ಪತ್ನಿಯ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಲು ಯತ್ನ

crime
Published on

ಸಿಂಧನೂರು: ತಾಲೂಕಿನ ಸಿಎಸ್‌ಎಫ್ ಕ್ಯಾಂಪ್-2 ರಲ್ಲಿ ಪತ್ನಿಯ ಕೊಲೆ ಮಾಡಿ, ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ ಪತಿ ಸೇರಿ ಮೂವರ ವಿರುದ್ಧ ಬಳಗಾನೂರು ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ.

ಮಾಬಮ್ಮ ಹುಸೇನಸಾಬ್ (26) ಮೃತೆ. ನಾಲ್ಕು ವರ್ಷಗಳ ಹಿಂದೆ ಚಿರನಾಳ ಗ್ರಾಮದ ಮಾಬಮ್ಮ ಹಾಗೂ ಹುನುಗುಂದದ ಹುಸೇನಸಾಬ್ ಮದುವೆಯಾಗಿದ್ದರು. ಮದುವೆ ಸಂದರ್ಭ ಎರಡು ಲಕ್ಷ ರೂ. ವರದಕ್ಷಿಣೆ ನೀಡಲಾಗಿತ್ತು.

ಕೆಲ ವರ್ಷಗಳಿಂದ ಹುಸೇನಸಾಬ್ ಕುಟುಂಬ ಸಿಎಸ್‌ಎಫ್-2 ಕ್ಯಾಂಪ್‌ನಲ್ಲಿ ವಾಸಿಸುತ್ತಿದ್ದು, ನಿರಂತರವಾಗಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಶುಕ್ರವಾರ ಮಾಬಮ್ಮ ಅವರನ್ನು ಕೊಲೆ ಮಾಡಿ, ಅದನ್ನು ಆತ್ಮಹತ್ಯೆಯೆಂದು ಬಿಂಬಿಸಲು ಮುಂದಾಗಿದ್ದರು.

ಮೃತಳ ಕುಟುಂಬಸ್ಥರ ದೂರಿನ ಮೇರೆಗೆ ಪತಿ ಹುಸೇನಸಾಬ್, ಮಾವ ನಬೀಸಾಬ್ ಹಾಗೂ ಮೈದುನ ಹಸೇನಸಾಬ್ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮೂವರ ಬಂಧನಕ್ಕೆ ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net