

ಮಂಜುನಾಥ ಅರಸ್, ಚಿಕ್ಕನಾಯಕನಹಳ್ಳಿ: ವರ್ಷಕ್ಕೆ ಲಕ್ಷಾಂತರ ರೂಪಾಯಿ ವಿದ್ಯುತ್ ಬಿಲ್ ಪಾವತಿಸುವ ಸರ್ಕಾರಿ ಇಲಾಖೆಗಳು ತಮ್ಮಲ್ಲೇ ವಿದ್ಯುತ್ ಉತ್ಪಾದಿಸಿಕೊಳ್ಳುವಲ್ಲಿ ಕಾಳಜಿ ತೋರಿಸುತ್ತಿಲ್ಲ. ಹೇರಳವಾಗಿ ದೊರೆಯುವ ಶಕ್ತಿ ಸಂಪನ್ಮೂಲವನ್ನು ಸದ್ಬಳಿಸಿಕೊಂಡು ಸರ್ಕಾರಕ್ಕಾಗುವ ಅನಗತ್ಯ ಹೊರೆ ತಪ್ಪಿಸಲು ಯಾವುದೇ ಇಲಾಖೆ ಅಧಿಕಾರಿಗಳು ಮುಂದಾಗದಿರುವುದು ಅವರಲ್ಲಿರುವ ರ್ನಿಲಕ್ಷ$್ಯದ ಮನೋಭಾವ ಎದ್ದು ತೋರುಸುತ್ತಿದೆ.
ತಾಲೂಕಿನಲ್ಲಿ ಸುಮಾರು 20 ಸರ್ಕಾರಿ ಇಲಾಖೆಗಳು ಕಾರ್ಯನಿರ್ವಹಿಸುತ್ತಿದ್ದರೂ ಇದರಲ್ಲಿ ಬೆಸ್ಕಾಂ ಹೊರತುಪಡಿಸಿ ಇನ್ಯಾವುದೇ ಇಲಾಖೆಗಳು ಸೌರ ಸಂಪನ್ಮೂಲ ಬಳಸಿಕೊಳ್ಳುತ್ತಿಲ್ಲ. ವರ್ಷಕ್ಕೆ ಕನಿಷ್ಠ ಸಹಸ್ರಾರು ರೂಪಾಯಿ ವಿದ್ಯುತ್ ಬಿಲ್ ಪಾವತಿಸುವ ಸಂಬಂದಪಟ್ಟ ಅಧಿಕಾರಿಗಳು ತಮ್ಮ ಇಲಾಖೆಯಲ್ಲಿ ಆಗುತ್ತಿರುವ ರ್ಖಚನ್ನು ನಿಭಾಯಿಸುವಲ್ಲಿ ವಿಲರಾಗಿದ್ದಾರೆ. ಇಲಾಖಾ ಕಟ್ಟಡಗಳ ಮೇಲೆ ಸೋಲಾರ್ ಲಕ ಅಳವಡಿಸಿಕೊಂಡರೆ ಬಹುಪಾಲು ವಿದ್ಯುತ್ ಇಲ್ಲಿಂದಲೇ ಪಡೆಯಬಹುದು. ಆದರೆ, ಈ ಕನಿಷ್ಠ ಪ್ರಜ್ಞೆಯು ಇಲ್ಲದ ಅಧಿಕಾರಿಗಳು ಈ ಬಗ್ಗೆ ಗಮನಹರಿಸದಿರುವುದು ವಿಪರ್ಯಾಸವಾಗಿದೆ.
ಇನ್ನೂ ಪ್ರತಿ ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯ ಕುಡಿಯುವ ನೀರು ಪೂರೈಕೆ ಮಾಡಲು ಸೋಲಾರ್ ಲಕಗಳಿಂದ ಉತ್ಪತ್ತಿಯಾಗುವ ವಿದ್ಯುತ್ ಅವಲಂಬಿಸಿದರೆ ಹೆಚ್ಚುವರಿಯಾಗಿ ಬೇಕಾಗುವ ವಿದ್ಯುತ್ ಬಳಕೆಯ ಒತ್ತಡ ಕಡಿಮೆ ಮಾಡಬಹುದು.
