

ಗೋಕಾಕ: ನಗರದ ಶುಭಂ ಗಾರ್ಡನ್ದಲ್ಲಿ ಜೆಸಿಐ ಸಂಸ್ಥೆ ಹಾಗೂ ಬನಶಂಕರಿ ಮಹಿಳಾ ಮಂಡಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಒಂಬತ್ತನೇ ವರ್ಷದ ದಾಂಡಿಯಾ ಮಹೋತ್ಸವಕ್ಕೆ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಉಮೇಶ ಆತ್ನುರೆ ಶನಿವಾರ ಚಾಲನೆ ನೀಡಿದರು.
ಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ಗುಂಪು ನೃತ್ಯ ಸ್ಪರ್ಧೆಯಲ್ಲಿ ಲಕ್ಕಿ ಡಾನ್ಸ್ ತಂಡ ಪ್ರಥಮ, ವೇದಾ ಡಾನ್ಸ್ ತಂಡ ದ್ವೀತಿಯ ಹಾಗೂ ಶ್ಯಾನಿಡೋ ಡಾನ್ಸ್ ತಂಡ ತೃತೀಯ ಸ್ಥಾನ ಪಡೆದವು. ಒಂದನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ಮಹಾದೇವ ಕಾನಟ್ಟಿ, ಜೆಎಂಎ್ಸಿ ಪ್ರಧಾನ ನ್ಯಾಯಾಧೀಶೆ ಚೈತ್ರಾ ಕುಲಕರ್ಣಿ, ಒಂದನೇ ಹೆಚ್ಚುವರಿ ಜೆಎಂಎ್ಸಿ ನ್ಯಾಯಾಧೀಶ ಅಭಿನಯ, ವಕೀಲರ ಸಂದ ಅಧ್ಯ ಸುಭಾಸಚಂದ್ರ ಪಾಟೀಲ, ಖಜಾಂಚಿ ಅಪ್ಪಣ್ಣ ಖಂಡ್ರಟ್ಟಿ, ವಿಜಯಕ್ಷಿ$್ಮ ಸಿದ್ಧಾಪುರಮಠ, ನಗರಸಭೆ ಅಧ್ಯ ಪ್ರಕಾಶ ಮುರಾರಿ, ಜೆಸಿಐ ಸಂಸ್ಥೆಯ ವಿಷ್ಣು ಲಾತೂರ, ಶಿವಲಿಂಗ ಕೆ., ರಾಜೇಶ್ವರಿ ಕಿತ್ತೂರ, ಜ್ಯೋತಿ ನಜಾರೆ, ಸೀಮಾ ಕಲ್ಯಾಣಶೆಟ್ಟಿ, ಕಿಶೋರ ಭಟ್, ರವೀಂದ್ರ ಕಿತ್ತೂರ, ಬಸವರಾಜ ಗಂಗರಡ್ಡಿ, ಪ್ರಕಾಶ ಕಿತ್ತೂರ, ರೇಖಾ ಕ್ಯಾಸ್ತಿ, ಇಮ್ತಿಯಾಜ್ ದೇದಾರ, ಕಾಟೇಶ ಗೋಕಾವಿ ಇತರರಿದ್ದರು.