

ಅಳವಂಡಿ: ವಿದ್ಯಾರ್ಥಿಗಳ ಪ್ರತಿಭೆಯನ್ನು ನ್ಯಾಯಯುತವಾಗಿ ಗುರುತಿಸುವ ಕೆಲಸ ನಿರ್ಣಾಯಕರು ಮಾಡಲಿ ಎಂದು ಸಿಆರ್‌ಪಿ ವೀರೇಶ ಕೌಟಿ ಹೇಳಿದರು.
ಸಮೀಪದ ಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿ ಜಂಟಿಯಾಗಿ ಹಮ್ಮಿಕೊಂಡಿದ್ದ ಕವಲೂರು ಕ್ಲಸ್ಟರ್ ಮಟ್ಟದ 2023-24ನೇ ಸಾಲಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧಾ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ಇದನ್ನೂ ಓದಿ: ಹೊಸ ಸಂಸತ್ ಭವನ ದೇಶದ ಪ್ರಗತಿಯ ಸಂಕೇತ
ಮಕ್ಕಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು. ನಿರಂತರ ಓದಿನ ಜೊತೆಗೆ ಪ್ರತಿಭಾ ಕಾರಂಜಿ, ಕ್ರೀಡೆ, ಸಂಗೀತ ಮುಂತಾದ ಕಾರ್ಯಕ್ರಮಗಳಲ್ಲಿ ಕಲಿಕಾ ಮಟ್ಟ ಸುಧಾರಣೆಯಾಗಲಿದೆ. ಸೋಲು-ಗೆಲುವನ್ನು ಲೆಕ್ಕಿಸದೇ ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ ಎಂದರು.
ಪ್ರಮುಖರಾದ ಭರಮಪ್ಪ ನಗರ, ತೋಟಪ್ಪ ಶಿಂಟ್ರ, ನಿಂಗನಗೌಡ, ಮಹಾಂತೇಶ ಸಿಂದೋಗಿಮಠ, ನಾಗರಾಜ ಕಗ್ಗಲ್, ವೆಂಕರಡ್ಡಿ ಇಮ್ಮಡಿ, ನೀಲಪ್ಪ ಕರಿಗಾರ, ಮೋದಿನಸಾಬ, ಶೇಖಪ್ಪ, ನೀಲನಗೌಡ, ಹನುಮಂತಪ್ಪ ಗುಡಿ ಹಾಗೂ ಮುಖ್ಯ ಶಿಕ್ಷಕರು, ಶಿಕ್ಷಕರು ಇದ್ದರು.