

ಮೂಡುಬಿದಿರೆ: ನಿಡ್ಡೋಡಿ ಮನೆಯೊಂದರಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯರಿಬ್ಬರಿಗೆ ಸಾಮೂಹಿಕ ಅತ್ಯಾಚಾರವೆಸಗಲು ತಯಾರಿ ನಡೆಸುತ್ತಿದ್ದ ನಾಲ್ವರು ದುಷ್ಕರ್ಮಿಗಳನ್ನು ಸಮಯ ಪ್ರಜ್ಞೆಯಿಂದ ಬಂಧಿಸಿದ ಮೂಡುಬಿದಿರೆ ಪೋಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ಮತ್ತು ಪೊಲೀಸ್ ಸಿಬ್ಬಂದಿಯನ್ನು ಜನವಾದಿ ಮಹಿಳಾ ಸಂಘಟನೆ ಮೂಡುಬಿದಿರೆ ತಾಲೂಕು ಸಮಿತಿ ಅಭಿನಂದಿಸಿ, ಮನವಿ ನೀಡಲಾಯಿತು. ಮಂಗಳವಾರ ಸಂಘಟನೆ ಉನ್ನತ ಮಟ್ಟದ ನಿಯೋಗ ಮನವಿಯನ್ನು ಪೊಲೀಸ್ ನಿರೀಕ್ಷಕರಿಗೆ ನೀಡಿ ಆರೋಪಿತ ದುಷ್ಕರ್ಮಿಗಳನ್ನು ಕಠಿಣ ಶಿಕ್ಷೆಗೊಳಪಡಿಸಬೇಕೆಂದು ಒತ್ತಾಯಿಸಲಾಯಿತು. ಜನವಾದಿ ಮಹಿಳಾ ಸಂಘಟನೆ ತಾಲೂಕು ಕಾರ್ಯದರ್ಶಿ ಲಕ್ಷ್ಮೀ, ತಾಲೂಕು ಸಮಿತಿ ಸದಸ್ಯರಾದ ಗಿರಿಜ, ರಕ್ಷಾ, ಸಿಪಿಐ ಪಕ್ಷ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ವಸಂತ ಆಚಾರಿ ಉಪಸ್ಥಿತರಿದ್ದರು.