ಅ.18ರಂದು ಕದ್ರಿ ದೇವಳದಲ್ಲಿ ರಾಷ್ಟ್ರ ಮಟ್ಟದ ಮಕ್ಕಳ ಉತ್ಸವ ಕಲ್ಕೂರ ಪ್ರತಿಷ್ಠಾನದಿಂದ ಶ್ರೀ ಕೃಷ್ಣ ವೇಷ ಸ್ಪರ್ಧೆ

krishna
Published on

ಮಂಗಳೂರು: ಕಲ್ಕೂರ ಪ್ರತಿಷ್ಠಾನದ ವತಿಯಿಂದ ರಾಷ್ಟ್ರ ಮಟ್ಟದ ಮಕ್ಕಳ ಉತ್ಸವ- ಶ್ರೀ ಕಷ್ಣ ವೇಷ ಸ್ಪರ್ಧೆ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಆ.18ರಂದು ಬೆಳಗ್ಗೆ 9 ರಿಂದ ನಡೆಯಲಿದೆ.


ಶ್ರೀ ಕೃಷ್ಣ ವರ್ಣ ವೈಭವ, ಶ್ರೀ ಕೃಷ್ಣ ಗಾನ ವೈಭವ, ಶ್ರೀ ಕೃಷ್ಣ ರಂಗೋಲಿ ನಡೆಯಲಿರುವುದು. ಮಧ್ಯಾಹ್ನ 12ರಿಂದ ಸಾಂಸ್ಕೃತಿಕ ವೈಭವ, 1ರಿಂದ ಶ್ರೀ ಕೃಷ್ಣ ಜನ್ಮ ಮಹೋತ್ಸವ ನಂದ ಗೋಕುಲ ವೇದಿಕೆಯಲ್ಲಿ ದೀಪ ಪ್ರಜ್ವಲನದೊಂದಿಗೆ ಶ್ರೀ ಕೃಷ್ಣ ವೇಷ ಸ್ಪರ್ಧೆ ಉದ್ಘಾಟನೆಗೊಳ್ಳಲಿದೆ ಎಂದು ಕಲೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


33 ವಿಭಾಗಗಳಲ್ಲಿ ಸ್ಪರ್ಧೆಗಳು: ಶ್ರೀ ಕೃಷ್ಣ ವೇಷ ಸ್ಪರ್ಧೆ ಒಟ್ಟು 33 ವಿಭಾಗಗಳಲ್ಲಿ, 9 ವೇದಿಕೆಗಳಲ್ಲಿ ಏಕ ಕಾಲದಲ್ಲಿ ಆಯೋಜಿಸಲಾಗಿದೆ. ಮಧ್ಯಾಹ್ನ 12 ರಿಂದ ರಾತ್ರಿ 12ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜೋಡಿಸಲಾಗಿದೆ. ರಾತ್ರಿ 12 ಗಂಟೆಗೆ ಅರ್ಘ್ಯ ಪ್ರದಾನ - ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಗಲಿದೆ ಎಂದರು.

ಕಂದ ಕಷ್ಣ (1ವರ್ಷದ ಕೆಳಗೆ), ಮುದ್ದು ಕೃಷ್ಣ (1-2ವರ್ಷ),ತುಂಟ ಕಷ್ಣ (2-3), ಬಾಲಕೃಷ್ಣ (ಎಲ್‌ಕೆಜಿ), ಕಿಶೋರ ಕೃಷ್ಣ: ಯು.ಕೆ.ಜಿ. ಮತ್ತು 1ನೇ ತರಗತಿ, ಶ್ರೀ ಕೃಷ್ಣ (2-4ತರಗತಿ), ಗೀತಾ ಕಷ್ಣ (5- 7ತರಗತಿ), ಯಕ್ಷ ಕೃಷ್ಣ: (8-10ತರಗತಿ), ರಾಧಾಕೃಷ್ಣ (7ನೇ ತರಗತಿವರೆಗೆ), ಯಶೋದ ಕಷ್ಣ (ವಯೋಮಿತಿಯಿಲ್ಲ), ಶಂಖನಾದ ( 7ನೇ ತರಗತಿವರೆಗೆ) ಶಂಖನಿನಾದ (7ನೇ ತರಗತಿ ಮೇಲ್ಪಟ್ಟು), ಶಂಖಉದ್ಘೋಷ (7ರಿಂದ ಪಿಯುಸಿ), ದೇವಕಿ ಕಷ್ಣ (ಈ ಹಿಂದೆ ಕೃಷ್ಣವೇಷ ಹಾಕಿದವರು ಯಶೋದೆ ಅಥವಾ ದೇವಕಿಯಾಗಿರಬೇಕು), ವಸುದೇವಕೃಷ್ಣ (ಮುಕ್ತ ವಿಭಾಗ), ನಂದಗೋಕುಲ (ಸಮೂಹ ವಿಭಾಗ), ಬಾಲಕೃಷ್ಣ ರಸಪ್ರಶ್ನೆ( 7ನೇ ತರಗತಿವರೆಗೆ) ಶ್ರೀಕೃಷ್ಣ ರಸ ಪ್ರಶ್ನೆ ಸ್ಪರ್ಧೆ (7ನೇ ಮೇಲ್ಪಟ್ಟು) ಛಾಯಾಕೃಷ್ಣ (ವಯೋಮಿತಿ ನಿರ್ಬಂಧವಿಲ್ಲ), ಶ್ರೀ ಕೃಷ್ಣ ವರ್ಣ ವೈಭವ, ಚಿತ್ರಕಲಾ ಸ್ಪರ್ಧೆ, ಶ್ರೀಕೃಷ್ಣ ಗಾನ ವೈಭವ, ರಂಗೋಲಿಯಲ್ಲಿ ಶ್ರೀ ಕೃಷ್ಣ, ಪಂಡರಾಪುರ ವಿಠಲ (ಮುಕ್ತ ವಿಭಾಗ) ನಡೆಯಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net