

ಮುದ್ದೇಬಿಹಾಳ: ಪ್ರೇಮ ಪ್ರಕರಣವೊಂದರ ಮಾತುಕತೆ ಸಂದರ್ಭ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿ, ಮಾರಣಾಂತಿಕ ಹಲ್ಲೆಗೆ ಯತ್ನಿಸಿದ ಪರಿಣಾಮ ಪ್ರೇಮಿ ಮತ್ತು ಪ್ರಿಯತಮೆ ಕುಟುಂಬದ ಮೂವರು ಸೇರಿ ನಾಲ್ವರಿಗೆ ಸುಟ್ಟ ಗಾಯಗಳಾಗಿವೆ.
ಇವರಲ್ಲಿ ಪ್ರೇಮಿಯೂ ಸೇರಿ ಮೂವರ ಸ್ಥಿತಿ ಗಂಭಿರವಾಗಿರುವ ಟನೆ ಪಟ್ಟಣದ ಪುರಸಭೆ ಎದುರಿಗೆ ಇರುವ ಪುರಸಭೆ ಮಾಜಿ ಸದಸ್ಯ ದಿ. ರಾವಜಪ್ಪ ಮದರಿ ಅವರಿಗೆ ಸೇರಿದ ಮನೆಯಲ್ಲಿ ಭಾನುವಾರ ಸಂಜೆ ನಡೆದಿದ್ದು, ಸೋಮವಾರ ಬೆಳಕಿಗೆ ಬಂದಿದೆ.
ಘಟನೆಯಲ್ಲಿ ಪ್ರೇಮಿ ಢವಳಗಿ ಗ್ರಾಮದ ರಾಹುಲ್ ರಾಮನಗೌಡ ಬಿರಾದಾರ ತೀವ್ರ ಹಲ್ಲೇಗಿಡಾಗಿದ್ದು ಶೇ.80 ರಷ್ಟು ಸುಟ್ಟ ಗಾಯಗಳಿಂದ ಜಿಲ್ಲಾಸ್ಪತ್ರೆಯ ಐಸಿಯುದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಪ್ರಿಯತಮೆ ಐಶ್ವರ್ಯ ಮದರಿ ಅವರ ಚಿಕ್ಕಪ್ಪ ಮುತ್ತು ಮದರಿ, ಚಿಕ್ಕಮ್ಮ ಸೀಮಾ ಮದರಿ, ಕೆಲಸಗಾರ ನೀಲಕಂಠ ಹರನಾಳ ಅವರಿಗೂ ಸುಟ್ಟ ಗಾಯಗಳಾಗಿವೆ.
ಇವರಲ್ಲಿ ಸೀಮಾ ಪ್ರಾಣಾಪಾಯದಿಂದ ಪಾರಾಗಿದ್ದು, ಮುತ್ತು ಮತ್ತು ನೀಲಕಂಠ ಅವರ ಸ್ಥಿತಿ ಗಂಭಿರವಾಗಿದ್ದು ಅವರೂ ಸಹಿತ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೊಳಗಾಗಿದ್ದಾರೆ.
ಘಟನೆ ಕುರಿತು ಪ್ರೇಮಿ ಮತ್ತು ಪ್ರಿಯತಮೆ ಹೀಗೆ ಎರಡೂ ಕಡೆಯವರಿಂದ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲಾಗಿದೆ.
