ಕುದೂರು: ಹಳೇ ವೈಷಮ್ಯದಿಂದ ಪಟ್ಟಣದ ಆದಿತ್ಯ ಟಾಕೀಸ್ ಸಮೀಪ ಬುಧವಾರ ರಾತ್ರಿ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಮಾರಕಾಸಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಪ್ರಕರಣ ಕುದೂರು ಠಾಣೆಯಲ್ಲಿ ದಾಖಲಾಗಿದೆ.
ಪಟ್ಟಣದ ಸಾಧಿಕ್ ಅಲಿಯಾಸ್ ಚೋಟು ಹಲ್ಲೆಗೊಳಗಾದವ. ರಿಯಲ್ ಎಸ್ಟೇಟ್ನಲ್ಲಿ ತೊಡಗಿಸಿಕೊಂಡಿದ್ದ ಸಾಧಿಕ್ ಕೆಲ ವರ್ಷಗಳ ಹಿಂದೆ ಪಾರ್ಟ್ನರ್ ಹಂಚಿಬಸವನಪಾಳ್ಯದ ಆಲೀಮ್ನೊಂದಿಗೆ ಗಲಾಟೆ ಮಾಡಿಕೊಂಡಿದ್ದ. ಬುಧವಾರ ರಾತ್ರಿ ಸ್ನೇಹಿತನ ಜತೆ ಸಾಧಿಕ್ ಕುಳಿತ್ತಿದ್ದಾಗ ಕಾರಿನಲ್ಲಿ ಬಂದ ಆಲೀಮ್, ಆಸ್ೀ ಮತ್ತು ಇತರರು ಲಾಂಗು ಮತ್ತು ಚಾಕುವಿನಿಂದ ಏಕಾಏಕಿ ಹಲ್ಲೆ ಮಾಡಿದ್ದಾರೆ. ಈ ವೇಳೆ ಕೂಗಾಟದಿಂದ ಜನ ಸೇರುತ್ತಿದ್ದಂತೆ ಆಲಿಮ್ ಮತ್ತು ಗ್ಯಾಂಗ್ ಪರಾರಿಯಾಗಿದೆ. ತೀವ್ರ ಗಾಯಕೊಂಡ ಸಾಧಿಕ್ನನ್ನು ಸ್ಥಳಿಯರು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕುದೂರು ಪೊಲೀಸರು ಸ್ಥಳ ಪರಿಶೀಲಿಸಿದ್ದಾರೆ.