ಗಮನ ಸೆಳೆದ ಸಂಗೀತ ಕಾರ್ಯಕ್ರಮ

ತುಮಕೂರಿನ ಎಸ್.ಎಸ್.ಪುರಂನಲ್ಲಿರುವ ವಾಸವಿ ದೇವಸ್ಥಾನದಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ  ಲಕ್ಷ್ಮೀ ನಾಗೇಶ್ ಅವರ ಗಾಯನ ಗಮನ ಸೆಳೆಯಿತು.
ತುಮಕೂರಿನ ಎಸ್.ಎಸ್.ಪುರಂನಲ್ಲಿರುವ ವಾಸವಿ ದೇವಸ್ಥಾನದಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಲಕ್ಷ್ಮೀ ನಾಗೇಶ್ ಅವರ ಗಾಯನ ಗಮನ ಸೆಳೆಯಿತು.
Published on

ಅರಸೀಕೆರೆ ಗ್ರಾಮಾಂತರ: ಶ್ರೀ ತ್ಯಾಗರಾಜರು ಮತ್ತು ಪುರಂದರದಾಸರ ಆರಾಧನೆ ಪ್ರಯುಕ್ತ ತುಮಕೂರಿನ ಎಸ್.ಎಸ್.ಪುರಂನಲ್ಲಿರುವ ವಾಸವಿ ದೇವಸ್ಥಾನದ ರಾಘವೇಂದ್ರ ಸಂಗೀತ ಸಭಾದಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಸಂಗೀತ ವಿದುಷಕಿ ಲಕ್ಷ್ಮೀ ನಾಗೇಶ್ ಅವರ ಗಾಯನ ಎಲ್ಲರ ಗಮನ ಸೆಳೆಯಿತು.

ತಾಲೂಕಿನ ಕೆ.ಜೆ.ಅಗ್ರಹಾರ ನಿವಾಸಿಯಾದ ಲಕ್ಷ್ಮೀ ನಾಗೇಶ್, ಸಂಗೀತದ ವಿವಿಧ ಪ್ರಾಕಾರಗಳನ್ನು ಪ್ರಸ್ತುತ ಪಡಿಸುವ ಮೂಲಕ ಪ್ರೇಕ್ಷಕರ ಮನ ತಣಿಸಿದರು. ವಿದ್ವಾನ್ ಪ್ರಸನ್ನ ಕುಮಾರ್ ಅವರ ವಯಲಿನ್ ವಾದನ, ವಿದ್ವಾನ್ ಸಾಗರ್ ಅವರ ಮೃದಂಗ ಸಂಗೀತ ರಸದೌತಣವನ್ನೇ ಉಣಬಡಿಸಿತು.

ಇದೇ ವೇಳೆ ರಾಘವೇಂದ್ರ ಸಂಗೀತ ಸಭಾ ಅಧ್ಯಕ್ಷೆ ಲಲಿತಕಲಾ, ಲಕ್ಷ್ಮೀ ನಾಗೇಶ್ ಅವರನ್ನು ಸನ್ಮಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net