ಚಿಕ್ಕಮ್ಮ-ದೊಡ್ಡಮ್ಮ ದೇವರ ಉತ್ಸವಕ್ಕೆ ಚಾಲನೆ

SRP_02-01jpj
ಪಾಲಹಳ್ಳಿ ಗ್ರಾಮದಲ್ಲಿ ಶ್ರೀ ಚಿಕ್ಕಮ್ಮ ಹಾಗೂ ದೊಡ್ಡಮ್ಮ ದೇವರಿಗೆ ಗ್ರಾಮಸ್ಥರು ಪೂಜೆ ಸಲ್ಲಿಸಿದರು.
Published on

ಶ್ರೀರಂಗಪಟ್ಟಣ: ತಾಲೂಕಿನ ಪಾಲಹಳ್ಳಿ ಗ್ರಾಮದಲ್ಲಿ 3 ದಿನ ನಡೆಯುವ ಶ್ರೀ ಚಿಕ್ಕಮ್ಮ-ದೊಡ್ಡಮ್ಮ ದೇವರ ಉತ್ಸವಕ್ಕೆ ಮಂಗಳವಾರ ಗ್ರಾಮಸ್ಥರ ಸಮ್ಮುಖದಲ್ಲಿ ಚಾಲನೆ ದೊರೆಯಿತು.

ಗ್ರಾಮ ಹೊರವಲಯದ ವಿರಿಜಾ ನಾಲೆಯಲ್ಲಿ ಅವಳಿ ದೇವತೆಗಳ ಉತ್ಸವ ಮೂರ್ತಿಗೆ ದೇವರ ಗುಡ್ಡಪ್ಪ ದಿನೇಶ್ ಮಡಿಪೂಜೆ ಹಾದಿಯಾಗಿ ಸಂಪ್ರದಾಯ ಬದ್ಧ ಪೂಜೆ ನೆರವೇರಿಸಿದರು. ಬಳಿಕ ಶಂಖ-ಜಾಗಟೆಗಳ ನಾದದೊಂದಿಗೆ ಉತ್ಸವವನ್ನು ಗ್ರಾಮಕ್ಕೆ ಕರೆತರಲಾಯಿತು.

ಈ ವೇಳೆ ರಸ್ತೆಯುದ್ದಕ್ಕೂ ದೇವರಿಗೆ ಪಂಜು, ಕರ್ಪೂರ ಸೇವೆ ಹಾಗೂ ಈಡುಗಾಯಿ ಅರ್ಪಿಸಿ ಜಯಘೋಷ ಮೊಳಗಿಸಲಾಯಿತು. ಈ ವೇಳೆ ಹರಕೆ ಹೊತ್ತವರು ದೇವರ ಉತ್ಸವದೊಂದಿಗೆ ಬಾಯಿ ಬೀಗ ಹಾಕಿಸಿಕೊಂಡು ಆಗಮಿಸಿದ್ದು ವಿಶೇಷವಾಗಿತ್ತು. ದೇವಾಲಯ ತಲುಪಿದ ಅವಳಿ ದೇವರನ್ನು ಪ್ರತಿಷ್ಠಾಪಿಸಲಾಯಿತು.

ಗ್ರಾಮದ ಯಜಮಾನ ಶ್ರೀಧರ್, ಹತ್ತಿರ ಮನುಷ್ಯ ಶ್ರೀನಿವಾಸ್, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಉಮೇಶ್, ಮಾಜಿ ಸದಸ್ಯ ಅಂಗಡಿ ಶಶಿ, ಪೈಲ್ವಾನ್ ವಿಜಯ್, ಪತ್ರಿಕಾ ವಿತರಕ ಬಸವರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net