ಬಿಡ್‌ದಾರರಿಲ್ಲದೇ ಹರಾಜು ಪ್ರಕ್ರಿಯೆ ಮುಂದಕ್ಕೆ

bir 1 (9)
Published on

ಬೀರೂರು: ಪುರಸಭೆ ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳಡಿ ನಿರ್ಮಿಸಿರುವ 30 ವಾಣಿಜ್ಯ ಮಳಿಗೆಗಳ ಪೈಕಿ ಕೇವಲ ಮೂರು ಮಳಿಗೆಗಳು ಹರಾಜಾಗಿದ್ದು, ಉಳಿದ ಮಳಿಗೆಗಳಿಗೆ ಬಿಡ್‌ದಾರರಿಲ್ಲದೆ ಪ್ರಕ್ರಿಯೆ ಮುಂದೂಡಲಾಯಿತು.

ಬಾಡಿಗೆ ಆಧಾರದಲ್ಲಿ 12 ವರ್ಷಗಳ ಅವಧಿಗೆ ನೀಡಲು ಸೋಮವಾರ ಪುರಸಭೆ ಸಭಾಂಗಣದಲ್ಲಿ ಮುಖ್ಯಾಧಿಕಾರಿ ಜಿ.ಪ್ರಕಾಶ್ ಅಧ್ಯಕ್ಷತೆಯಲ್ಲಿ ಸಮಯ ನಿಗದಿ ಮಾಡಲಾಗಿತ್ತು. ಪುರಸಭೆ ಮುಂಭಾಗದ 3, ಖಾಸಗಿ ಬಸ್‌ನಿಲ್ದಾಣದ 3, ಪಂಪ್‌ಹೌಸ್ ಹತ್ತಿರದ 1, ರಾಜಾಜಿನಗರ ಬಡಾವಣೆಯ 4, ಸಂತೆ ಮೈದಾನದ 19 ಮಳಿಗೆಗಳ ಬಹಿರಂಗ ಹರಾಜು ಕರೆಯಲಾಗಿದ್ದು, ಇಂಎಂಡಿ ಕಟ್ಟಲು ನಿಗದಿತ ಅವಧಿವರೆಗೂ ಅಧಿಕಾರಿಗಳು ಕಾದು ಕುಳಿತರು ಪುರಸಭೆ ಮುಂಭಾಗದ 3 ಮಳಿಗೆಗಳಿಗೆ ಮಾತ್ರ 12 ಬಿಡ್‌ದಾರರು ಇಂಎಂಡಿ ಕಟ್ಟಿ ಟೋಕನ್ ಪಡೆದರು. ಹರಾಜು ಪ್ರಕ್ರಿಯೆ ಆರಂಭವಾದ ಕೂಡಲೇ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಮಳಿಗೆ ಭಾರಿ ಪೈಪೋಟಿಯೊಂದಿಗೆ 18.100 ರೂ.ಗೆ ಹರಾಜಾಯಿತು. ಉಳಿದ ಎರಡು ಮಳಿಗೆಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಕಾರಣ ಜಿದ್ದಾಜಿದ್ದಿಗೆ ಬಿದ್ದ ಬಿಡ್‌ದಾರರು ಒಂದು ಮಳಿಗೆಯನ್ನು 20,400 ರೂ.ವಿಕ್ರಂ ಬಾಬು ಹಾಗೂ 24,600ಕ್ಕೆ ಮಹಬೂಬ್ ಪಾಷ ತಮ್ಮದಾಗಿಸಿಕೊಂಡರು.

ಉಳಿದ ಮಳಿಗೆಗಳಿಗೆ ಹರಾಜಿನಲ್ಲಿ ಯಾರು ಭಾಗವಹಿಸಿರಲಿಲ್ಲ. ಕೆಲವು ಮಳಿಗೆಗಳಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದ ಹಲವಾರು ಜಾಗಗಳು ಹರಾಜಾಗದೆ ಉಳಿದವು.

ಪುರಸಭೆ ಸದಸ್ಯರಾದ ಬಿ.ಕೆ.ಶಶಿಧರ್, ರಾಜು, ಮಾನಿಕ್ ಬಾಷಾ, ನಾಮಿನಿ ಸದಸ್ಯರಾದ ಎಂ.ಎಲ್.ಮೋಹನ್ ಕುಮಾರ್, ಆಶ್ರಯ ಸಮಿತಿ ಸದಸ್ಯ ಮುಬಾರಕ್, ಹಾಗೂ ನಾಗರಿಕರಾದ ಪುನೀತ್, ಗಣೇಶ್, ಪ್ರಭು ಇತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net