ರಾಹುಲ್ ತಂದೆ ರಾಮನಗೌಡ ಬಿರಾದಾರ ಅವರು ಮದರಿ ಕುಟುಂಬದ ಮುತ್ತಣ್ಣ ಮದರಿ, ಅವರ ಪತ್ನಿ ಸೀಮಾ ಮದರಿ, ಐಶ್ವರ್ಯಳ ತಂದೆ ಅಪ್ಪು ಮದರಿ, ಕೆಲಸಗಾರ ನೀಲಕಂಠ ಹರನಾಳ ಮತ್ತು ಐಶ್ವರ್ಯ ಮದರಿ ವಿರುದ್ಧ ಪ್ರಕರಣ ದಾಖಲಿಸಿ ರಾಹುಲ್ನನ್ನು ಕೊಲೆ ಮಾಡುವ ಉದ್ದೇಶದಿಂದ ತಮ್ಮ ಮನೆಗೆ ಕರೆಸಿಕೊಂಡು ರಾಡ್ನಿಂದ ಹೊಡೆದು, ಪೆಟ್ರೂಲ್ ಉಗ್ಗಿ ಬೆಂಕಿ ಕಡ್ಡಿ ಕೊರೆದು ಬೆಂಕಿ ಹಚ್ಚಿ ಸುಟ್ಟು ಭಾರಿ ಗಾಯಪೆಟ್ಟು ಮಾಡಿದ್ದಾರೆ ಎಂದು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಏತನ್ಮಧ್ಯೆ ಮದರಿಯವರ ಕಡೆಯಿಂದಲೂ ಪ್ರಕರಣ ದಾಖಲಾಗಿದ್ದು ರಾಹಲನೇ ಪೆಟ್ರೋಲ್ ತಂದು ಐಶ್ವರ್ಯ ಮತ್ತು ತಮ್ಮ ಮೇಲೆ ಎರಚಿ ಕೊಲೆಗೆ ಯತ್ನಿಸಿದ್ದಾನೆ. ನಾವು ರಸಲು ಹೋದಾಗ ನಮಗೂ ಬೆಂಕಿ ತಗುಲಿದೆ ಎಂದು ದೂರಿದ್ದಾರೆ.
ಘಟನಾ ಸ್ಥಳಕ್ಕೆ ಬಸವನಬಾಗೇವಾಡಿ ಡಿಎಸ್ಪಿ ಬಾಳಪ್ಪ ನಂದಗಾಂವ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್ಐಗಳಾದ ಸಂಜಯ್ ತಿಪ್ಪರಡ್ಡಿ, ಎಸ್.ಆರ್. ನಾಯಕ ಅವರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ವಿಜಯಪುರದಿಂದ ಆಗಮಿಸಿದ್ದ ವಿಶೇಷ ತಂಡ ಟನಾ ಸ್ಥಳದಲ್ಲಿನ ಬೆರಳಚ್ಚು ಸೇರಿ ಹಲವು ಸಾಕ್ಷಗಳನ್ನು ಸಂಗ್ರಹಿಸಿದೆ. ಈ ಟನೆಯಲ್ಲಿ ಯಾರು ಪೆಟ್ರೋಲ್ ಎರಚಿ ಯಾರ ಹತ್ಯೆಗೆ ಯತ್ನಿಸಿದರು ಅನ್ನೋದು ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ.
ಘಟನೆ ಹಿನ್ನೆಲೆ : ಅಪ್ಪು ಮದರಿ ಅವರ ಪುತ್ರಿ& ಸದ್ಯ ಬಾಗಲಕೋಟೆಯ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಐಶ್ವರ್ಯ ಮದರಿ ಮತ್ತು ಢವಳಗಿಯ ತಾಪಂ ಮಾಜಿ ಸದಸ್ಯ ರಾಮನಗೌಡ ಬಿರಾದಾರ ಅವರ ಪುತ್ರ ರಾಹುಲ್ ಬಿರಾದಾರ ನಡುವೆ ಕಳೆದ 5&6 ವರ್ಷಗಳಿಂದ ಪ್ರೀತಿ, ಪ್ರೇಮ ಇತ್ತು. ಇಬ್ಬರೂ ಜೊತೆಯಾಗಿ ಬಹಳಷ್ಟು ಕಡೆ ಸುತ್ತಾಡಿದ್ದರು. ಇದು ಬಹಿರಂಗಗೊಂಡಿದ್ದರಿಂದ ಮನೆಯವರ ಮಾತಿಗೆ ಸ್ಪಂದಿಸಿ ಐಶ್ವರ್ಯ ರಾಹುಲ್ ಜೊತೆಗಿನ ಪ್ರೇಮ ಸಂಬಂಧ ಕಡಿದುಕೊಂಡಿದ್ದಳು. ಇದನ್ನು ಸಹಿಸದ ರಾಹುಲ್ ಮೇಲಿಂದ ಮೇಲೆ ಐಶ್ವರ್ಯ ಮತ್ತವಳ ಕುಟುಂಬದವರಿಗೆ ತೊಂದರೆ ಕೊಡುತ್ತಿದ್ದ. ಒಂದೆರಡು ಬಾರಿ ಎರಡೂ ಕುಟುಂಬದ ಹಿರಿಯರು ಮತ್ತು ಮಧ್ಯಸ್ಥಿಕೆದಾರರ ನಡುವೆ ಈ ವಿಚಾರ ಚರ್ಚೆಗೆ ಬಂದು ಬುದ್ಧಿವಾದ ಹೇಳಿದ್ದರು. ಆದರೂ ರಾಹುಲ್ ಏಕಮುಖ ಪ್ರೀತಿ ಮುಂದುವರಿಸಿದ್ದ. 2&3 ದಿನಗಳ ಹಿಂದೆ ಮದರಿ ಕುಟುಂಬದವರು ಐಶ್ವರ್ಯಳೊಂದಿಗೆ ಗದಗ ಜಿಲ್ಲೆ ಶಿರಹಟ್ಟಿಯಲ್ಲಿರುವ ಕೀರೇಶ್ವರ ಜಾತ್ರೆಗೆ ಹೋಗಿದ್ದನ್ನೇ ನೆಪ ಮಾಡಿಕೊಂಡ ರಾಹುಲ್ ಇದೇ ಕಾರಣಕ್ಕಾಗಿ ಐಶ್ವರ್ಯ ಪಾಲಕರ ಮೇಲೆ ಹರಿಹಾಯ್ದಿದ್ದ. ಇದೇ ಹಿನ್ನೆಲೆಯಲ್ಲಿ ನಡೆದಿದ್ದ ಮಾತಿನ ಚಕಮಕಿಯಿಂದಾಗಿ ಭಾನುವಾರ ಸಂಜೆ ರಾಹುಲ್ ಮದರಿಯವರ ಮನೆಗೆ ಒಬ್ಬನೇ ಬಂದಿದ್ದ. ಆಗ ಮಾತಿಗೆ ಮಾತು ಬೆಳೆದಿದೆ. ಈ ಸಂದರ್ಭ ಪೆಟ್ರೋಲ್ ಎರಚಿ, ಬೆಂಕಿ ಕಡ್ಡಿ ಗೀರಿದ್ದರಿಂದ ಬೆಂಕಿ ಹೊತ್ತಿಕೊಂಡು ರಾಹುಲ್, ಮುತ್ತು, ಸೀಮಾ, ನೀಲಕಂಠ ಇವರೆಲ್ಲರೂ ಗಾಯಗೊಂಡರು. ಮೈಪೂರ್ತಿ ಬೆಂದು ಹೋಗಿದ್ದ ರಾಹುಲ್ ಚೀರಾಡುತ್ತಲೇ ಮನೆಯಿಂದ ಹೊರಗೆ ಓಡಿ ಬಂದು ಪಟ್ಟಣದ ಒಂದೆರಡು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಯತ್ನಿಸಿದರೂ ಸೂಕ್ಷ$್ಮ ಪ್ರಕರಣವಾಗಿದ್ದರಿಂದ ಸ್ಪಂದನೆ ಸಿಕ್ಕಿರಲಿಲ್ಲ. ಕೊನೆಗೆ ರಾಹುಲ್ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ. ಇದೇ ವೇಳೆ ಸುಟ್ಟ ಗಾಯಗಳಾಗಿದ್ದ ಮುತ್ತು, ಸೀಮಾ, ನೀಲಕಂಠ ಅವರು ಕೂಡ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾದರು. ಎಲ್ಲರಿಗೂ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕಳಿಸಿಕೊಡಲಾಯಿತು. ಸದ್ಯ ಜಿಲ್ಲಾಸ್ಪತ್ರೆಯಲ್ಲಿರುವ ರಾಹುಲ್, ಮುತ್ತು, ನೀಲಕಂಠ ಅವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸೀಮಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ.