ಜಿಲ್ಲೆಯಲ್ಲಿ ಆಶ್ಲೇಷ ಅಬ್ಬರದ ಆತಂಕ

august
Published on

ಮಡಿಕೇರಿ:

ಆಗಸ್ಟ್ ತಿಂಗಳ ಆಶ್ಲೇಷ ಮಳೆ ಎಂದರೆ ಸಾಕು ಕೊಡಗಿವರಿಗೆ ಆತಂಕ ಶುರುವಾಗುತ್ತದೆ. ಆ.3ರಿಂದ ಶುರುವಾಗಿರುವ ಆಶ್ಲೇಷ ಮಳೆ ಆ.15ರ ತನಕ ಇರಲಿದೆ. ಆರಂಭದ 2 ದಿನ ಅಷ್ಟೇನೂ ಸದ್ದು ಮಾಡದ ಮಳೆ ಮಂಗಳವಾರ (ಆ.05) ಸೋಮವಾರಪೇಟೆ ಮತ್ತು ಮಡಿಕೇರಿ ತಾಲೂಕಿನ ಹೆಚ್ಚಿನ ಭಾಗಗಳಲ್ಲಿ ತನ್ನ ಅಬ್ಬರ ತೋರಿಸಿದೆ. ಭಾರತೀಯ ಹವಾಮಾನ ಇಲಾಖೆಯ ಆ.6ರಿಂದ ಆ.10ರ ತನಕದ ಮುನ್ಸೂಚನೆ ಪ್ರಕಾರ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಭಾರಿ ಮಳೆ ಬರುವ ಸಂಭವ ಇದೆ.

ಕೊಡಗಿಗೆ ಮಳೆ ಹೊಸದಲ್ಲ. ಜೂನ್‌ನಿಂದ ಅಕ್ಟೋಬರ್ ತನಕವೂ ಅಬ್ಬರಿಸುತ್ತಿರುವ ಮಳೆಯ ಜತೆಗಿನ ಬದುಕು ಇಲ್ಲಿನವರಿಗೆ ಸಾಮಾನ್ಯ. ಆದರೆ 2018 ರಿಂದ ಈಚೆಗೆ ಮಳೆಗಾಲ ಅಂದರೆ ಬೆಚ್ಚಿಬೀಳುವಂತಾಗಿದೆ. ಅದರಲ್ಲೂ ಆಗಸ್ಟ್ ಬಂದರೆ ಸಾಕು ಜಡಿಮಳೆಯ ನಡುಗುವ ಚಳಿಯಲ್ಲೂ ಬೆವರು ಬಂದು ಬಿಡುತ್ತದೆ. 2018ರಲ್ಲಿ ಆ.13ರಿಂದ ಶುರುವಾದ ವರುಣನ ಆರ್ಭಟ ಸ್ವಾತಂತ್ರö್ಯ ದಿನದ ಸಡಗರಕ್ಕೆ ಮಂಕು ಕವಿಯುವಂತೆ ಮಾಡಿತ್ತು. ಆ.17ರ ತನಕವೂ ಮುಂದುವರೆದಿದ್ದ ಮಳೆಗೆ ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನ ಹಲವೆಡೆ ಭೂಕುಸಿತ ಸಂಭವಿಸಿತ್ತು. ಕುಶಾಲನಗರ ಭಾಗದಲ್ಲಿ ನದಿ ತೀರದ ಬಡಾವಣೆಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿತ್ತು. ಸಾವಿರಕ್ಕೂ ಅಧಿಕ ಕುಟುಂಬಗಳು ನಿರಾಶ್ರಿತರಾಗಿದ್ದರು. ಪ್ರಾಣ ಹಾನಿಯೂ ಸಂಭವಿಸಿತ್ತು.

2019ರಲ್ಲೂ ಇಂಥದ್ದೇ ವಾತಾವರಣ ಪುನರಾವರ್ತನೆ ಆಗಿತ್ತು. ಆ.7ರಿಂದಲೇ ಶುರುವಾಗಿದ್ದ ಭಾರಿ ಮಳೆ ಆ. 13ರ ತನಕವೂ ಅಬ್ಬರಿಸಿತ್ತು. ವಿರಾಜಪೇಟೆ ತಾಲೂಕು ತೋರ ಗ್ರಾಮದಲ್ಲಿ ಬೆಟ್ಟ ಕುಸಿದು 10 ಮಂದಿ ಮತ್ತು ಮಡಿಕೇರಿ ತಾಲೂಕು ಕೋರಂಗಾಲದಲ್ಲಿ ಮನೆ ಮೇಲೆ ಬರೆ ಜರಿದು ಐವರು ಸೇರಿ 17 ಜನರು ಪ್ರಾಣ ಕಳೆದುಕೊಂಡಿದ್ದರು. ಪ್ರವಾಹದಿಂದಾಗಿ 900ಕ್ಕೂ ಅಧಿಕ ಕುಟುಂಬಗಳು ಮನೆ ಕಳೆದುಕೊಂಡಿದ್ದವು.