ತಾಲೂಕಿನ 27 ಗ್ರಾಪಂಗಳು, ಪಟ್ಟಣದ ಪುರಸಭೆ, ಹುಳಿಯಾರಿನ ಪಪಂಗಳ ವ್ಯಾಪ್ತಿಯಲ್ಲಿನ ಕುಡಿಯುವ ನೀರಿನ ಕೊಳವೆಬಾವಿಗಳಿಗೆ ಸೋಲಾರ್ ಲಕ ಹಾಗೂ ಪಂಪ್ ಆಳವಡಿಸಿಕೊಳ್ಳಬೇಕಿದೆ. ಸರ್ಕಾರ ಇತ್ತ ಗಮನಹರಿಸಿ ವಿದ್ಯುತ್ ಶಕ್ತಿಯನ್ನು ಉಳಿಸುವ ಕೆಲಸವಾಗಬೇಕಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯಸರ್ಕಾರದ ಅನುದಾನಗಳಲ್ಲಿ ರೈತರ ಪಂಪ್ಗಳಿಗೆ ಸೋಲಾರ್ ಲಕ ಅಳವಡಿಸಲು ಮುಂದಾಗಿದೆ. ಆದರೆ ಇಲಾಖೆಗಳ ಬಳಕೆಗೆ ಮತ್ತು ಬೋರ್ವೆಲ್ ಮತ್ತು ವಿದ್ಯುತ್ ಉಪಕರಣ ಬಳಕೆಗೆ ಸೌರ ವಿದ್ಯುತ್ ಬಳಸಿಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರೆ ವಿದ್ಯುತ್ ಉಳಿತಾಯದ ಜತೆಗೆ ಸರ್ಕಾರದ ಬೊಕ್ಕಸಕ್ಕೆ ಆಗುವ ಅನಗತ್ಯ ಹೊರೆ ತಪ್ಪಿಸಲು ಸಾಧ್ಯವಾಗುತ್ತದೆ.
ರೈತರಿಗೆ ಶೇ.80 ಸಬ್ಸಿಡಿ
ತಾಲೂಕಿನಲ್ಲಿ ಈಗಾಗಲೇ ಸೋಲಾರ್ ಅಳವಡಿಕೆಗೆ ಮುಂದಾಗಿರುವ ಸುಮಾರು 53 ರೈತರಿಗೆ ಒಟ್ಟು ಸೋಲಾರ್ ಲಕಗಳ ಖರ್ಚಿನಲ್ಲಿ ಶೇ.80ರಷ್ಟು ಹಣವನ್ನು ಸರ್ಕಾರವೇ ಭರಿಸಲಿದ್ದು, ಉನ್ನುಳಿದ ಶೇ.20ರಷ್ಟನ್ನು ಸಂಬಂಧ ಪಟ್ಟ ರೈತರು ನೀಡಬೇಕಾಗಿದೆ. ಬಹುತೇಕ ರೈತರು ಈ ಸೋಲಾರ್ ಲಕ ಅಳವಡಿಕೊಳ್ಳಲು ಮುಂದಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.
ವಿದ್ಯುತ್ ಬಳಕೆಯು ದಿನೇದಿನೆ ಹೆಚ್ಚಾಗುತ್ತಿದೆ. ಇದರಿಂದ ಬೆಸ್ಕಾಂ ಮೇಲಿನ ಒತ್ತಡ ಹೆಚ್ಚಾಗುತ್ತಿದೆ. ಅದ್ದರಿಂದ ಪ್ರತಿಯೊಂದು ಸರ್ಕಾರಿ ಕಚೇರಿಗಳಲ್ಲಿ ಸೌರಲಕ ಅಳವಡಿಸಿಕೊಂಡು ಖರ್ಚು ಕಡಿಮೆಯಾಗುತ್ತದೆ. ಸರ್ಕಾರದ ಮೇಲಾಗುತ್ತಿರುವ ಅಧಿಕ ಹೊರೆ ಕಡಿಮೆಯಾಗುತ್ತದೆ. ಈ ಬಗ್ಗೆ ಸಾರ್ವಜನಿಕರು, ರೈತರು ಸಹ ಕೈಜೋಡಿಸಬೇಕು. ಗವಿರಂಗಯ್ಯ ಬೆಸ್ಕಾಂ ಎಇಇ
ಸರ್ಕಾರ ಮೊದಲು ಸಂಬಂದಪಟ್ಟ ಕಚೇರಿಗಳಲ್ಲಿನ ವಿದ್ಯುತ್ ಸಮಸ್ಯೆ ಬಗ್ಗೆ ಗಮನಹರಿಸಬೇಕು. ಹಾಸ್ಟೆಲ್, ಬೋರ್ವೆಲ್ಗಳಿಗೆ ಸೋಲಾರ್ ವಿದ್ಯುತ್ ಬಳಸುವಂತೆ ಕಟ್ಟುನಿಟ್ಟಿನಿಂದ ಆದೇಶಿಸಬೇಕು. ಇದರಿಂದ ಬೆಸ್ಕಾಂ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಸರ್ಕಾರಕ್ಕೂ ಹಣ ಉಳಿತಾಯವಾಗುತ್ತದೆ. ಬರಗೂರು ಬಿ.ಕಿರಣ್ ಯುವ ಮುಖಂಡ