

ಬೆನಕಟ್ಟಿ: ಗ್ರಾಮದಲ್ಲಿ ಹಿಂದು&ಮುಸ್ಲಿಂ ಭಾವೈಕ್ಯತೆಯ ಮೊಹರಂ ಹಬ್ಬ ಭಾನುವಾರ ಸಂಭ್ರಮದಿಂದ ಆಚರಿಸಲಾಯಿತು. ಬೆಳಗ್ಗೆ ಗ್ರಾಮದ ಮಸೀದಿ ಆವರಣದಲ್ಲಿ ಸಿದ್ಧಪಡಿಸಿದ್ದ ಅಗ್ನಿ ಕುಂಡದಲ್ಲಿ ಡೋಲಿ ಹಾಗೂ ಪಂರ ದೇವರನ್ನು ಹೊತ್ತು ಸಾಗುವ ಮೂಲಕ ಶ್ರದ್ಧಾ, ಭಕ್ತಿಯಿಂದ ್ತಸೇವೆ ಮಾಡಿದರು. ಬಳಿಕ ಗ್ರಾಮದ ಅಗಸಿಯಲ್ಲಿ ಎರಡು ಡೋಲಿಗಳು ಪರಸ್ಪರ ಭೇಟಿಯಾದವು. ಪುನ@ ಮಸೀದಿಯತ್ತ ಮರಳಿದವು. ಸಂಜೆ ಶ್ರೀ ಬಸವೇಶ್ವರ, ಶ್ರೀ ಮಾರುತೇಶ್ವರ ಬಯಲಿನಲ್ಲಿ ಯುವಕರು ಹೂ&ಗಿಡ ಹಿಡಿದುಕೊಂಡು ಕರಬಲ್, ಕುದುರೆ ಹಾಗೂ ವಿವಿಧ ವೇಷಭೂಷಣಗಳಲ್ಲಿ ಸೋಗು ಪ್ರದರ್ಶಿಸುವ ಮೂಲಕ ಸಂಭ್ರಮಿಸಿದರು.