ಲೆಕ್ಕ ಪರಿಶೋಧಕರ ಪಾತ್ರ ಮಹತ್ವದ್ದು

15Thyagarthi 1
ಹೆಗ್ಗೋಡು ಕಾಕಾಲ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಕೌಶಲ ಕೋರ್ಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಜೋಶಿ ಫೌಂಡೇಷನ್ ಸ್ಥಾಪಕ ದಿನೇಶ್ ಜೋಶಿ ಅಬಸೆ, ಡಾ. ಎಚ್.ಎಂ.ಶಿವಕುಮಾರ್, ಕೇಶವ ಸಂಪೆಕೈ, ಬಾಗಿ ಸತ್ಯನಾರಾಯಣ, ಎ.ಎಸ್.ಗಣಪತಿ ಇದ್ದರು.
Published on

ತ್ಯಾಗರ್ತಿ: ಸಾರ್ವಜನಿಕ ಸಂಸ್ಥೆಗಳಲ್ಲಿ ಆರ್ಥಿಕ ಸ್ಥಿತಿ ಸರಿಯಾಗಿ ಇರಬೇಕಾದರೆ ಲೆಕ್ಕ ಪರಿಶೋಧಕರ ಜವಾಬ್ದಾರಿ ಹೆಚ್ಚು ಎಂದು ಜೋಶಿ ಫೌಂಡೇಷನ್ ಸಂಸ್ಥಾಪಕರಾದ ಲೆಕ್ಕ ಪರಿಶೋಧಕ ಅಬಸೆ ದಿನೇಶ್ ಜೋಶಿ ಹೇಳಿದರು.

ಸಮೀಪದ ಹೆಗ್ಗೋಡು ವಿದ್ಯಾಭಿವೃದ್ಧಿ ಸಂಘದ ಕಾಕಾಲ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಕಾಲ್ ಕ್ಲಾಸಸ್, ಸಿಎ ಫೌಂಡೇಷನ್ ಹಾಗೂ ಕೌಶಲ ಅಭಿವೃದ್ಧಿ ಕೋರ್ಸ್ ಉದ್ಘಾಟಿಸಿ ಮಾತನಾಡಿ, ಲೆಕ್ಕ ಪರಿಶೋಧಕರು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು. ಸಾರ್ವಜನಿಕರು ಕೂಡಿಟ್ಟ ಹಣ ಅಪವ್ಯಯ ಆಗದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.
ವಾಣಿಜ್ಯ ವಿಭಾಗದಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಉದ್ಯೋಗ ಕಂಡುಕೊಳ್ಳಲು ಅನೇಕ ಅವಕಾಶಗಳಿವೆ. ಕೌಶಲವನ್ನು ವೃದ್ಧಿಸಿಕೊಳ್ಳಲು ಪರಿಶ್ರಮದಿಂದ ಅಭ್ಯಾಸ ಮಾಡಬೇಕು. ಪ್ರಾಮಾಣಿಕತೆ ರೂಢಿಸಿಕೊಳ್ಳಬೇಕು. ಇದರಿಂದ ಯಾವುದೇ ಕ್ಷೇತ್ರದಲ್ಲಾದರೂ ಸಾಧನೆ ಮಾಡಬಹುದು ಎಂದರು.
ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದ ರೋಟರಿ ರೆಡ್‌ಕ್ರಾಸ್ ರಕ್ತನಿಧಿ ಕೇಂದ್ರದ ಅಧ್ಯಕ್ಷ ಡಾ. ಎಚ್.ಎಂ.ಶಿವಕುಮಾರ್ ಮಾತನಾಡಿ,ಪ್ರಸ್ತುತ ತಾಲೂಕಿನಲ್ಲಿ ಡೆಂಘೆ ಜ್ವರ ಹರಡುತ್ತಿರುವ ಕಾರಣಕ್ಕೆ ರಕ್ತಕ್ಕೆ ಬೇಡಿಕೆ ಹೆಚ್ಚುತ್ತಿದೆ. ಯುವಜನತೆ ರಕ್ತದಾನಕ್ಕೆ ಮುಂದಾಗಬೇಕು ಎಂದು ಹೇಳಿದರು.
30ಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹಿಸಲಾಯಿತು. ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ಕೇಶವ ಸಂಪೆಕೈ, ಪ್ರಮುಖರಾದ ಬಾಗಿ ಸತ್ಯನಾರಾಯಣ, ನಾಗರಾಜ್ ಸಭಾಹಿತ್, ವ.ಶಂ.ರಾಮಚಂದ್ರ, ಪ್ರಭಾಕರ, ವೆಂಕಟೇಶ್ ಕೆರೆಕೈ, ಪ್ರಾಚಾರ್ಯ ಎ.ಎಸ್‌ಗಣಪತಿ, ರಕ್ತನಿಧಿ ಕೇಂದ್ರದ ಡಾ. ಉಲ್ಲಾಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net