

ಮುಂಡಗೋಡ: ಪಟ್ಟಣದ ಸಂತೆ ಮಾರುಕಟ್ಟೆಯ ಬಳಿಯ ಮನೆಯ ಹಿತ್ತಲಲ್ಲಿ ಬೆಳೆಸಿದ್ದ ಶ್ರೀಗಂಧದ ಮರವನ್ನು ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಘಟನೆ ಶನಿವಾರ ಬೆಳಗಿನ ಜಾವ ನಡದಿದೆ.
ಪಟ್ಟಣದ ಸಂತೆ ಮಾರುಕಟ್ಟೆಯ ಬಳಿಯ ಎಸ್.ನಾರಾಯಣರಾವ್ ಎಂಬುವರ ಮನೆಯ ಹಿತ್ತಲ ಬಳಿಯ ಶ್ರೀಗಂಧ ಮರ ಕಳ್ಳತನಕ್ಕೆ ಯತ್ನಿಸಿ, ಮರ ಕಟಾವ ಮಾಡಿ ನೆಲಕ್ಕುರುಳಿಸಿ ತುಂಡುಗಳನ್ನಾಗಿಸಿ ಸಾಗಿಸಲು ವಿಫಲ ಯತ್ನ ನಡೆಸಿದ್ದಾರೆ. ಕಷ್ಟಪಟ್ಟು ಬೆಳೆಸಿದ್ದ ಮರವನ್ನು ಕಳ್ಳರು ಕತ್ತರಿಸಿ ಹಾಕಿದ್ದಾರೆ.
ಈ ಹಿಂದೆಯೂ ಪಟ್ಟಣದ ವಿವಿಧ ಭಾಗಗಳಲ್ಲಿ ಶ್ರೀಗಂಧದ ಮರಗಳನ್ನು ಕಳ್ಳತನ ಮಾಡಿ ಸಾಗಿಸಿದ್ದು ಇದೂವರೆಗೂ ಕಳ್ಳರ ಪತ್ತೆ ಹಚ್ಚುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ. ಶ್ರೀಗಂಧದ ಮರಗಳ್ಳತನವಾದಾಗ ಅಥವಾ ವಿಪಲ ಯತ್ನ ನಡೆದ ಪ್ರಕರಣಗಳನ್ನು ಪೊಲೀಸ್ ಇಲಾಖೆಗೆ ನೀಡಿದರೆ ಕಳ್ಳರನ್ನು ಪತ್ತೆ ಹಚ್ಚಲು ಅನುಕೂಲವಾಗುತ್ತದೆ ಎಂಬುದು ಸಾರ್ವಜನಿಕರ ಮಾತು.