ಗಮನ ಸೆಳೆದ ಕುದುರೆಗಳ ಸಾಹಸಮಯ ಓಟ

7gkk3a
ಗೋಕಾಕ ನಗರದಲ್ಲಿ ಗ್ರಾಮದೇವಿಯರ ಜಾತ್ರೆ ನಿಮಿತ್ತ ಹಮ್ಮಿಕೊಂಡಿದ್ದ ಕುದುರೆ ಗಾಡಿ ಶರ್ಯತ್ತಿನಲ್ಲಿ ಎಲ್ಲರ ಗಮನ ಸೆಳೆದ ಕುದುರೆಗಳ ಓಟ.
Published on

ಗೋಕಾಕ: ನಗರದ ಗ್ರಾಮದೇವಿಯರ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಕುದುರೆ ಗಾಡಿ ಶರ್ಯತ್ತಿನಲ್ಲಿ ಕುದುರೆಗಳ ಸಾಹಸಮಯ ಓಟ ಹಾಗೂ ಸೈಕಲ್ ಸ್ಪರ್ಧೆಗಳು ಜನರ ಚಿತ್ತ ಸೆಳೆದವು.

ಗೋಕಾಕ ನಾಕಾ ನಂ-1ರಿಂದ ಕುದುರೆ ಗಾಡಿ ಶರ್ಯತ್ತು ಪ್ರಾರಂಭವಾಗಿ ದುಂಡಾನಟ್ಟಿ ಈಶ್ವರಲಿಂಗ ದೇವಸ್ಥಾನ ತಲುಪಿ ಮರಳಿ ಬಂದ ಗೋಕಾಕ ನಗರದ ಕರೆಪ್ಪ ಭಂಡಾರಿ ಕುದುರೆಗಳು ಪ್ರಥಮ ಸ್ಥಾನದೊಂದಿಗೆ 2 ಲಕ್ಷ ರೂ. ಒಂದು ಡಾಲ್, ದ್ವಿತೀಯ ಸ್ಥಾನ ಪಡೆದ ಕಿರಣ ರಂಕನಕೊಪ್ಪ ಕುದುರೆಗಳು 1 ಲಕ್ಷ ರೂ. ಹಾಗೂ ಉಮರಾಣಿಯ ರಾಜು ಕುದುರೆಗಳು ತತೀಯ ಸ್ಥಾನದೊಂದಿಗೆ 50 ಸಾವಿರ ರೂ. ಬಹುಮಾನ ಪಡೆದವು.

ಸೈಕಲ್ ಸ್ಪರ್ಧೆಯಲ್ಲಿ ಅವರಾದಿ ಗ್ರಾಮದ ಕರೆಪ್ಪ ಕೊಕ್ಕಡಿ ಪ್ರಥಮ ಸ್ಥಾನದೊಂದಿಗೆ 1 ಲಕ್ಷ ರೂ., ಬೀಳಗಿಯ ಅರುಣ ಲಮಾಣಿ ದ್ವಿತೀಯ ಸ್ಥಾನದೊಂದಿಗೆ 75 ಸಾವಿರ ರೂ., ವಿಜಯಪುರದ ಮಹಮ್ಮದ್ ಸಾಧನಿ ತೃತೀಯ ಸ್ಥಾನದೊಂದಿಗೆ 50 ಸಾವಿರ ರೂ. ಹಾಗೂ ಕೊಲ್ಲಾಪುರದ ಸಿದ್ದೇಶ ಪಾಟೀಲ ನಾಲ್ಕನೇ ಸ್ಥಾನ ಪಡೆದು 25ಸಾವಿರ ರೂ. ಬಹುಮಾನ ಪಡೆದರು. ಸ್ಪರ್ಧೆಗಳಿಗೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ನಗದು ಬಹುಮಾನ ವಿತರಿಸಿದರು. ಯುವನಾಯಕ ಅಮರನಾಥ ಜಾರಕಿಹೊಳಿ, ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ, ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಜಿಪಂ ಮಾಜಿ ಸದಸ್ಯ ಟಿ.ಆರ್. ಕಾಗಲ್, ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ, ಪ್ರಭು ಚವ್ಹಾಣ, ಅಡಿವೆಪ್ಪ ಕಿತ್ತೂರ, ಸಗೀರ ಕೋತವಾಲ, ಸಾಗರ ಗುಡ್ಡದಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net