27.10 ಲಕ್ಷ ರೂ.ಗೆ ಸಂತೆ ಸ್ಥಳ ಹರಾಜು

Auction house auctioned for Rs 27.10 lakh
Auction house auctioned for Rs 27.10 lakh
Published on

ರಬಕವಿ/ಬನಹಟ್ಟಿ: ನಗರಸಭೆ ವ್ಯಾಪ್ತಿಯಲ್ಲಿ ಬರುವ ರಬಕವಿ-ಬನಹಟ್ಟಿ- ಹೊಸೂರ-ರಾಮಪೂರ ಪಟ್ಟಣಗಳ ಬೀದಿ ಬದಿ ವ್ಯಾಪಾರಸ್ಥರಿಗೆ, ನಗರಸಭೆ ಜಾಗ, ಸಂತೆ ಹಾಗೂ ಜಾತ್ರೆ ಸೇರಿ ಇತರ ಕಡೆಗಳಲ್ಲಿ ನಡೆಸುವ ವ್ಯಾಪಾರ ಸ್ಥಳಗಳಿಗೆ ಶುಕ್ರವಾರ ಬಹಿರಂಗ ಹರಾಜು ನಡೆಯಿತು.

ಪೌರಾಯುಕ್ತ ಜಗದೀಶ ಈಟಿ, ನಗರಾಧ್ಯಕ್ಷೆ ವಿದ್ಯಾ ದಭಾಡಿ, ಸ್ಥಾಯಿ ಸಮಿತಿ ಚೇರ್ಮನ್ ಅರುಣ ಬುದ್ನಿ ನೇತೃತ್ವದಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ 27.10 ಲಕ್ಷ ರೂ.ಗೆ ಹರಾಜು ನಡೆಯಿತು. ಒಟ್ಟು 17 ಜನ ಹರಾಜಿನಲ್ಲಿ ಭಾಗಿಯಾಗಿದ್ದರು. ಅದರಲ್ಲಿ ಮಾರುತಿ ಆಲಗೂರ ಅತಿ ಹೆಚ್ಚು ಬೇಡಿಕೆ ಸಲ್ಲಿಸುವ ಮೂಲಕ ಟೆಂಡರ್ ತಮ್ಮದಾಗಿಸಿಕೊಂಡರು.

ಕಡಿಮೆ ಹರಾಜು: ಕಳೆದ ಬಾರಿಗಿಂತಲೂ ಪ್ರಸಕ್ತ ವರ್ಷ ಹರಾಜು ಟೆಂಡರ್ ಕಡಿಮೆ ಬೆಲೆಗೆ ಆಗಿದೆ. ಹಿಂದಿನ ವರ್ಷ 28 ಲಕ್ಷ ರೂ.ಗಳಿಗೆ ಹರಾಜು ಆಗಿತ್ತು. ಪ್ರಸಕ್ತ ವರ್ಷ 27.10 ಲಕ್ಷ ರೂ.ಗೆ ಬೀಕರಿಗೊಂಡಿತು.

ನಗರಸಭೆ ವ್ಯವಸ್ಥಾಪಕ ಮುಖೇಶ ಬನಹಟ್ಟಿ, ಲೆಕ್ಕಾಧಿಕಾರಿ ಮುತ್ತಣ್ಣ ಚೌಡಕಿ, ಕಂದಾಯ ನಿರೀಕ್ಷಕ, ಕಂದಾಯ ಅಧಿಕಾರಿ ವಸಂತ ಪವಾರ, ಕಂದಾಯ ನಿರೀಕ್ಷಕ ಶಿವಪುತ್ರ ಮೂಡಲಗಿ, ಹೊಳೆಬಸು ಚಿಂಚಖಂಡಿ, ತೆರಿಗೆ ಸಂಗ್ರಹಕಾರ ಮೊಹ್ದೀನ್‌ಸಾಬ ಮೊಕಾಶಿ, ಬಸವರಾಜ ಹೊಸೂರ ಇದ್ದರು.

ಸದಸ್ಯರಾದ ಪ್ರಭಾಕರ ಮೊಳೇದ, ಶಿವಾನಂದ ಬುದ್ನಿ, ಯಲ್ಲಪ್ಪ ಕಟಗಿ, ಗೌರಿ ಮಿಳ್ಳಿ, ದುರ್ಗವ್ವ ಹರಿಜನ, ಶಶಿಕಲಾ ಸಾರವಾಡ, ಬಸು ಗುಡ್ಡೋಡಗಿ, ದೀಪಾ ಕೊಣ್ಣೂರ, ರಾಹುಲ್ ಕಲಾಲ, ಸುರೇಶ ಹಿಪ್ಪರಗಿ, ರಾಜು ಶಾಸ್ತಿಗೊಲ್ಲರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net