ಪ್ರೀತಿಸಿ ಮದುವೆಯಾದ ನವಜೋಡಿಯ ಕಿಡ್ನಾಪ್​ಗೆ ಯತ್ನ

Published on

ಆನೇಕಲ್ : ಪ್ರೀತಿಸಿ ಮದುವೆ ಆದ ನವ ಜೋಡಿಯನ್ನು ಯುವತಿಯ ಪಾಲಕರೇ ಕಿಡ್ನಾಪ್​ ಮಾಡಲು ಯತ್ನಿಸಿದ್ದು, ಅದೃಷ್ಟವಶಾತ್​ ಜೋಡಿ ತಪ್ಪಿಸಿಕೊಂಡಿದೆ.

ತಾಲೂಕಿನ ಬೊಮ್ಮಸಂದ್ರ& ಗುಡ್ಡಹಳ್ಳಿಯ ಸಂಜಯ್​ ಹಾಗೂ ದಿವ್ಯಾ 8 ವರ್ಷಗಳಿಂದ ಪ್ರೀತಿಸಿ, ಪಾಲಕರ ವಿರೋಧದ ಮಧ್ಯೆ 15ದಿನಗಳ ಹಿಂದೆ ಮದುವೆಯಾಗಿದ್ದರು. ಯುವಕ ಬೇರೆ ಜಾತಿಯವನೆಂದು ಕೋಪಗೊಂಡಿದ್ದ ಯುವತಿಯ ಪಾಲಕರು ನವಜೋಡಿಯನ್ನು ದೂರ ಮಾಡಲು ಶುಕ್ರವಾರ ರಾತ್ರಿ ಚಂದಾಪುರದ ಕಿತ್ತಗಾನಹಳ್ಳಿ ಗೇಟ್​ ಬಳಿ ಅಪಹರಿಸಲು ಯತ್ನಿಸಿದ್ದಾರೆ. ಆದರೆ ಅಪಹರಣಕ್ಕೆ ಬಂದವರಿಂದ ತಪ್ಪಿಸಿಕೊಂಡ ದಂಪತಿ ನೇರವಾಗಿ ಜಿಗಣಿ ಪೊಲೀಸ್​ ಠಾಣೆಗೆ ಹೋಗಿದ್ದಾರೆ. ಬಳಿಕ ಜಿಗಣಿ ಪೊಲೀಸರು ರಣೆ ನೀಡಿ ಟನೆ ನಡೆದಿದ್ದ ಸ್ಥಳ ವ್ಯಾಪ್ತಿಗೆ ಬರುವ ಸೂರ್ಯನಗರ ಠಾಣೆಗೆ ಕಳುಹಿಸಿದ್ದು, ಯುವತಿ ತಾಯಿ ಶೋಭ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.

ತಂದೆಗೆ ಹುಷಾರಿಲ್ಲ ಎಂದು ಮಗಳನ್ನು ಪುಸಲಾಯಿಸಿದ್ದ ತಾಯಿ : ರಾತ್ರಿ ಸುಮಾರು 10.30ರ ಸುಮಾರಿಗೆ ಹುಡುಗನ ಮನೆ ಬಳಿ ಬಂದ ದಿವ್ಯ ತಾಯಿ ಶೋಭಾ, ನಿಮ್ಮ ತಂದೆಗೆ ಹುಷಾರಿಲ್ಲ. ಸೀರಿಯಸ್​ ಆಗಿದ್ದಾರೆ. ಜಯದೇವ ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದು ಹೇಳಿ, ಪುತ್ರಿಯನ್ನು ಪುಸಲಾಯಿಸಿ ಕರೆದೊಯ್ಯಲು ಯತ್ನಿಸಿದ್ದಾರೆ. ಆದರೆ ದಿವ್ಯಾ, ನಿಮ್ಮ ಜತೆಯಲ್ಲಿಬರೋದಿಲ್ಲ. ಗಂಡನ ಜತೆಯಲ್ಲಿ ಬರುತ್ತೇನೆ ಎಂದು ಹೇಳಿ ತಾಯಿಯನ್ನು ಕಳುಹಿಸಿದ್ದಾಳೆ. ಬಳಿಕ ಗಂಡನ ಜತೆಯಲ್ಲಿ ದ್ವಿಚಕ್ರವಾಹನದಲ್ಲಿ ಆಸ್ಪತ್ರೆಗೆ ತೆರಳುವಾಗ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ದಿವ್ಯಾಳ ತಾಯಿ ಶೋಭಾ ಚಂದಾಪುರದ ಕಿತ್ತಗಾನಹಳ್ಳಿ ಗೇಟ್​ ಬಳಿ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆಸಿ, ಮಗಳನ್ನು ಕಾರಿನಲ್ಲಿ ಎಳೆದು ಹಾಕಿಕೊಳ್ಳಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ದಿವ್ಯಾ ಮತ್ತು ಸಂಜಯ್​ ಗಾಡಿಯನ್ನು ಅಲ್ಲೆ ಬಿಟ್ಟು ತಪ್ಪಿಸಿಕೊಂಡಿದ್ದು, ಬಳಿಕ ಸ್ನೇಹಿತರಿಗೆ ಕರೆ ಮಾಡಿ, ಸ್ಥಳಕ್ಕೆ ಬೈಕ್​ ತರಿಸಿಕೊಂಡು ಅಲ್ಲಿಂದ ಸಮೀಪದ ಜಿಗಣಿ ಪೊಲೀಸ್​ ಠಾಣೆಗೆ ಹೋಗಿದ್ದಾಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net