ಕೊಲೆ ಆರೋಪಿಗಳ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ

crime
Published on

ಬೆಳ್ತಂಗಡಿ: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆಪಾದನೆಯಡಿ ಯುವಕರ ಗುಂಪೊಂದು ಆರೋಪಿ ಮೇಲೆ ಹಲ್ಲೆ ನಡೆಸುತ್ತಿದ್ದ ಸಂದರ್ಭ ಅದನ್ನು ತಡೆಯಲು ಬಂದ ಜಾರಪ್ಪ ನಾಯ್ಕ(55) ಎಂಬುವರು ಕೂಡ ಏಟು ತಿಂದು ಕುಸಿದು ಬಿದ್ದು ಮೃತಪಟ್ಟ ಘಟನೆಗೆ ಸಂಬಂಧಿಸಿ ಆರೋಪಿಗಳ ವಿರುದ್ಧ ಕೊಲೆ ಹಾಗೂ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಇಂದಬೆಟ್ಟು ನಿವಾಸಿಗಳಾದ ಚಂದ್ರಕಾಂತ್ ನಾಯ್ಕ, ಮನೋಹರ್ ಗೌಡ, ಹರಿಪ್ರಸಾದ್ ಪೂಜಾರಿ, ದೀಪಕ್ ಶೆಟ್ಟಿ ಆರೋಪಿಗಳು.
ಇಂದಬೆಟ್ಟು ಶಾಂತಿನಗರದ ಆಟದ ಮೈದಾನದ ಬಳಿ ಬಾಲಕಿಗೆ ಲೈಂಗಿಕ ಕಿರುಕುಳ ಆಪಾದನೆಯಡಿ ನಾರಾಯಣ ನಾಯ್ಕ ಎಂಬುವರಿಗೆ ಶುಕ್ರವಾರ ನಾಲ್ವರು ಆರೋಪಿಗಳು ಹಲ್ಲೆ ನಡೆಸುತ್ತಿದ್ದರು. ಇದನ್ನು ತಡೆಯಲು ಮುಂದಾದ ಜಾರಪ್ಪ ನಾಯ್ಕ ಎಂಬುವರನ್ನು ತಂಡ ದೂಡಿಹಾಕಿತ್ತು. ತೀವ್ರ ಅಸ್ವಸ್ಥಗೊಂಡು ಕೆಳಕ್ಕೆ ಬಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಸಾವನ್ನಪ್ಪಿದ್ದರು.
ಜಾರಪ್ಪ ನಾಯ್ಕ್ಕ ಅವರ ಪುತ್ರ ರಾಜಶೇಖರ್ ಬೆಳ್ತಂಗಡಿ ಠಾಣೆಗೆ ನೀಡಿರುವ ದೂರಿನ ಅನ್ವಯ ನಾಲ್ವರು ಆರೋಪಿಗಳ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯ್ದೆ(ಅಟ್ರಾಸಿಟಿ) ಮತ್ತು ಕೊಲೆ ಆರೋಪದಡಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net