ವಕ್ಫ್ ಮಂಡಳಿ ಹೆಸರಿನಲ್ಲಿ ಅಸ್ತಿವಶಕ್ಕೆ ಯತ್ನ

04Koppa01
Published on

ಕೊಪ್ಪ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದುಗಳ ಹಕ್ಕುಗಳನ್ನು ಕಸಿದುಕೊಳ್ಳುವ ಯತ್ನ ಮಾಡಲಾಗುತ್ತದೆ ಎಂದು ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಪುಣ್ಯಪಾಲ್ ಆರೋಪಿಸಿದರು.

ಬಸ್‌ನಿಲ್ದಾಣದ ಆವರಣದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಭಾರತ ಕಂಡ ಕೆಟ್ಟ ಕಾಯ್ದೆ ವಕ್ಫ್ ಬೋರ್ಡ್ ಮಂಡಳಿ ಕಾಯ್ದೆ. ಈ ಮಂಡಳಿ ಒಮ್ಮೆ ಆಸ್ತಿ ಬಗ್ಗೆ ಘೋಷಣೆ ಮಾಡಿದರೆ ಸಿವಿಲ್ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸಲು ಸಾಧ್ಯವಾಗದಂತಹ ಕಾನೂನು ಜಾರಿಗೆ ತಂದಿರುವುದು ಕಾಂಗ್ರೆಸ್. ಹಿಂದುಗಳ ಆಸ್ತಿ, ಜಮೀನುಗಳನ್ನು ವಕ್ಫ್ ಮಂಡಳಿ ಹೆಸರಿನಲ್ಲಿ ಕಬಳಿಸಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಹಿಂದುಗಳನ್ನು ದೇಶದ ಎರಡನೇ ಪ್ರಜೆಯಾಗಿ ನೋಡುತ್ತಿದೆ ಎಂದು ದೂರಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್ ರಾಮಸ್ವಾಮಿ ಮಾತನಾಡಿ, ಹಿಂದು ಸ್ತಾನದಲ್ಲಿ ಹಿಂದುಗಳ ಭೂಮಿಗೆ ಭದ್ರತೆ ಇಲ್ಲದಂತಾಗಿದೆ. ಹಿಂದುಗಳು ಆತಂಕದಲ್ಲಿ ಜೀವನ ಸಾಗಿಸುವಂತಾಗಿದೆ. ವಕ್ಫ್ ಬೋರ್ಡ್‌ಗೆ ತಿದ್ದುಪಡಿ ತಂದು ರೈತರ ಜಮೀನು, ಮಠ, ದೇವಸ್ಥಾನಗಳನ್ನು ಉಳಿಸುವ ಕೆಲಸವನ್ನು ಸರ್ಕಾರ ಮಾಡಬೇಕಿದೆ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ದಿನೇಶ್ ಹೊಸೂರು ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ವೇಳೆಯಲ್ಲಿ ಹಗರಣ, ಜಾತಿ, ಧರ್ಮಗಳನ್ನು ಎತ್ತಿಕಟ್ಟುವಂತಹ ಕೆಲಸ ಮಾಡುತ್ತದೆ. ವಕ್ಫ್ ಮಂಡಳಿ ಮೂಲಕ ಹಿಂದುಗಳ ಭೂಮಿ ಕಬಳಿಸಲು ಮುಂದಾಗಿದೆ ಎಂದು ಆರೋಪಿಸಿದರು.

ಪಪಂ ಅಧ್ಯಕ್ಷೆ ಗಾಯತ್ರಿ ವಸಂತ್, ಡಾ. ಜಿ.ಎಸ್ ಮಹಾಬಲ್ ರಾವ್, ಹೆಚ್.ಆರ್ ಜಗದೀಶ್, ಶೃತಿ ರೋಹಿತ್, ಸುರೇಶ್ ಕಣಗಲ್, ಜಯಂತ್ ನಿಲುವಾಗಿಲು, ರೇವಂತ್ ಗೌಡ, ಲಲಿತ ನಾಗೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net