

ಮುಂಡರಗಿ: ಪಟ್ಟಣದಲ್ಲಿ ಆರ್ಯವೈಶ್ಯ ಕೋ ಆಪರೇಟಿವ್ ಬ್ಯಾಂಕ್ ಶಾಖೆ ತೆರೆಯಲು ಪ್ರಯತ್ನಿಸಲಾಗುತ್ತದೆ. ಜತೆಗೆ ಬ್ಯಾಂಕ್‌ನಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತದೆ ಎಂದು ಹುಬ್ಬಳ್ಳಿಯ ಆರ್ಯವೈಶ್ಯ ಕೋ ಆಪರೇಟಿವ್ ಬ್ಯಾಂಕ್ ನೂತನ ಅಧ್ಯಕ್ಷ ವಿಷ್ಣು ಸವಣೂರ ಹೇಳಿದರು.
ಪಟ್ಟಣದ ಶ್ರೀ ನಗರೇಶ್ವರ ದೇವಸ್ಥಾನದಲ್ಲಿ ತಾಲೂಕು ಆರ್ಯವೈಶ್ಯ ಸಮಾಜದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಆರ್ಯವೈಶ್ಯ ಸಮಾಜದ ಅಧ್ಯಕ್ಷ ಪ್ರಕಾಶ ಕಾಲವಾಡ, ಸಂಜೀವ ಇಂಗಳಳ್ಳಿ ಮಾತನಾಡಿದರು. ಆರ್ಯವೈಶ್ಯ ಬ್ಯಾಂಕ್‌ನ ಅಧ್ಯಕ್ಷ ವಿಷ್ಣು ಸವಣೂರ, ಉಪಾಧ್ಯಕ್ಷ ಬದ್ರಿನಾಥ ಗೂಜಮಾಗಡಿ, ನಿರ್ದೇಶಕರಾದ ಸಂಜೀವ ಇಂಗಳಳ್ಳಿ, ವೆಂಕಟೇಶ ಮುಂಡರಗಿ, ಸಂಕೇತ ಹೆಬಸೂರು, ಬದ್ರಿನಾರಾಯಣ ಹೆಗ್ಗಡಾಳ, ಅಶೋಕ ಹೆಬಸೂರು, ವೆಂಕಟೇಶ ಆನೆಗುಂದಿ ಅವರನ್ನು ಸನ್ಮಾನಿಸಲಾಯಿತು.
ಅಧಿಕ ಮಾಸದ ನಿಮಿತ್ತ ಕನ್ನಿಕಾಪರಮೇಶ್ವರಿ ದೇವಿಗೆ ಉಡಿ ತುಂಬವ ಕಾರ್ಯಕ್ರಮ ಹಾಗೂ ಶ್ರೀಕೃಷ್ಣ ಪೂಜೆ ನೆರವೇರಿಸಲಾಯಿತು. ಗಂಗಣ್ಣ ಸೊರಟೂರು, ಜಗನ್ನಾಥ ಅಳವಂಡಿ, ಹನುಮಂತಪ್ಪ ಹೆಗ್ಗಡಾಳ, ಈರಣ್ಣ ಅಳವಂಡಿ, ರಾಘವೇಂದ್ರ ಚಿನ್ನಿ, ನಾರಾಯಣ ಇಲ್ಲೂರ, ಮಂಜು ಗಂಗಾವತಿ, ಗೋವಿಂದರಾಜ ಹೆಗ್ಗಡಾಳ, ಲಕ್ಷ್ಮಣ ಇಲ್ಲೂರ, ಅಶೋಕ ಹೇಮಾದ್ರಿ, ಮಂಜುನಾಥ ಗುಡ್ಡದ, ನಾಗರಾಜ ಹೆಗ್ಗಡಾಳ, ಪ್ರಶಾಂತ ತಾವರಗೇರಿ, ಶಮಂತಕಮಣಿ ಇಲ್ಲೂರ, ಕಾಮಾಕ್ಷಿ ಹೆಗ್ಗಡಾಳ, ರೇಣುಕಾ ಅಳವಂಡಿ, ಸ್ವಾತಿ ಅಳವಂಡಿ, ಉಷಾರಾಣಿ ಹೆಗ್ಗಡಾಳ, ರೇಣುಕಾ ಕೊಂಬಳಿ, ಪೂಜಾ ಹೆಗ್ಗಡಾಳ, ವಿನೋದಾ ತಾವರಗೇರಿ, ಸುನಂದಾ ತಾವರಗೇರಿ, ಲಕ್ಷ್ಮೀ ಕಾಲವಾಡ, ಸುಮಾ ಅಳವಂಡಿ ಇದ್ದರು. ಬದ್ರಿನಾರಾಯಣ ಹೆಗ್ಗಡಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಸವಿ ಅಳವಂಡಿ ಪ್ರಾರ್ಥಿಸಿದರು. ವಿನೂತಾ ಜೋಶಿ ಕಾರ್ಯಕ್ರಮ ನಿರೂಪಿಸಿದರು.