2020ರಲ್ಲಿ ಕೂಡ ಮತ್ತೆ ಆಗಸ್ಟ್ ಮಳೆಯೇ ಕೊಡಗಿಗೆ ಶಾಪವಾಗಿ ಪರಿಣಮಿಸಿತ್ತು. ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ಅದೇ ವರ್ಷ ಆ.6ಕ್ಕೆ ಗಜಗಿರಿ ಬೆಟ್ಟ ಕುಸಿದು ಮಾತೆ ಕಾವೇರಿಯನ್ನು ತಲೆತಲಾಂತರದಿAದ ಪೂಜಿಸಿಕೊಂಡು ಬರುತ್ತಿದ್ದ ಅರ್ಚಕ ಕುಟುಂಬದ ಮೂವರು ಸೇರಿ ಒಟ್ಟು ಐವರು ಭೂ ಸಮಾಧಿ ಆಗಿದ್ದರು. ಕಾವೇರಿ, ಲP್ಷÀ್ಮಣ ತೀರ್ಥ ಹಾಗೂ ಜಿಲ್ಲೆಯ ಇತರ ನದಿಪಾತ್ರಗಳಲ್ಲಿ ಕಾಣಿಸಿಕೊಂಡ ಪ್ರವಾಹದಿಂದ ಸಾಕಷ್ಟು ಹಾನಿಯೂ ಸಂಭವಿಸಿತ್ತು.

2020ರ ತನಕ ಪ್ರತಿವರ್ಷ ಅಬ್ಬರಿಸುತ್ತಾ ಆತಂಕ ಸೃಷ್ಟಿಸುತ್ತಿದ್ದ ಆಶ್ಲೇಷ ಮಳೆ 2021ರ ನಂತರ ಸ್ವಲ್ಪ ಶಾಂತವಾಗಿತ್ತು. ಮಳೆಗಾಲದ ಸಾಮಾನ್ಯ ಮಳೆ ಸುರಿದರೂ ಹೆಚ್ಚಿನ ಅನಾಹುತವೇನೂ ಸಂಭವಿಸಿರಲಿಲ್ಲ. ಅಲ್ಲಲ್ಲಿ ಚಿಕ್ಕ ಪುಟ್ಟ ಭೂಕುಸಿತಗಳು ವರದಿ ಆಗುತ್ತಿದ್ದರೂ ಅಪಾಯಕಾರಿಯೇನೂ ಆಗಿರಲಿಲ್ಲ. ನದಿಗಳು ಉಕ್ಕೇರಿದರೂ ಪ್ರವಾಹದ ದುಷ್ಪರಿಣಾಮಗಳು ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ. ಹಾಗಾಗಿ ಕಳೆದ ವರ್ಷದ ತನಕವೂ ಆಗಸ್ಟ್ ಮಳೆ ಬೆಚ್ಚಿಬೀಳಿಸುವಂತೆ ಇರಲಿಲ್ಲವಾದ ಕಾರಣ ಕೊಡಗಿನ ಜನತೆ ನಿಟ್ಟುಸಿರು ಬಿಟ್ಟಿದ್ದರು.

