

ಮೈಸೂರು: ಭಾರತ ಭೂಪಟದಿಂದ ಮಣಿಪುರ ಸೇರಿದಂತೆ ಹಲವು ಪ್ರದೇಶಗಳನ್ನು ಬೇರ್ಪಡಿಸುವ ಸಂಚು ನಡೆಯುತ್ತಿದೆ ಎಂದು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಕಳವಳ ವ್ಯಕ್ತಪಡಿಸಿದರು.
ವೀರ ಸಾವರ್ಕರ್ ಯುವ ಬಳಗದ ವತಿಯಿಂದ ನಗರದ ಜೆಎಲ್‌ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂ ಡಿದ್ದ ‘ಮಣಿಪುರ ಹಿಂಸಾಚಾರ ಕುರಿತು ನೈಜ ವಿಚಾರ ಅನಾವರಣ’ ಕಾರ್ಯಕ್ರಮದಲ್ಲಿ ಮಾತನಾಡಿ, ಮಣಿಪುರದ ಮೈತೈ ಸಮುದಾಯ ಅಲ್ಲಿನ ಮೂಲನಿವಾಸಿಗಳಾಗಿದ್ದು, ಕುಕಿ ಸಮುದಾಯ ಬರ್ಮಾದಿಂದ ವಲಸೆ ಬಂದವರು. ಈ ಬಗ್ಗೆ ಅಧಿಕೃತ ದಾಖಲೆಗಳು ಇದೆ. ಮತಾಂತರ ಹಾಗೂ ವಲಸೆಯಿಂದ ಮಣಿಪುರಕ್ಕೆ ಬಹುದೊಡ್ಡ ಸಮಸ್ಯೆ ಎದುರಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮೈತೈ ಮೂಲ ನಿವಾಸಿಗಳಾಗಿದ್ದರೂ ಅವರು ಮಣಿಪುರದ ಶೇ.10 ರಷ್ಟು ಭೂ ಭಾಗದಲ್ಲಿ ಮಾತ್ರ ನೆಲೆಸಿದ್ದಾರೆ. ಅವರು ತಮ್ಮ ನೆಲೆಯನ್ನು ಕಳೆದುಕೊಳ್ಳಲು ಕಾರಣವೇನು? ಈ ಹಿಂದೆ ಎಸ್ಟಿ ಪಟ್ಟಿಯಲ್ಲಿದ್ದ ಮೈತೈ ಸಮುದಾಯವನ್ನು ಏತಕ್ಕೆ ಎಸ್ಟಿ ಪಟ್ಟಿಯಿಂದ ಕೈ ಬಿಡಲಾಯಿ ತು ಎಂಬುದನ್ನು ಅವಲೋಕನ ಮಾಡಬೇಕಾಗಿದೆ ಎಂದರು.
ನಿವೃತ್ತ ಯೋಧ ಎಂ.ಎಸ್. ಸುಬ್ರಮಣಿ, ನಗರ ಪಾಲಿಕೆ ಮಾಜಿ ಸದಸ್ಯ ಪ್ರಶಾಂತ್ ಗೌಡ, ವೀರ ಸಾವರ್ಕರ್ ಯುವ ಬಳಗದ ಅಧ್ಯಕ್ಷ ರಾಕೇಶ್ ಭಟ್ ಹಾಗೂ ಇತರರು ಇದ್ದರು.