ಕೊಲೆಗೆ ಯತ್ನ- 6 ಜನರಿಗೆ ಶಿಕ್ಷೆ

Court
Published on

ಧಾರವಾಡ: ಕೊಲೆಗೆ ಯತ್ನಿಸಿದ್ದ 6 ಅಪರಾಧಿಗಳಿಗೆ 8 ವರ್ಷ ಜೈಲು ಶಿಕ್ಷೆ, 14 ಸಾವಿರ ರೂ. ದಂಡ ವಿಧಿಸಿ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಪೂರ್ಣಿಮಾ ಪೈ ಅವರು ತೀರ್ಪು ಪ್ರಕಟಿಸಿದ್ದಾರೆ.

ಗಾಯಾಳುವಿಗೆ 50 ಸಾವಿರ ರೂ. ಪರಿಹಾರ ನೀಡಲು ಆದೇಶಿಸಿದ್ದಾರೆ. ನಗರದ ಮೆಹಬೂಬ, ದಾದಾ ಕಲಂದರ, ಖುರ್ಷಿದ ಅಹ್ಮದ, ಅಕೀಲ, ಅಬ್ದುಲ್ ಸಮೀರ, ಚಾಂದಸಾಬ ಶಿಕ್ಷೆಗೊಳಗಾದವರು. 2017ರ ಜೂನ್ 6ರಂದು ದೊಡಚಾಳದಲ್ಲಿ ಮೆಹಬೂಬಅಲಿ ದೊಡಮನಿ ಅವರ ಮೇಲೆ ಅಪರಾಧಿಗಳು ಕ್ಷುಲ್ಲಕ ಕಾರಣಕ್ಕೆ ಮಾರಣಾಂತಿಕ ಹಲ್ಲೆ ಮಾಡಿದ್ದರು. ದೂರು ನೀಡಿದ ಮಹಿಳೆ ಬಟ್ಟೆ ಹರಿದು ಗೌರವಕ್ಕೆ ಧಕ್ಕೆಯುಂಟು ಮಾಡಿ, ಜೀವ ಬೆದರಿಕೆ ಹಾಕಿದ್ದರು. ಈ ಬಗ್ಗೆ ಧಾರವಾಡ ಉಪನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಆರ್.ಎಚ್.ಭಾಗವಾನ ಮತ್ತು ಮೋತಿಲಾಲ ಪವಾರ ಅವರು ತನಿಖೆ ಕೈಕೊಂಡು, ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಸರ್ಕಾರದ ಪರವಾಗಿ ವಕೀಲ ಪ್ರಶಾಂತ ತೊರಗಲ್ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net