಗೆ ೭ ವರ್ಷದ ಪ್ರಶಾಂತ ಎಂಬ ಪುತ್ರನಿದ್ದು, ಇಬ್ಬರ ನಡುವೆ ಪರಸ್ಪರ ಮನಸ್ಥಾಪದಿಂದ ೨೦೧೯ರಲ್ಲಿ ಬೇರೆ ಬೇರೆಯಾಗಿ, ಔರಾದ್‌ನ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ೨೦೨೦ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.

ಹಿರಿಯ ಸಿವಿಲ್ ನ್ಯಾಯಾಧೀಶ ಹಾಜಿ ಹುಸೇನಸಾಬ್ ಯಾದವಾಡ ನೇತೃತ್ವದಲ್ಲಿ ಅದಾಲತ್ ನಡೆಯಿತು. ವಕೀಲರ ಸಂಘದ ಅಧ್ಯಕ್ಷ ಸಂದೀಪ ಮೇತ್ರೆ, ಬಾಲಾಜಿ ಕಂಬಾರ, ರವಿಕಾಂತ ನೌಬಾದೆ, ಬಾಲಾಜಿ ಉಪಾಸೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net