ಸಮಾಜದ ಸಮಸ್ಯೆಗೆ ಸ್ಪಂದಿಸುವ ಕಾಯಕ

31ard01(a)
Published on

ಔರಾದ್: ಖಡ್ಗಕ್ಕಿಂತ ಲೇಖನಿ ಹರಿತವಾಗಿದ್ದು, ಅದರ ಶಕ್ತಿಯಿಂದ ಪತ್ರಕರ್ತರು ಸಮಾಜದ ಪ್ರಗತಿಗೆ ಶ್ರಮಿಸಬೇಕು. ಮಾಧ್ಯಮ ಸಮಾಜದ ಸರ್ವಾಂಗೀಣ ಏಳಿಗೆಗೆ ದಾರಿದೀಪವಾಗಬೇಕು ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.
ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕ ಸೋಮವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
ಸಂಘದ ಜಿಲ್ಲಾಧ್ಯಕ್ಷ ಡಿ.ಕೆ. ಗಣಪತಿ ಮಾತನಾಡಿ, ದುಡ್ಡು ಮಾಡಬೇಕೆಂಬ ಮನೋಭಾವದಿಂದ ಪತ್ರಿಕೋದ್ಯಮಕ್ಕೆ ಬರಬಾರದು. ದಾರಿ ತಪ್ಪುತ್ತಿರುವ ಸಮಾಜವನ್ನು ತಿದ್ದಿ ನ್ಯಾಯ ಒದಗಿಸಲು ಸಿದ್ಧರಿದ್ದರೆ ಪತ್ರಿಕಾ ರಂಗಕ್ಕೆ ಬರಬೇಕು. ಹಂಗಿಗಾಗಿ ಸುದ್ದಿ ಮಾಡಬಾರದು. ಭ್ರಷ್ಟಾಚಾರ ಕಂಡು ಬಂದರೆ ಬರೆದು ವಾಸ್ತವವನ್ನು ಸಮಾಜದ ಮುಂದೆ ಬಿಚ್ಚಿಡಬೇಕು ಎಂದರು.
ಸAಘದ ತಾಲೂಕು ಅಧ್ಯಕ್ಷ ಶಿವಾನಂದ ಮೋಕ್ತೆದಾರ್ ಪ್ರಾಸ್ತಾವಿಕ ಮಾತನಾಡಿ, ಮಾಧ್ಯಮ ರಂಗದ ಗೌರವ ಹೆಚ್ಚಲು ಎಲ್ಲರೂ ಕೂಡಿ ಕೆಲಸ ಮಾಡಿಬೇಕಿದೆ. ಸತ್ಯ ಸುದ್ದಿಗಳನ್ನು ಸಮಾಜಕ್ಕೆ ನೀಡುವ ಮೂಲಕ ಎಲ್ಲರ ಪ್ರೀತಿ ವಿಶ್ವಾಸ ಗಳಿಸೋಣ ಎಂದರು.
ಪತ್ರಕರ್ತ ವಿಶ್ವರಾಧ್ಯ ಹಂಗನಳ್ಳಿ ವಿಶೇಷ ಉಪನ್ಯಾಸ ನೀಡಿ, ಪತ್ರಕರ್ತ ವಸ್ತುನಿಷ್ಠ ವರದಿ ನೀಡುವ ಜತೆಗೆ ಎಲ್ಲರೊಂದಿಗೆ ಅನ್ಯೋನ್ಯದಿಂದ ಬೆರೆತು ಸಮಾಜದ ಹುಳುಕು ಅಳಿಸುವ ಕೆಲಸ ಮಾಡಬೇಕು. ಹಲವು ಸವಾಲುಗಳ ಮಧ್ಯೆ ಗ್ರಾಮೀಣ ವರದಿಗಾರರು ಉತ್ತಮ ವರದಿ ನೀಡುತ್ತಿದ್ದಾರೆ. ವಿನಾಕಾರಣ ಹೊಗಳಿಕೆ ಸುದ್ದಿಗಳನ್ನು ಮಾಡಬಾರದು ಎಂದು ಸಲಹೆ ನೀಡಿದರು.
ಪಪಂ ಮುಖ್ಯಾಧಿಕಾರಿ ಸ್ವಾಮಿದಾಸ, ಪ್ರಮುಖರಾದ ಶಿವಕುಮಾರ ಸ್ವಾಮಿ, ರವೀಂದ್ರ ಸ್ವಾಮಿ, ನಾಗಶೆಟ್ಟಿ ಧರಂಪುರ, ಪೃಥ್ವಿರಾಜ, ಸುನೀಲ್ ಕುಲಕರ್ಣಿ, ಶಿವಕುಮಾರ ಘಾಟೆ, ಸುದೇಶ ಕೊಡ್ಡೆ, ಡಾ.ಶಾಲಿವಾನ್ ಉದಗೀರೆ, ಬಂಡೆಪ್ಪ ಕಂಟೆ, ಶರಣಪ್ಪ ಪಂಚಾಕ್ಷರಿ, ಶ್ರೀಮಂತ ಬಿರಾದಾರ, ಶರಣಪ್ಪ ಚಿಟ್ಮೆ, ಮನ್ಮಥಫ್ಪ ಸ್ವಾಮಿ, ಅಹ್ಮದ್ ಜಂಬಗಿ, ಸುಧೀರ, ರಾಮದಾಸ ಪಾಟೀಲ್, ಶಿವಕುಮಾರ ಬಿರಾದಾರ ಇತರರಿದ್ದರು.
ಸುನೀಲ್ ಜಿರೋಬೆ ಸ್ವಾಗತಿಸಿದರು. ಸಂಜುಕುಮಾರ ಜುಮ್ಮಾ ನಿರೂಪಣೆ ಮಾಡಿದರು. ಅಂಬಾದಾಸ ನೇಳಗಿ ವಂದಿಸಿದರು. ಔರಾದ್, ಕಮಲನಗರ ತಾಲೂಕಿನ ಎಲ್ಲ ಪತ್ರಕರ್ತರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net