ಪ್ರಾಯೋಗಿಕ ಜ್ಞಾನ ಪಡೆದ ಮಕ್ಕಳು

IMG_20230803_115509
Published on

ಔರಾದ್: ಎಕಲಾರ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳು ಗುರುವಾರ ಬೋರಾಳ ಹೊರವಲಯದ ಸಾಮಾಜಿಕ ಹಾಗೂ ಪ್ರಾದೇಶಿಕ ಅರಣ್ಯ ವಲಯ ವ್ಯಾಪ್ತಿಯ ನರ್ಸರಿ ಕೇಂದ್ರಗಳಿಗೆ ಭೇಟಿ ನೀಡಿ, ಸಸಿ ಬೆಳೆಸುವ ನೈಜ ಅನುಭವ ಪಡೆದರು.
ವಿಜ್ಞಾನ ಬೋಧಕ ಬಾಲಾಜಿ ನೇತೃತ್ವದಲ್ಲಿ ಕ್ಷೇತ್ರ ಭೇಟಿ ಕೈಗೊಂಡ ಮಕ್ಕಳು ಅರಣ್ಯೀಕರಣ ಸೇರಿ ಸಸಿಗಳ ಬೆಳವಣಿಗೆಗೆ ಮಣ್ಣು, ಗೊಬ್ಬರ ಹಾಗೂ ಮರಳು ಬಳಕೆ ಕುರಿತು ಮಾಹಿತಿ ಪಡೆದರು.
ಸಾಮಾಜಿಕ ಅರಣ್ಯ ವಲಯ ತಾಲೂಕು ಅಧಿಕಾರಿ ಹಾವಪ್ಪ ಶೆಂಬೆಳ್ಳೆ ಮಾತನಾಡಿ, ನರ್ಸರಿ ಕೇಂದ್ರಗಳಲ್ಲಿ ಸಸಿಗಳನ್ನು ಅತ್ಯಂತ ಕಾಳಜಿಯಿಂದ ಬೆಳೆಸುತ್ತೇವೆ. ನಂತರ ವಿವಿಧ ಗ್ರಾಮಗಳ ಸಾರ್ವಜನಿಕ ಸ್ಥಳಗಳಲ್ಲಿ ರೈತರ ಜಮೀನುಗಳಲ್ಲಿ ಬೆಳೆಸಲು ವಿತರಿಸಲಾಗುತ್ತದೆ. ಸಸಿ ಬೆಳೆಸಲು ಪ್ರೋತ್ಸಾಹ ಧನ ಒದಗಿಸಲಾಗುವುದು ಎಂದರು. ಮಕ್ಕಳ ಕ್ಷೇತ್ರ ಭೇಟಿ ನೆನಪಿಗಾಗಿ ಸಸಿ ನೀಡಿ, ಶುಭ ಹಾರೈಸಿದರು.
ಮಕ್ಕಳು ನರ್ಸರಿಯಲ್ಲಿ ಬೆಳೆದ ಹಲವು ಬಗೆ ಸಸಿ ಕಂಡು ಖುಷಿಪಟ್ಟರು. ಬ್ಯಾಗ್‌ಗಳಲ್ಲಿ ಖುದ್ದು ಮಣ್ಣು ತುಂಬಿ ಸಂಭ್ರಮಿಸಿದರು. ಪ್ರತಿ ಗಿಡಗಳ ಮಹತ್ವ ಮತ್ತು ಬಳಕೆ ವಿವಿಧ ವಿಷಯಗಳ ಬಗ್ಗೆ ಶಿಕ್ಷಕರೊಂದಿಗೆ ಚರ್ಚಿಸಿದರು.
ಸಮೂಹ ಸಂಪನ್ಮೂಲ ವ್ಯಕ್ತಿ ಮಹಾದೇವ ಘುಳೆ, ಮುಖ್ಯ ಶಿಕ್ಷಕ ಪ್ರಭು ಬಾಳೂರೆ, ಅರಣ್ಯ ಇಲಾಖೆ ಸಿಬ್ಬಂದಿ ರಾವಣ ನಾಮಾ, ಶಿವಾಜಿ ರೂಪಚಂದ, ಶಿಕ್ಷಕರಾದ ಜೈಸಿಂಗ್‌ಠಾಕೂರ, ಬಾಲಾಜಿ ಅಮರವಾಡಿ, ಕಿರಣ ಹಿಪ್ಪಳಗಾಂವೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net