ಕೊಲೆ ಯತ್ನ ಆರೋಪಿಗಳ ಬಂಧನ

crime
Published on

ಹುಬ್ಬಳ್ಳಿ: ಗ್ಯಾಂಗ್ ಸೇರಲು ನಿರಾಕರಿಸಿದ್ದರಿಂದ ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯ ಶಹರ ಠಾಣೆ ಪೊಲೀಸರು ಐವರನ್ನು ಬಂಧಿಸಿದ್ದಾರೆ.

ಸೆಟ್ಲಮೆಂಟ್‌ನ ಪ್ರಜ್ವಲ್ ನಿಟ್ಟೂರ, ದತ್ತಾತ್ರೇಯ ಮತ್ತಿಕಟ್ಟಿ, ಮಂಟೂರ ರಸ್ತೆಯ ಮಹ್ಮದ್ ಹಫೀಜ್ ಶೇಖ್, ಅಕೀಬ್ ಬಳ್ಳಾರಿ, ಗಂಗಾಧರ ನಗರದ ಬಾಲರಾಜ ಬಳ್ಳಾರಿ ಬಂಧಿತರು. ಕೃತ್ಯಕ್ಕೆ ಬಳಸಿದ್ದ ಸ್ಕೂಟಿ, ಒಂದು ಚಾಕು, ಮೊಬೈಲ್ ಫೋನ್ ಜಪ್ತಿ ಮಾಡಿ, ಆರೋಪಿಗಳನ್ನು ನ್ಯಾಯಾಲಯ ಸುಪರ್ದಿಗೆ ನೀಡಲಾಗಿದೆ.

ಏ. 9ರಂದು ಇಬ್ರಾಹಿಂ ಎಂಬುವವರನ್ನು ಗ್ಯಾಂಗ್ ಸೇರಿಕೊಳ್ಳುವಂತೆ ಈ ಐವರು ಒತ್ತಡ ಹೇರಿದ್ದರು. ಆದರೆ, ಇಬ್ರಾಹಿಂ ನಿರಾಕರಿಸಿದ್ದರಿಂದ ಆತನಿಗೆ ಚಾಕುವಿನಿಂದ ಇರಿದು ಕೊಲೆಯತ್ನ ಘಟನೆ ನಡೆದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net