

ಚಿತ್ರದುರ್ಗ: ನಗರದ ಸಿದ್ಧ ಪ್ರಕಾಶನ, ಸಮಾಜ ವಿಜ್ಞಾನ ವೇದಿಕೆ ಮತ್ತು ಗೆಳೆಯರ ಬಳಗದ ಸಂಯುಕ್ತಾಶ್ರಯದಲ್ಲಿ ಸಿ.ಎಂ.ತಿಪ್ಪೇಸ್ವಾಮಿ ಅವರ ‘ರಕ್ಕಸದಂಗಡಿ’ ಕೃತಿ ಬಿಡುಗಡೆ ಕಾರ‌್ಯಕ್ರಮವನ್ನು ಡಿಡಿಪಿಐ ಕಚೇರಿಯ ಎಸ್‌ಎಸ್‌ಕೆ ಭವನದಲ್ಲಿ ಆ.19 ಮಧ್ಯಾಹ್ನ 2.30ಕ್ಕೆ ಏರ್ಪಡಿಸಲಾಗಿದೆ.
ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಅಧ್ಯಕ್ಷತೆ ವಹಿಸುವರು. ಹಂಪಿ ಕನ್ನಡ ವಿ.ವಿ.ಪ್ರಾಧ್ಯಾಪಕ ಡಾ.ಎಸ್.ವೈ.ಸೋಮಶೇಖರ್ ಕೃತಿ ಬಿಡುಗಡೆಗೊಳಿಸುವರು.
ಇತಿಹಾಸ ಸಂಶೋಧಕ ಬೆಂಗಳೂರಿನ ಡಾ.ಕೆ.ಜಿ.ಗೋಪಾಲಕೃಷ್ಣರಾವ್, ಡಿಡಿಪಿಐ ಕೆ.ರವಿಶಂಕರ ರೆಡ್ಡಿ, ಜಿಲ್ಲಾ ಸಮಾಜ ವಿಜ್ಞಾನ ವೇದಿಕೆ ಅಧ್ಯಕ್ಷ ವೀರಭದ್ರಸ್ವಾಮಿ ಮತ್ತಿತರರು ಉಪಸ್ಥಿತರಿರುವರು.