Photos | ಸಿಎಂ ಆಗುವ ಕನಸಿನ ನಾಲ್ವರು ಒಂದೇ ವೇದಿಕೆಯಲ್ಲಿ..; ಆಕರ್ಷಕ ಚಿತ್ರಗಳಿಗೆ ಅಕ್ಷರಗಳ ಚಿತ್ತಾರ..

CM Cong
Published on

ಬೆಂಗಳೂರು: ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿರುವ ಕಾಂಗ್ರೆಸ್​​ನ ನಾಲ್ವರು ಹಿರಿಯ ನಾಯಕರು ಇಂದು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಕಾಂಗ್ರೆಸ್ ದೇಶಾದ್ಯಂತ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆಯ ಪೂರ್ವತಯಾರಿ ಕುರಿತು ಇಂದು ಹಮ್ಮಿಕೊಂಡಿದ್ದ ಸಭೆಯಲ್ಲಿ ಈ ದೃಶ್ಯಗಳು ಕಂಡುಬಂದಿವೆ.

ಇಂದು ಒಂದೇ ವೇದಿಕೆಯಲ್ಲಿ ಇವರು ಕಾಣಿಸಿಕೊಂಡ ವಿವಿಧ ದೃಶ್ಯಗಳು ಆಕರ್ಷಕವಾಗಿದ್ದವು. ಭಾರತ್ ಜೋಡೋ ಯಾತ್ರೆಯ ಪೂರ್ವಭಾವಿ ಸಭೆಯ ಈ ದೃಶ್ಯಗಳಿಗೆ ಅಕ್ಷರಗಳನ್ನು ಜೋಡಿಸಿ ನಿಮ್ಮ ಮುಂದಿಡಲಾಗಿದೆ.

ಭಾರತ್ ಜೋಡೋ ಯಾತ್ರೆಯು ಸೆ. 7ರಂದು ಕನ್ಯಾಕುಮಾರಿಯಿಂದ ಆರಂಭವಾಗಿ 12 ರಾಜ್ಯಗಳ ಮೂಲಕ ಹಾದು, ಸುಮಾರು 3,500 ಕಿಲೋಮೀಟರ್ ದೂರವನ್ನು ಕ್ರಮಿಸಿ, 150 ದಿನಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ಕೊನೆಗೊಳ್ಳಲಿದೆ.

ಚಿತ್ರಗಳು: ಸುಧೀಂದ್ರ ಶ್ರೀರಂಗರಾಜು

ಅಡಿಬರಹ: ಶ್ರೀಕಾಂತ್ ಶೇಷಾದ್ರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net