ಈ ವರ್ಷದ ಮಳೆಗಾಲ ಸ್ವಲ್ಲ ರಭಸ ಪಡೆದುಕೊಂಡಿರುವ ಕಾರಣ ಮತ್ತೆ ಆಗಸ್ಟ್ ಮಳೆ ಜಿಲ್ಲೆಯಲ್ಲಿ ಆತಂಕಕ್ಕೆ ಕಾರಣವಾಗಿದೆ. ಮೇ ತಿಂಗಳಿನಲ್ಲೇ ಮುಂಗಾರು ಪೂರ್ವ ಮಳೆಯ ಆರ್ಭಟ ನಂತರ ಜೂನ್‌ನಿಂದ ಈಚೆಗೆ ಚುರುಕು ಪಡೆದುಕೊಂಡ ಮುಂಗಾರಿನಿAದಾಗಿ ಈಗಾಗಲೇ ಕೊಡಗಿನಲ್ಲಿ ಉತ್ತಮ ಮಳೆ ಆಗಿದೆ. ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಆಗಿದ್ದು, ಜಿಲ್ಲೆಯ ಕೆಲವೊಂದು ಭಾಗಗಳನ್ನು ಹೊರತುಪಡಿಸಿದರೆ ಬಹುತೇಕ ಭಾಗಗಳಲ್ಲಿ ಆಶ್ಲೇಷ ಮಳೆಯ ಅಬ್ಬರ ಕಾಣಿಸಿಕೊಂಡಿದೆ. ಮಂಗಳವಾರ ಮಧ್ಯಾಹ್ನ ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ ಕಂಡುಬAದಿದ್ದ ಮಳೆಯ ರಭಸ 2018ರ ಮಳೆಗಾಲ ನೆನಪಿಸುವಂತಿತ್ತು ಎನ್ನುತ್ತಾರೆ ಸ್ಥಳೀಯರು.

ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಆ.6ರಿಂದ 10ರ ತನಕ ಮೋಡ ಕವಿದ ವಾತಾವರಣ ಇರಲಿದ್ದು, ಭಾರಿ ಮಳೆ ಆಗುವ ಸಂಭವ ಇದೆ. ಪಕ್ಕದ ಕೇರಳದಲ್ಲಿ ಜಿಲ್ಲೆಗೆ ಹೊಂದಿಕೊAಡಿರುವAತೆ ಇರುವ ಪ್ರದೇಶಗಳಲ್ಲಿ ರೆಡ್ ಅಲರ್ಟ್ ಇದೆ. ಅಲ್ಲೂ ಈಗ ಉತ್ತಮ ಮಳೆ ಆಗುತ್ತಿದೆ. ಕಳೆದ ವಾರವಷ್ಟೇ ಕೇರಳ ಗಡಿ ಪಕ್ಕದಲ್ಲಿ ಇರುವ ಕೊಡಗಿನ ಅರಣ್ಯ ಪ್ರದೇಶದಲ್ಲಿ ಭೂ ಕುಸಿತ ಸಂಭವಿಸಿದ್ದ ವರದಿ ಆಗಿತ್ತು. ಹಾಗಾಗಿ ಆಶ್ಲೇಷ ನಕ್ಷತ್ರದ ಮಳೆ ಮುಗಿಯುವ ಆ.15ರ ತನಕವೂ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಕೂಡ ಸಂಬAಧಿಸಿದ ಇಲಾಖೆಗಳ ಮುಖ್ಯಸ್ಥರಿಗೆ ಸೂಚಿಸಿದೆ.

