ಗಮನ ಸೆಳೆದ ವಿದ್ಯಾರ್ಥಿಗಳ ಪಥಸಂಚಲನ

26Chikkodiigramin1
Published on

ಚಿಕ್ಕೋಡಿ ಗ್ರಾಮೀಣ: ತಾಲೂಕಿನ ಯಕ್ಸಂಬಾದ ಜೊಲ್ಲೆ ಗ್ರೂಪ್‌ನ ವಿವಿಧ ಅಂಗ ಸಂಸ್ಥೆಗಳಲ್ಲಿ ಈಚೆಗೆ ವಿಜೃಂಭಣೆಯ 76ನೇ ಗಣರಾಜ್ಯೋತ್ಸವ ಆಚರಿಸಲಾಯಿತು.

ವೆಲಕಮ್ ಐಟಿಸಿ ಹೋಟೆಲ್: ಜೊಲ್ಲೆ ಗ್ರೂಪ್ ಅಂಗ ಸಂಸ್ಥೆಯಾದ ಬೆಳಗಾವಿಯ ವೆಲಕಮ್ ಐಟಿಸಿ ಹೋಟೆಲ್‌ನಲ್ಲಿ 76ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕಿ ಶಶಿಕಲಾ ಜೊಲ್ಲೆ ನೆರವೇರಿಸಿದರು. ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆ ಅಧ್ಯಕ್ಷ ಜ್ಯೋತಿಪ್ರಸಾದ ಜೊಲ್ಲೆ ಸೇರಿ ಗಣ್ಯರು ಪಾಲ್ಗೊಂಡಿದ್ದರು.

ಯಕ್ಸಂಬಾ ಜೊಲ್ಲೆ ಶಿಕ್ಷಣ ಸಂಸ್ಥೆ: ಯಕ್ಸಂಬಾದ ಶಿವಶಂಕರ ಜೊಲ್ಲೆ ಕನ್ನಡ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಜೊಲ್ಲೆ ಎಜುಕೇಷನ್ ಸೊಸೈಟಿ ಸಂಚಾಲಕ ಮಂಡಳಿ ಸದಸ್ಯೆ ಲತಾ ವಾಳಕೆ ಧ್ವಜಾರೋಹಣ ನೆರವೇರಿಸಿ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಮಹಾತ್ಮ್ಮ ಗಾಂಧೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ವಿದ್ಯಾರ್ಥಿಗಳು ಆಕರ್ಷಕ ಪಥ ಸಂಚಲನ, ಕವಾಯತ ಪ್ರದರ್ಶನ, ಭಾಷಣ ಮಾಡಿದರು. ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಭಾಷಾ ವಿಷಯಗಳ ಕಲಿಕೋಪಕರಣಗಳ ಪ್ರದರ್ಶನ ಹಾಗೂ ಚಿತ್ರ ಸ್ಪರ್ಧೆ ಜರುಗಿತು. ಎಣ್ಣೆ ಬೆಳೆಗಾರರ ಸಹಕಾರಿ ಸಂಘದ ಅಧ್ಯಕ್ಷ ಲಕ್ಷ್ಮಣ ಕಬಾಡೆ ಸ್ಪರ್ಧೆ ಉದ್ಘಾಟಿಸಿದರು.

ಡಾ.ಶಿರಿಷ ಕೇರೂರ, ವಿ.ಆರ್.ಭಿವಸೆ, ಎಸ್.ಜಿ.ಕಾಮತ, ಜಯಾನಂದ ಜಾಧವ, ವಿಶ್ವನಾಥ ಪೇಟಕರ, ಅಪ್ಪಾಸಾಹೇಬ ಜೊಲ್ಲೆ, ಸುಜಾತಾ ಕಬಾಡೆ, ಅನುಸೂಯಾ ಪಾಟೀಲ, ಫೈಮಿದಾ ದಾಡಿವಾಲೆ, ಲಕ್ಷ್ಮೀಬಾಯಿ ಮ್ಹೇತ್ರೆ, ಮಂಗಲ ಜೊಲ್ಲೆ, ಬಹದ್ಧೂರ ಗುರವ, ಸಂತೋಷ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net