ನೀರಿನಲ್ಲಿ ವಿಷ ಬೆರೆಸಿ ಕೊಲೆಗೆ ಯತ್ನ

Crime Logo
Published on

ಮೈಸೂರು: ಸಾಲದ ಹಣ ಕೇಳಲು ಮನೆಗೆ ಬಂದ ಅಣ್ಣನ ಮಗನನ್ನು ಚಿಕ್ಕಪ್ಪ ಹಾಗೂ ಕುಟುಂಬಸ್ಥರು ನೀರಿನಲ್ಲಿ ವಿಷ ಬೆರೆಸಿ ಕೊಲೆಗೆ ಯತ್ನಿಸಿದ್ದ ಆರೋಪದಡಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳವಾಡಿಯ ಪ್ರಭಾಕರ್ ಎಂಬುವವರನ್ನು ಕೊಲೆಗೆ ಯತ್ನಿಸಿದ ಆರೋಪದಡಿ ಚಿಕ್ಕಪ್ಪ ಶ್ರೀನಿವಾಸ, ಪತ್ನಿ ಗೀತಾ, ಮಕ್ಕಳಾದ ಸಂಜು, ರಂಜು ಹಾಗೂ ಗೀತಾ ತಂದೆ ಕೃಷ್ಣಪ್ಪ ಮೇಲೆ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

ಪ್ರಭಾಕರ್ ಅವರು ತಮ್ಮ ಚಿಕ್ಕಪ್ಪ ಶ್ರೀನಿವಾಸ್ ಅವರಿಗೆ 16 ಲಕ್ಷ ರೂ. ಸಾಲ ನೀಡಿದ್ದರು. ಈ ಸಂಬಂಧ ಶ್ರೀನಿವಾಸ್ ಅವರಿಂದ ಪಡೆದಿದ್ದ ಚೆಕ್ ಬೌನ್ಸ್ ಆಗಿದೆ. ಈ ಬಗ್ಗೆ ಫೋನ್ ಮಾಡಿ ವಿಚಾರಿಸಿದ್ದಾಗ ಮನೆಗೆ ಬರುವಂತೆ ಶ್ರೀನಿವಾಸ್ ತಿಳಿಸಿದ್ದಾರೆ. ಮನೆಗೆ ಬಂದ ಪ್ರಭಾಕರ್‌ಗೆ ಹಣ ನೀಡುವುದಿಲ್ಲವೆಂದು ಹೇಳಿದ್ದಾರೆ. ಇದೇ ವೇಳೆ ಪ್ರಭಾಕರ್ ಕುಡಿಯಲು ನೀರು ಕೇಳಿದ್ದಾರೆ. ಗೀತಾ ಅವರು ಅಡುಗೆ ಮನೆಯಿಂದ ನೀರು ತಂದು ಕೊಟ್ಟಿದ್ದಾರೆ.

ನೀರು ಕುಡಿಯುತ್ತಿದ್ದಂತೆಯೇ ಪ್ರಭಾಕರ್‌ಗೆ ತಲೆ ಸುತ್ತಿದಂತಾಗಿದೆ. ಈ ಸಮಯದಲ್ಲಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಅಲ್ಲಿಂದ ಹೊರ ಬಂದ ಪ್ರಭಾಕರ್ ಸ್ವಲ್ಪದೂರ ತೆರಳಿದ ನಂತರ ಪ್ರಜ್ಞೆತಪ್ಪಿ ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net