ಭಾರತೀಯ ಹವಾಮಾನ ಇಲಾಖೆಯ ಭಾರಿ ಮಳೆಯ ಮುನ್ಸೂಚನೆ ಮಧ್ಯೆ ಭೂ ವಿಜ್ಞಾನಿಯೂ ಆಗಿರುವ ಭಾರತೀಯ ಭೂ ವೈಜ್ಞಾನಿಕ ಸಮೀಕ್ಷೆ ಸಂಸ್ಥೆಯ ನಿವೃತ್ತ ಅಧಿಕಾರಿ ಡಾ. ಹೆಚ್.ಎಸ್.ಎಂ. ಪ್ರಕಾಶ್ ಅವರ ಮಾಹಿತಿ ಸ್ವಲ್ಪ ಸಮಾಧಾನ ಕೊಡುವಂತಿದೆ. ಭಾರತದ ಸುತ್ತಮುತ್ತಲಿನ ಕೆಲವು ಜ್ವಾಲಾಮುಖಿಗಳ ಚಟುವಟಿಕೆಗಳು ನಿಷ್ಕಿçಯ ಆಗಿರುವುದರಿಂದ ಸಾಕಷ್ಟು ಆವಿ ವಾಯುಪದರಕ್ಕೆ ಸೇರುತ್ತಿಲ್ಲ. ಆವಿ ಕೊರತೆಯಿಂದ ಮಳೆ ಪ್ರಮಾಣ ಸ್ವಲ್ಪ ಮಟ್ಟಿಗೆ ಕುಂಠಿತ ಆಗಲಿದೆ. ಆಗಸ್ಟ್ನಲ್ಲಿ ಜೋರು ಮಳೆ ಸುರಿದರೂ ಒಟ್ಟಾರೆ ಸರಾಸರಿ ಪ್ರಮಾಣದಲ್ಲಿ ಇಳಿಮುಖ ಆಗಲಿದೆ. ಕೊಡಗು ಮತ್ತು ಕೇರಳ ಪ್ರದೇಶಗಳಲ್ಲಿ ಭೂ ಕುಸಿತದ ಆತಂಕ ಇಲ್ಲ ಎನ್ನುತ್ತಾರೆ ಅವರು. ಸಕ್ರಿಯ ಭೂಕಂಪನ ಮತ್ತು ಜ್ವಾಲಾಮುಖಿಗಳು ಮಳೆಯ ತೀವ್ರತೆ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಜಿಯೋಮೀಟಿಯೋರೋಲಜಿ ವಿಜ್ಞಾನ ಸಿದ್ಧಾಂತ ಮೂಲಕ ಡಾ. ಹೆಚ್.ಎಸ್.ಎಂ. ಪ್ರಕಾಶ್ ಸಮರ್ಥಿಸಿಕೊಂಡು ಬಂದಿದ್ದಾರೆ. 2018ರಲ್ಲಿ ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ನಂತರ ಸತತ ಅಧ್ಯಯನದಲ್ಲಿ ತೊಡಗಿಸಿಕೊಂಡಿರುವ ಅವರು 2019ರಿಂದಲೂ ಮಳೆಯ ಮುನ್ಸೂಚನೆ ಕೊಡುತ್ತಾ ಬಂದಿದ್ದಾರೆ. ಇದು ನನ್ನ ಸತತ ಏಳನೇ, ಯಶಸ್ವಿ ಮಳೆ ಮುನ್ಸೂಚನೆಯಾಗಿದೆ ಎಂದು ಪ್ರಕಾಶ್ ಹೇಳುತ್ತಾರೆ.

2018ರಿಂದ ಈಚೆಗೆ ಕೊಡಗು ಸೇರಿ ಮಲೆನಾಡಿನಲ್ಲಿ ಸಂಭವಿಸುತ್ತಿರುವ ಪ್ರಾಕÊತಿಕ ವಿಕೋಪಗಳಿಗೆ ಪ್ರಕÊತಿಯ ಮೇಲೆ ಮಾನವನ ಅತಿಯಾದ ಹಸ್ತಕ್ಷೇಪವೇ ಕಾರಣ ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯP್ಷÀರಾಗಿದ್ದ ಅನಂತ ಹೆಗಡೆ ಅಶೀಸರ ಅಧ್ಯP್ಷÀತೆಯ ತಜ್ಞರ ಸಮಿತಿ ಈ ಹಿಂದೆ ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ಹೇಳಿತ್ತು. ಇದಕ್ಕೂ ಮೊದಲು ಜಿಯಾಲಜಿಕಲ್ ಸರ್ವೆ ಆï ಇಂಡಿಯಾದ ತಜ್ಞರ ವರದಿಯಲ್ಲೂ ಇಂಥz್ದೆÃ ಅಂಶಗಳಿದ್ದವು. ಯಂತ್ರಗಳನ್ನು ಬಳಸಿ ಬೆಟ್ಟದ ಮೇಲೆ ಸಾವಿರಕ್ಕೂ ಅಧಿಕ ಇಂಗುಗುAಡಿಗಳನ್ನು ಅವೈಜ್ಞಾನಿಕವಾಗಿ ತೆಗೆದಿz್ದÉÃ 2020ರಲ್ಲಿ ತಲಕಾವೇರಿಯ ಗಜಗಿರಿ ಬೆಟ್ಟ ಕುಸಿತಕ್ಕೆ ಕಾರಣ ಎನ್ನುವುದನ್ನು ತಜ್ಞರು ಹೇಳಿದ್ದರು. ಭೂಕುಸಿತ ಸಾಧ್ಯತೆಯ ಪ್ರದೇಶಗಳ ಸೂP್ಷÀ್ಮ ನಿರ್ವಹಣೆಯ ಬಗ್ಗೆಯೂ ಸಲಹೆಗಳನ್ನು ನೀಡಲಾಗಿತ್ತು. 2021ರಿಂದ ಈಚೆಗೆ ಮಳೆಯ ಅನಾಹುತ ಕಡಿಮೆ ಆಗುತ್ತಿದ್ದಂತೆಯೇ ಮತ್ತೆ ಪ್ರಕೃತಿ ಮೇಲಿನ ದಬ್ಬಾಳಿಕೆ ಯಾವುದೇ ಅಡ್ಡಿ ಆತಂಕ ಇಲ್ಲದೆ ಮುಂದುವರಿದಿದೆ. ಬೆಟ್ಟವನ್ನೇ ಕಡಿದು ನಿರ್ಮಾಣ ಕಾರ್ಯಗಳನ್ನು ನಡೆಸಲಾಗುತ್ತಿದೆ. ಇಂಥ ಕೃತ್ಯಗಳು ಭವಿಷ್ಯದಲ್ಲಿ ಮತ್ತೊಂದು ದುರಂಥಕ್ಕೆ ಮುನ್ನುಡಿ ಆಗಬಹುದು ಎನ್ನುವ ಆತಂಕವೂ ವ್ಯಕ್ತ ಆಗುತ್ತಿದೆ.

