ಗಮನ ಸೆಳೆದ ಮಕ್ಕಳ ಅಣಕು ಪ್ರದರ್ಶನ

14Jaggu8
ಬೆಳಗಾವಿ ತಾಲೂಕಿನ ಕಾಕತಿಯ ಸರ್ಕಾರಿ ಪ್ರೌಢಶಾಲೆ ಮಕ್ಕಳು ಶುಕ್ರವಾರ ಅಣಕು ಕಲಾಪ ನಡೆಸಿ ಗಮನ ಸೆಳೆದರು.
Published on

ಬೆಳಗಾವಿ: ಬೆಳಗಾವಿ ಚಳಿಗಾಲದ ಅಧಿವೇಶನ ವೇಳೆ ಸುವರ್ಣ ವಿಧಾನಸೌಧ ಸಭಾಭವನದಲ್ಲಿ ಶಾಲಾ ಮಕ್ಕಳಿಂದ ವಿಶೇಷ ಸಾಂಸ್ಕೃತಿಕ

ಕಾರ್ಯಕ್ರಮಗಳು ಜರುಗುತ್ತಿದ್ದು, ಶುಕ್ರವಾರ ತಾಲೂಕಿನ ಕಾಕತಿಯ ಸರ್ಕಾರಿ ಪ್ರೌಢಶಾಲೆ ಮಕ್ಕಳಿಂದ ವಿಶೇಷ ಅಣಕು ಸಂಸತ ಪ್ರದರ್ಶನ ನಡೆಯಿತು.

ರಾಜ್ಯದ ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಮತ್ತು ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದ ಘಟನೆಗಳ ಕುರಿತಂತೆ ಮಕ್ಕಳು ಅಣಕು ಕಲಾಪ ನಡೆಸಿದರು. ವಿಧಾನಸಭಾಧ್ಯಕ್ಷ, ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರು ಸಂಬಂಧಪಟ್ಟ ಇಲಾಖೆಗಳ ಮಂತ್ರಿಗಳ ಕುರಿತಾದ ಪ್ರಶ್ನಾವಳಿ ಮಾದರಿಯಲ್ಲಿ ಕಲಾಪ ನಡೆಯಿತು.

ಸಮಾಜ ವಿಜ್ಞಾನ ಶಿಕ್ಷಕಿ ಸುಮಿತ್ರಾ ಕರವಿನಕೊಪ್ಪ ಮಾರ್ಗದರ್ಶನ ನೀಡಿದ್ದರು. ಸೂಫಿಯಾ ಸನದಿ, ಸಾಧನಾ ಅಗಸಿಬಾಗಿಲ, ಭೂಮಿಕಾ ಕುರುಬರ, ನೇತ್ರ ಪಟ್ಟೆದ, ಸಮೀಕ್ಷಾ ಸುತಾರ, ಶ್ವೇತಾ ಬಡಿಗೇರ ಸಿದ್ದಾರ್ಥ್ ಕುರುಬರ, ಸೃಷ್ಟಿ ಹಿರೇಮಠ, ಮೇಘಾ ಕಲ್ಲೂರ ಹೇಮಂತ ನಾಯ್ಕ, ಶಿವಾನಂದ ಹರಿಜನ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಶಾಲಾ ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕ ಎಸ್.ಐ.ಕಂಬಳಿ, ನಿಜಲಿಂಗಪ್ಪ ಮದನಭಾವಿ, ಶಿವಾನಂದ ತಲ್ಲೂರ, ಮಹೇಶ ಅಕ್ಕಿ ಸಾಂಸ್ಕೃತಿಕ ಕಾರ್ಯಕ್ರಮಗಳ ಉಸ್ತುವಾರಿ ವಹಿಸಿದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಶಾಲಾ ಮಕ್ಕಳು ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸದನದ ಕಲಾಪ ವೀಕ್ಷಿಸಲು ಬಂದ ಸಾರ್ವಜನಿಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net