

ರಾಯಚೂರು: ಸರ್ಕಾರ ಸಾಹಿತ್ಯದಲ್ಲಿನ ನನ್ನ ಸಾಧನೆಯನ್ನು ಗುರುತಿಸಿ ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಯನ್ನು ನೀಡುತ್ತಿರುವು ಸಂತೋಷ ತಂದಿದ್ದು, ಈ ಪ್ರಶಸ್ತಿ ನಾಡಿಗೆ ಸಿಕ್ಕ ಪ್ರಶಸ್ತಿಯಾಗಿದೆ ಎಂದು ಪ್ರಶಸ್ತಿ ಪುರಸ್ಕೃತೆ ಎಚ್.ಎಸ್.ಮುಕ್ತಾಯಕ್ಕ ಹೇಳಿದರು.
ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಗೈರು ಹಾಜರಾಗಿದ್ದ ಎಚ್.ಎಸ್.ಮುಕ್ತಾಯಕ್ಕಗೆ ಜಿಲ್ಲಾಡಳಿತದಿಂದ ಮಂಗಳವಾರ ಅವರ ನಿವಾಸಕ್ಕೆ ತೆರಳಿ ಪ್ರಶಸ್ತಿ ಪ್ರದಾನ ಮಾಡಿದ ನಂತರ ಮಾತನಾಡಿ, ಈ ಪ್ರದೇಶ ಅತ್ಯಂತ ನಿರ್ಲಕ್ಷಿತ ಪ್ರದೇಶವೆಂಬ ಹಣೆಪಟ್ಟಿಯನ್ನು ಪಡೆದುಕೊಂಡಿದ್ದು, ಅದನ್ನು ತೊಲಿಸಬೇಕಾಗಿದೆ ಎಂದರು.
ಜಿಲ್ಲಾಕಾರಿ ಚಂದ್ರಶೇಖರ ನಾಯಕ ಪ್ರಶಸ್ತಿ ಪ್ರದಾನ ಮಾಡಿ, ಅತ್ತಿಮಬ್ಬೆ ಪ್ರಶಸ್ತಿಯನ್ನು ಜಿಲ್ಲೆಯ ಎಚ್.ಎಸ್.ಮುಕ್ತಾಯಕ್ಕ ಪಡೆದುಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ಅವರಿಗೆ ಹೆಚ್ಚಿನ ಪ್ರಶಸ್ತಿಗಳು ಲಭಿಸಲಿ ಎಂದು ಹಾರೈಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಕಾರಿ ಆರ್.ಶಿವಕುಮಾರ ಮಾತನಾಡಿ, ಅತ್ತಿಮಬ್ಬೆ ಪ್ರಶಸ್ತಿ ಮುಕ್ತಾಯಕ್ಕರ ಸಾಧನೆಗೆ ಸಿಕ್ಕ ಪ್ರಶಸ್ತಿಯಾಗಿದೆ. ಈ ರೀತಿಯ ಸಾಧಕರು ನಾಡಿನ ಎಲ್ಲ ಕಡೆಯಲ್ಲೂ ಇದ್ದು, ಅವರನ್ನು ಗುರುತಿಸಿ ಗೌರವಿಸುವ ಕಾರ್ಯವಾಗಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಳಾ ನಾಯಕ, ಸಾಹಿತಿಗಳಾದ ವೀರಹನುಮಾನ, ಮಹಾಂತೇಶ ಮಸ್ಕಿ, ಅಯ್ಯಪ್ಪಯ್ಯ ಹುಡಾ, ಈರಣ್ಣ ಬೆಂಗಾಲಿ, ಕಸಾಪ ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ, ಪದಾಕಾರಿಗಳಾದ ರಾವುತರಾವ್ ಬರೂರ, ಮಹಾಂತೇಶ ಬಿರಾದರ, ದಂಡಪ್ಪ ಬಿರಾದರ, ಮುರಳೀಧರ ಕುಲಕರ್ಣಿ ಉಪಸ್ಥಿತರಿದ್ದರು.