ಭದ್ರ ಗಿರಿಯಲ್ಲಿ ಆಡಿ ಕೃತಿಕಾ ಜಾತ್ರೆ ಸಂಭ್ರಮ

kavadi
ಎಂ.ಸಿ.ಹಳ್ಳಿ ಭದ್ರಗಿರಿ ಶ್ರೀ ಶಿವಸುಬ್ರಹ್ಮಣ್ಯ ಸ್ವಾಮಿ ದೇಗುಲದಲ್ಲಿ ಭಕ್ತರು ಕಾವಡಿ ಹೊತ್ತು ಬರುತ್ತಿರುವುದು.
Published on

ತರೀಕೆರೆ: ತಾಲೂಕಿನ ಎಂ.ಸಿ.ಹಳ್ಳಿ ಭದ್ರಗಿರಿ ಶ್ರೀ ಶಿವಸುಬ್ರಹ್ಮಣ್ಯಸ್ವಾಮಿ ಆಡಿಕೃತಿಕಾ ಜಾತ್ರಾ ಮಹೋತ್ಸವ ಬುಧವಾರ ವೈಭವದಿಂದ ಜರುಗಿತು.

ಮಂಗಳವಾರ ರಾತ್ರಿ 12ಕ್ಕೆ ಅರ್ಚಕ ಪ್ರದೀಪ ನೇತೃತ್ವದಲ್ಲಿ ದೇಗುಲದಲ್ಲಿ ವಳ್ಳಿ ದೇವಸೇನಾಸಹಿತ ಸುಬ್ರಹ್ಮಣ್ಯ ಸ್ವಾಮಿಯ ಉತ್ಸವ ಮೂರ್ತಿಗೆ ಹಾಲು, ತುಪ್ಪ, ಮೊಸರು, ಜೇನುತುಪ್ಪ, ಎಳನೀರು, ಶ್ರೀಗಂಧ, ಭಸ್ಮ ಸೇರಿ ವಿವಿಧ ಸುಗಂಧ ದ್ರವ್ಯಾದಿಗಳಿಂದ ಮಹಾಭಿಷೇಕ, ಮಹಾಮಂಗಳಾರತಿ ನೆರವೇರಿಸಲಾಯಿತು.
ಬುಧವಾರ ಬೆಳಗಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಶಿವಸುಬ್ರಹ್ಮಣ್ಯಸ್ವಾಮಿ ಮೂಲ ದೇವರಿಗೆ ಕ್ಷೀರಾಭಿಷೇಕ, ಬಂಗಾರದ ಕವಚ ಧಾರಣೆ ಮಾಡಿ ವಿವಿಧ ಪುಷ್ಪಗಳಿಂದ ಅಲಂಕಾರಗೊಳಿಸಿ ಮಹಾಪೂಜೆ ಸಲ್ಲಿಸಲಾಯಿತು.
ಪೂಜೆ ನಂತರ ತಮಿಳುನಾಡು, ಮಧುರೈ, ಕೊಯಮತ್ತೂರು, ತಿರಪೂರು, ಸೇಲಂ, ಈರೋಡ್, ಪೋಡಿ, ಕುಮಾರಪಾಳ್ಯಂ, ಚೆನ್ನೈ, ಬೆಂಗಳೂರು, ತರೀಕೆರೆ, ಭದ್ರಾವತಿ, ತೀರ್ಥಹಳ್ಳಿ, ಶಿವಮೊಗ್ಗ ಮತ್ತಿತರ ಕಡೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ವಳ್ಳಿ ದೇವಸೇನಾಸಹಿತ ಶ್ರೀ ಶಿವಸುಬ್ರಹ್ಮಣ್ಯ ಸ್ವಾಮಿ ದರ್ಶನ ಪಡೆದರು.
ಭದ್ರಾವತಿ, ಲಿಂಗದಹಳ್ಳಿ, ಲಕ್ಕವಳ್ಳಿ, ಕೃಷ್ಣಾಪುರ, ಸಂತವೇರಿ, ಎಂ.ಸಿ.ಹಳ್ಳಿ, ದುಗ್ಲಾಪುರ, ಬೊಮ್ಮೇನಹಳ್ಳಿ ಇತರ ಕಡೆಯ ಭಕ್ತರು ಆಡಿ ಕೃತಿಕಾ ನಿಮಿತ್ತ ಕಾವಡಿ ಹೊತ್ತು ಬಂದು ಹರಕೆ ತೀರಿಸಿದರು. ಉರುಳು, ತುಲಾಭಾರ ಸೇವೆ ನೆರವೇರಿಸಿ ಕೆಲವರು ಮುಡಿ ಅರ್ಪಿಸಿದರು.
ದೇಗುಲದ ಪ್ರಧಾನ ಅರ್ಚಕ ಶ್ರೀ ಮುರುಗೇಶ್ ಸ್ವಾಮಿ, ಆಡಳಿತ ಮಂಡಳಿ ಅಧ್ಯಕ್ಷ ಎಂ.ಚಂದ್ರಘೋಷನ್, ಕರ್ನಾಟಕ ತಮಿಳ್ ಗೌಂಡರ್ ಸಮಾಜದ ಅಧ್ಯಕ್ಷ ನಂದಕುಮಾರ್, ದೇಗುಲ ಸೇವಾ ಸಮಿತಿ ಪದಾಧಿಕಾರಿಗಳಾದ ಸೋಮು, ಮಂಜುನಾಥ್, ತಿರುಮೂರ್ತಿ, ಡಾ. ವಿಕ್ರಂ, ಬದ್ರಿ, ವಡಿವೇಲು, ಅಶೋಕ್, ನಲ್ಲುಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net