

ಬೆಂಗಳೂರು: ಬಿಎಂಟಿಸಿ ಬಸ್ ಪ್ರಯಾಣಿಕರಿಂದ ದೂರು, ಸಲಹೆಗಳನ್ನು ಪಡೆಯುವ ಸಲುವಾಗಿ ಸಹಾಯವಾಣಿ ಸಂಖ್ಯೆ ಬದಲಿಸಲಾಗಿದೆ.
ಈವರೆಗಿನ 18004251663 ಬದಲಾಗಿ, 080 22483777 ಸಂಖ್ಯೆಗೆ ಕರೆ ಮಾಡಲು ಸಾರ್ವಜನಿಕರಲ್ಲಿ ನಿಗಮ ಮನವಿ ಮಾಡಿದೆ. ಸಹಾಯವಾಣಿಯು ಪ್ರತಿದಿನ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಕಾರ್ಯನಿರ್ವಹಿಸಲಿದೆ.