

ಕಲಬುರಗಿ: ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ೧೪ ವರ್ಷದ ಬಾಲಕಿಯನ್ನು ಅಪಹರಿಸಿ, ಆಕೆಯ ಕತ್ತುಕೊಯ್ದು ಕೊಲೆಗೆ ಯತ್ನಿಸಿದ ಘಟನೆ ನಗರದ ಹೊರವಲಯದ ಆಳಂದ ರಸ್ತೆಯಲ್ಲಿನ ನಿರ್ಜನ ಪ್ರದೇಶದಲ್ಲಿ ನಡೆದಿದೆ. ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದ ಸೂರ್ಯಕಾಂತ ಕೊಲಕುಂದಿ ಅವರ ಪುತ್ರಿ ಐಶ್ವರ್ಯ (೧೪) ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿ. ಹಲಕರ್ಟಿ ಗ್ರಾಮದ ಮರಿಲಿಂಗಪ್ಪ ಈರಪ್ಪ ಛತ್ರಿಕಿ, ಈರಪ್ಪ ಛತ್ರಿಕಿ, ಬಸಪ್ಪ ಛತ್ರಿಕಿ, ರಾಜಾ ಛತ್ರಿಕಿ, ಅನಸಮ್ಮ ಈರಪ್ಪ, ಗಂಗಮ್ಮ ಮಳಖೇಡ, ಕಾವೇರಿ, ಶಿವಪ್ಪ ತಳವಾರ ಹಾಗೂ ಸಂತೋಷ ಛತ್ರಿಕಿ ವಿರುದ್ಧ ಪ್ರಕರಣ ದಾಖಲಾಗಿದೆ.
ಬಾಲಕಿ ಐಶ್ವರ್ಯ ಅಣ್ಣ ಭೀಮಾಶಂಕರನು ಈರಪ್ಪನ ಮಗಳನ್ನು ಕರೆದೊಯ್ದು ಎ¯್ಲೆÆÃ ಬಿಟ್ಟಿz್ದÁನೆ ಎಂದು ಈರಪ್ಪನ ಕುಟುಂಬಸ್ಥರು ತಪ್ಪಾಗಿ ತಿಳಿದುಕೊಂಡರು. ಈ ಬಗ್ಗೆ ಎರಡೂ ಕುಟುಂಬದ ಮಧ್ಯೆ ಜಗಳವಾಗಿತ್ತು. ಅದೇ ದ್ವೇಷದಿಂದ ಐಶ್ವರ್ಯಳನ್ನು ಅಪಹರಿಸಿ ಕೊಲೆಗೆ ಯತ್ನಿಸಿz್ದÁರೆ ಎಂದು ಸೂರ್ಯಕಾಂತ ದೂರು ನೀಡಿz್ದÁರೆ. ಮೇ ೯ರ ಮಧ್ಯಾಹ್ನ ಐಶ್ವರ್ಯ ಅದೇ ಗ್ರಾಮದ ಅತ್ತೆ ಮನೆಗೆ ಹೋಗುತ್ತಿದ್ದಳು. ಸಂಬAಧಿ ಮರಿಲಿಂಗಪ್ಪ ಅವರು ಐಶ್ವರ್ಯಗೆ ಜೀವಬೆದರಿಕೆ ಹಾಕಿ, ಬೈಕ್ ಮೇಲೆ ಕೂರಿಸಿಕೊಂಡು ಕಲಬುರಗಿಯ ಆಳಂದ ರಸ್ತೆಗೆ ಕರೆದೊಯ್ದ. ನಿರ್ಜನ ಪ್ರದೇಶದಲ್ಲಿ ಚಾಕುವಿನಿಂದ ಕತ್ತು ಕೊಯ್ದು ಪರಾರಿಯಾದ. ಕೆಲ ಹೊತ್ತಿನ ಬಳಿಕ ಎಚ್ಚರವಾಗಿ ಎದ್ದ ಐಶ್ವರ್ಯ, ರಸ್ತೆಯ ಬದಿಗೆ ಬಂದಳು. ಸಂಚಾರಿಯೊಬ್ಬರು ಆಕೆಯ ಪೋಷಕರಿಗೆ ಫೋನ್ ಕರೆ ಮಾಡಿ ಮಾಹಿತಿ ನೀಡಿದ್ದ. ಬಳಿಕ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದರು ಎಂದು ಪೊಲೀಸರು ತಿಳಿಸಿz್ದÁರೆ. ಸಬ್‌ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.