

ಹೊಸಕೋಟೆ: ರಾಜ್ಯದಲ್ಲಿ ಕೂಲಿ ಕಾರ್ಮಿಕರು ರೈತರು ಹಾಗೂ ದುಡಿಯುವ ವರ್ಗಕ್ಕೆ ರಾಜ್ಯದಲ್ಲಿ ನ್ಯಾಯ ಒದಗಿಸುವ ಕಾರ್ಯಕ್ಕೆ ಪ್ರಾಮಾಣಿಕವಾಗಿ ಕೈಜೋಡಿಸುವುದಾಗಿ ಕರ್ನಾಟಕ ಕಾರ್ಮಿಕ ವೇದಿಕೆ ಕಾರ್ಯಾಧ್ಯಕ್ಷ ಎಚ್.ಟಿ. ವೆಂಕಟೇಶ್ ತಿಳಿಸಿದರು.
ಬೆಂಗಳೂರಿನ ರಾಜಾಜಿನಗರದ ಖಾಸಗಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಕಾರ್ಮಿಕ ವೇದಿಕೆ ನೂತನ ಪದಾಧಿಕಾರಿಗಳ ನೇಮಕ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯಾದ್ಯಂತ ಪ್ರವಾಸ ಮಾಡಿ ಸಂಘಟನೆ ಬಲಪಡಿಸುವ ಜತೆಗೆ ದುಡಿಯುವ ವರ್ಗಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಪ್ರತಿ ತಾಲೂಕಿನಲ್ಲಿ ಸಂಘಟನೆಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿ ಪ್ರತಿಯೊಬ್ಬರಿಗೂ ಜವಾಬ್ದಾರಿ ನೀಡಿ ಸಂಘಟನೆ ಆಶಯ ಪಾಲನೆ ಮಾಡಲಾಗುವುದು ಎಂದರು.
ಸಂಘಟನೆ ಅಧ್ಯಕ್ಷ ಡಾ.ರವಿ ಶಟ್ಟಿ ಬೈಂದೂರ್ ಮಾತನಾಡಿ, ಸಂಘಟನೆಯನ್ನು ದಿವಂಗತ ಚಳವಳಿ ನಾಗೇಶ್ ಸಂಸ್ಥಾಪನೆಗೊಳಿಸಿ ರಾಜ್ಯದಲ್ಲಿ ಕನ್ನಡ ನೆಲ ಜಲ ಹಾಗೂ ಕಾರ್ಮಿಕರ ಪರ ಧ್ವನಿ ಎತ್ತಿದ ಮೂಲಪುರುಷರಾಗಿದ್ದು, ಅವರ ಮಾರ್ಗದರ್ಶನದಲ್ಲಿ ಸಂಘಟನೆ ರಾಜ್ಯದ 224 ವಿಧಾನ ಸಭಾ ಕ್ಷೇತ್ರದಲ್ಲಿ ಸಂಘಟನೆಗೊಳ್ಳುತ್ತಿದು,್ದ ದುಡಿಯುವ ವರ್ಗದ ಪರವಾಗಿ ಕೆಲಸ ಮಾಡುತ್ತಿದೆ ಎಂದರು.
ಮುಂದಿನ ದಿನಗಳಲ್ಲಿ ಸರೋಜಿನಿ ಮಹಿಷಿ ವರದಿ ಜಾರಿಗೆ ಹೆಚ್ಚಿನ ಒತ್ತು ನೀಡಿ, ರಾಜ್ಯದೆಲ್ಲೆಡೆ ಚಳವಳಿ ನೆಡೆಸಲಾಗುವುದು ಎಂದರು.
ನ್ಯಾಯ ಸಮ್ಮತವಾಗಿ ಡುಡಿಯುವ ಜನರಿಗೆ ಸೂಕ್ತ ಭದ್ರತೆ ಇಲ್ಲದಾಗಿದೆ. ಕರೊನಾದಿಂದ ಲಕ್ಷಾಂತರ ಕಾರ್ಮಿಕರು ಕೆಲಸ ಕಾರ್ಯವಿಲ್ಲದೆ ಜೀವನ ನೆಡೆಸುವುದೇ ಕಷ್ಟವಾಗಿದ್ದು, ಸರ್ಕಾರ ಸಮರ್ಪಕವಾಗಿ ಜವಾಬ್ದಾರಿ ನಿಭಾಯಿಸುವಲ್ಲಿ ವಿಲವಾಗಿದೆ ಎಂದರು.
ಹೊಸಕೋಟೆ ನಗರ ಅಧ್ಯಕ್ಷರಾಗಿ ರಾಮಚಂದ್ರ, ಉಪಾಧ್ಯಕ್ಷ ಎಚ್.ಆರ್. ಪ್ರಭಾಕರ್ ಹಾಗೂ ಗೌರವಾಧ್ಯಕ್ಷ ಗಂಗಾಧರ್, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಪ್ರೇಮ ಅವರಿಗೆ ಕರ್ನಾಟಕ ಕಾರ್ಮಿಕ ವೇದಿಕೆ ಅಧ್ಯಕ್ಷ ಡಾ. ರವಿ ಶಟ್ಟಿ ಬೈಂದೂರ್ ನೇಮಕಾತಿ ಪತ್ರ ನೀಡಿದರು.
ವೇದಿಕೆ ರಾಜ್ಯ ಕಾರ್ಯದರ್ಶಿ ಅನಂತು, ಅಖಿಲ ಕರ್ನಾಟಕ ಮಹಿಳಾ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಎನ್. ಶ್ರೀಲಕ್ಷ್ಮೀ, ಮುಖಂಡರಾದ ಪೂಜಾಶಟ್ಟಿ, ಅಖಿಲ ಕುಮಾರ್ ಹಾಜರಿದ್ದರು.