ಉಡ ಮಾರಾಟಕ್ಕೆ ಯತ್ನ : ಅರಣ್ಯ ಸಂಚಾರಿ ದಳದಿಂದ ಆರೋಪಿಯ ಬಂಧನ

Attempt to sell Uda Accused arrested by Forest Traffic Division
Published on

ಮೈಸೂರು: ಉಡವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯೊಬ್ಬನನ್ನು ಹುಣಸೂರು ತಾಲೂಕಿನ ಚಿಕ್ಕಹುಣಸೂರು ಗ್ರಾಮದಲ್ಲಿ ಆಜಾದ್ ನಗರದ ಬಳಿ ಬುಧವಾರ ಅರಣ್ಯ ಸಂಚಾರಿ ದಳ ಪೊಲೀಸರು ಬಂಧಿಸಿ ಉಡವನ್ನು ರಕ್ಷಿಸಿದ್ದಾರೆ.

ಒಂದನೇ ಪಕ್ಷಿರಾಜಪುರ ನಿವಾಸಿ ದೇವಕಾರಿ ಬಂಧಿತ ಆರೋಪಿ. ಈತ ಹುಣಸೂರು-ಎಚ್.ಡಿ. ಕೋಟೆ ರಸ್ತೆಯ ಆಜಾದ್ ನಗರದ ಅಂಗಡಿಯೊಂದರಲ್ಲಿ ಉಡವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ. ಕಾರ್ಯಾಚರಣೆಯಲ್ಲಿ ಡಿಸಿಎಫ್ ಚಂದ್ರಶೇಖರಗೌಡ ಸಿ. ಪಾಟಿಲ್, ಎಸಿಎಫ್ ಜಿ.ರುದ್ರೇಶ್, ಆರ್‌ಎಫ್‌ಒ ಕೆ. ಸುರೇಂದ್ರ, ಡಿಆರ್‌ಎಫ್‌ಒ ಸಿ.ಎಸ್.ಮೋಹನ್, ವಿ.ಮುತ್ತುರಾಜ್, ಬೀಟ್ ಫಾರೆಸ್ಟರ್ ಇಮಾಮ್‌ಸಾಬ್ ಸಾಗರಿ, ಎಚ್.ಆರ್.ವೆಂಕಟೇಶ್, ತಿರುಪತಿ ಪೂಜಾರ್ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net