ಗಮನ ಸೆಳೆದ ಗಣವೇಷಧಾರಿಗಳು

27KITTUR2
Published on

ಚನ್ನಮ್ಮನ ಕಿತ್ತೂರು: ಪಟ್ಟಣದಲ್ಲಿ ವಿಜಯ ದಶಮಿ ಪ್ರಯುಕ್ತ ರಾಷ್ಟ್ರೀಯ ಸ್ವಯಂ ಸೇವಕ ಸಂ ಚನ್ನಮ್ಮನ ಕಿತ್ತೂರು ಟಕದಿಂದ ಭಾನುವಾರ ಆಕರ್ಷಕ ಪಥ ಸಂಚಲನ ನೆರವೇರಿತು.

ಪಟ್ಟಣದ ಪ್ರಮುಖ ಬೀದಿಗಳನ್ನು ರಂಗೋಲಿ, ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಇದೇ ಮೊದಲ ಬಾರಿಗೆ ಪಟ್ಟಣದಲ್ಲಿ ಪಥ ಸಂಚಲನ ನಡೆಯಿತು. 600ಕ್ಕೂ ಹೆಚ್ಚು ಗಣವೇಷಧಾರಿಗಳು ಪಾಲ್ಗೊಂಡಿದರು. ಮಾಜಿ ಶಾಸಕ ಮಹಾಂತೇಶ ದೊಡಗೌಡರ, ಬಸವರಾಜ ಪರವಣ್ಣವರ ಸೇರಿ ಅನೇಕ ಗಣ್ಯರು ಗಣವೇಷದಲ್ಲಿ ಕಾಣಿಸಿಕೊಂಡರು.

ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ಆರಂಭವಾದ ಪಥಸಂಚಲನ ಚನ್ನಮ್ಮ ವೃತ್ತ, ಅರಳಿಕಟ್ಟಿ ವೃತ್ತ, ಗೊಂಬಿಗುಡಿ, ನೇಕಾರ ಓಣಿ, ಬೆಲ್ಲದ ಓಣಿ, ರಾಣಿ ಚನ್ನಮ್ಮ ಕೂಟ, ಕಲ್ಲಗುಡಿ, ರಾವಳ ಓಣಿ, ಹಳೆಯ ಬಸ್​ ನಿಲ್ದಾಣ, ಬಳಿಗಾರ ಓಣಿಯ ಮೂಲಕ ರಾಜಗುರು ಸಂಸ್ಥಾನ ಕಲ್ಮಠಕ್ಕೆ ಬಂದು ಸಮಾವೇಶಗೊಂಡಿತು.

ಕಲ್ಮಠದಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಮಾರಂಭದಲ್ಲಿ ಕರ್ನಾಟಕ ಉತ್ತರ ಪ್ರಾಂತ ಸಂಯೋಜಕ ದಿಲೀಪ ವೆರ್ಣೀಕರ ಮಾತನಾಡಿ, ಬಾಲ್ಯದಲ್ಲಿಯೇ ಮಕ್ಕಳಲ್ಲಿ ದೇಶಾಭಿಮಾನ ಬೆಳೆಯಬೇಕು ಎಂದರು. ರಾಜಗುರು ಸಂಸ್ಥಾನ

ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಾಲೂಕು ಕಾರ್ಯವಾಹ ಪ್ರಶಾಂತ ಕಲಾಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net