

ಕಟಕೋಳ: ಗ್ರಾಮದಲ್ಲಿ ಶ್ರೀ ಗ್ರಾಮದೇವತೆಯರ ಜಾತ್ರಾ ಮಹೋತ್ಸವದ ಅಂಗವಾಗಿ ನಾಲ್ಕನೇ ದಿನ ಶುಕ್ರವಾರ ದೇವಿಯರಿಗೆ ಭಕ್ತರು ಉಡಿ ತುಂಬಿ ಭಕ್ತಿ ಸಮರ್ಪಿಸಿದರು.
ಗ್ರಾಮದ ಎಲ್ಲ ದೇವಸ್ಥಾನಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಿದವು. ರಾತ್ರಿ ಹಮ್ಮಿಕೊಂಡಿದ್ದ ರಸಮಂಜರಿ ಕಾರ್ಯಕ್ರಮವನ್ನು ಗ್ರಾಪಂ ಮಾಜಿ ಉಪಾಧ್ಯ ಬಾಪುಸಾಹೇಬ ದೇಸಾಯಿ ಉದ್ಘಾಟಿಸಿದರು. ರಾಜ್ಯಮಟ್ಟದ ತೆರಬಂಡಿ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಒಂಟಗೋಡಿಯ ಲ$್ಮದೇವಿ ಪ್ರಸನ್ನ ಪ್ರಥಮ, ಜಮಖಂಡಿಯ ಜೈ ಹನುಮಾನ ಪ್ರಸನ್ನ ದ್ವೀತಿಯ ಹಾಗೂ ಇಂಗಳಗಿಯ ಬನಶಂಕರಿ ದೇವಿ ಪ್ರಸನ್ನ ತೃತೀಯ ಬಹುಮಾನ ಪಡೆದರು.
ರಾಜ್ಯಮಟ್ಟದ ಜೋಡೆತ್ತಿನ ಚಕ್ಕಡಿ ಹಾಗೂ ಜೋಡು ಕುದುರೆ ಸ್ಪರ್ಧೆ ಜರುಗಿತು. ಜೋಡೆತ್ತಿನ ಚಕ್ಕಡಿ ಸ್ಪರ್ಧೆಯಲ್ಲಿ ಉಮೇಶ ಪಾರಸೆ ಪ್ರಥಮ, ಬಾಳುದಾದಾ ಹಜಾರೆ ದ್ವೀತಿಯ ಹಾಗೂ ಅಜಂತ್ಯಾ ಕೊಪರ್ಡೆ ತೃತೀಯ ಸ್ಥಾನ ಪಡೆದರು. ಜೋಡು ಕುದುರೆ ಚಕ್ಕಡಿ ಸ್ಪರ್ಧೆಯಲ್ಲಿ ಸಚಿನ್ ಕೊಡ್ಲವಾಡ ಪ್ರಥಮ, ಲಕ್ಕಪ್ಪ ಗೊರಗುದ್ದಿ ದ್ವೀತಿಯ ಹಾಗೂ ಅಣ್ಣಾಸಾಹೇಬ ದೇಸಾಯಿ ತೃತೀಯ ಸ್ಥಾನ ಪಡೆದರು. ವಿವಿಧೆಡೆಯಿಂದ ಆಗಮಿಸಿದ ಜನರು ರೋಚಕ ಸ್ಪರ್ಧೆ ಕಣ್ತುಂಬಿಕೊಂಡರು.
ಮಾಜಿ ಶಾಸಕ ಮಹಾದೇವಪ್ಪ ಯಾದವಾಡ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಶ್ರೀಕಾಂತ ಢವಣ, ಪಿಕೆಪಿಎಸ್ ನಿರ್ದೇಶಕ ಎಂ.ಎಂ. ಆತಾರ, ಜಿಪಂ ಮಾಜಿ ಸದಸ್ಯ ಎಂ.ಜಿ.ತುಪ್ಪದ, ಗ್ರಾಪಂ ಸದಸ್ಯ ಅಮಿತ್ ದೇಸಾಯಿ, ಸಿದ್ರಾಯ ಹೊಸಮನಿ, ಬಿ.ಕೆ.ಆತಾರ, ಶ್ರೀಕಾಂತ ಭಜಂತ್ರಿ, ಮಂಜುನಾಥ ಪಾಟೋಳಿ, ಅವಿನಾಶ ನಲವಡೆ, ಪುಂಡಲೀಕ ದಂದಾರ, ಕಲ್ಲಪ್ಪ ತುಪ್ಪದ ಇತರರಿದ್ದರು.