ಭಾರತೀಯ ಹವಾಮಾನ ಇಲಾಖೆ ಶೇ 104 ಹೆಚ್ಚುವರಿ ಮಳೆ ಮುನ್ಸೂಚನೆ ನೀಡಿದೆ. ಆದರೆ ನನ್ನ ಭೂ ಹವಾಮಾನ ಅಧ್ಯಯನ ಆಧಾರಿತ ಮುನ್ಸೂಚನೆ ಕೊರತೆಯ ಮುಂಗಾರು ಮಳೆಯನ್ನು ಸಾಬೀತುಪಡಿಸಿದೆ. ಪ್ರಸ್ತುತ ಪರಿಸ್ಥಿತಿಗಳ ಆಧಾರದ ಮೇಲೆ ಆಗಸ್ಟ್ ಮಳೆ ಅತಿಯಾಗಿರುವುದಿಲ್ಲ. 2019 ರಿಂದ ಇದು ನನ್ನ ಸತತ ಏಳನೇ, ಯಶಸ್ವಿ ಮಳೆ ಮುನ್ಸೂಚನೆಯಾಗಿದೆ. ಆದರೆ ಇತರ ಸರ್ಕಾರಿ ಸಂಸ್ಥೆಗಳು ಇಂಥ ಮುನ್ಸೂಚನೆ ಕೊಡುವಲ್ಲಿ ಪದೇ ಪದೇ ವಿಫಲವಾಗಿವೆ. ಇದು ಭೂವಿಜ್ಞಾನಿಯಾಗಿ ಸಂಶೋಧನೆ ನಡೆಸುತ್ತಿರುವ ನನ್ನ ಸ್ವತಂತ್ರ ಹೇಳಿಕೆಯಾಗಿದೆ.

ಡಾ. ಹೆಚ್.ಎಸ್.ಎಂ. ಪ್ರಕಾಶ್, ಭೂ ವಿಜ್ಞಾನಿ, ಬೆಂಗಳೂರು

ಭಾರತೀಯ ಹವಾಮಾನ ಇಲಾಖೆಯ ಈ ವಾರದ ಮುನ್ಸೂಚನೆ ಪ್ರಕಾರ ಆ. 6ರಿಂದ 10ರ ತನಕ ಕೊಡಗಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಭಾರಿ ಮಳೆ ಆಗುವ ಸಂಭವ ಇದೆ. ಗರಿಷ್ಠ ಉಷ್ಠಾಂಶ 28 ಡಿ.ಸೆ.-29 ಡಿ.ಸೆ. ತನಕ ಇರಲಿದೆ. ಕನಿಷ್ಠ ಉಷ್ಣಾಂಶ 20 ಡಿ.ಸೆ.-22 ಡಿ.ಸೆ. ತನಕ ಇರಲಿದೆ. ಗಂಟೆಗೆ 8-10 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಹಾಗಾಗಿ ರೈತರು ಮತ್ತು ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು.

ಡಾ. ಜಿ.ವಿ. ಸುಮಂತ್‌ಕುಮಾರ್, ತಾಂತ್ರಿಕ ಅಧಿಕಾರಿ, ಕೃಷಿ ಹವಾಮಾನ ಕ್ಷೇತ್ರ ವಿಭಾಗ, ನಾಗನಹಳ್ಳಿ, ಮೈಸೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net