ಮೆಡಿಕಲ್‌ಗೆ ನುಗ್ಗಿ ಮಾನಭಂಗ ಯತ್ನ

Ishwaramamngala attempted rape
Published on

ಈಶ್ವರಮಂಗಲ: ಔಷಧ ಖರೀದಿಗೆಂದು ಈಶ್ವರಮಂಗಲದ ಮೆಡಿಕಲ್‌ಗೆ ಬಂದಿದ್ದ ಈಶ್ವರಮಂಗಲ ಕುಕ್ಕಾಜೆ ನಿವಾಸಿ ಇಬ್ರಾಹಿಂ ಕುಕ್ಕಾಜೆ (60) ಎಂಬಾತ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ್ದು, ಸಾರ್ವಜನಿಕರು ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.

ಮೆಡಿಕಲ್‌ನಲ್ಲಿ ಮಹಿಳೆ ಒಬ್ಬರೇ ಇರುವುದನ್ನು ಗಮನಿಸಿದ ಇಬ್ರಾಹಿಂ ಒಳನುಗ್ಗಿ ಮಾನಭಂಗಕ್ಕೆ ಯತ್ನಿಸಿದ್ದು, ಈ ವೇಳೆ ಮಹಿಳೆ ಕಿರುಚಿದ್ದರು. ತಕ್ಷಣ ಸುತ್ತಮುತ್ತಲಿದ್ದ ಮಂದಿ ಜಮಾಯಿಸಿ ಆತನನ್ನು ಹಿಡಿದು ಈಶ್ವರಮಂಗಲ ಹೊರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಸಂತ್ರಸ್ತ ಮಹಿಳೆ ನೀಡಿದ ದೂರಿನಂತೆ ಸಂಪ್ಯ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯನ್ನು ಪೊಲೀಸರು ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net